ಕಲಾಯೋಜನಕೌಶಿಕ- ಶ್ರೀ ಕೆ.ಎನ್ ಅನಂತರಾಮಯ್ಯ

Posted On: Wednesday, February 7th, 2018
1 Star2 Stars3 Stars4 Stars5 Stars (No Ratings Yet)
Loading...

Author: Editor

K N Anantaramaiah

ಕಲಾಯೋಜನಕೌಶಿಕ – ಮೊದಲ ಸನ್ಮಾನವನ್ನು ಸ್ವೀಕರಿಸುವ ಮಹನೀಯರು ಅನವರತವೂ ಅವಿಶ್ರಾಂತವಾಗಿ ಆಪ್ತವಾಗಿ ಕಲಾಪ್ರದರ್ಶನಗಳನ್ನು ಆಯೋಜಿಸುತ್ತಲೇ ಆದರಣೀಯರಾದ ಶ್ರೀ ಕೆ.ಎನ್ ಅನಂತರಾಮಯ್ಯ. ಕಿರಿಯ-ಹಿರಿಯ ಕಲಾವಿದರಿಗೆಲ್ಲಾ ಆಶ್ರಯಾಶ್ವತ್ಥರು. ೮೦ನೇ ವಯಸ್ಸಿನ ಗಡಿ ದಾಟಿಯೂ ಬಾಲೋತ್ಸಾಹದಲ್ಲಿ, ತರುಣೌತ್ಸುಕ್ಯದಲ್ಲಿ, ವೃದ್ಧಾನುಭವಸಮೃದ್ಧಿಯಲ್ಲಿ ಕ್ರಿಯಾಶೀಲರಾಗಿರುವ ಆಯೋಜಕರು. ಬಿಟಿ‌ಎಂ ಕಲ್ಚರಲ್ ಅಸೋಶಿಯೇಶನ್ ಸಂಸ್ಥೆಯ ನೆರಳಲ್ಲಿ ಅನಂತರಾಮಯ್ಯ ಏರ್ಪಡಿಸಿದ/ಏರ್ಪಡಿಸುತ್ತಿರುವ ವ್ಯವಸ್ಥಿತ ಗಾನನಾಟ್ಯಪ್ರದರ್ಶನಗಳೂ, ಅದರಿಂದ ಧನ್ಯರಾದ ಮಾನ್ಯರಾದ ಕಲಾವಿದರೂ, ಕಲಾಸ್ವಾದದಿಂದ ಸಂತೃಪ್ತರಾದ ಸಹೃದಯರೂ ಅಸಂಖ್ಯ.

Leave a Reply

*

code