ಸಂಶೋಧನಾ ಸಂಗ್ರಹ ವೇದಿಕೆ

Posted On: Tuesday, May 31st, 2011
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

Noopura Bhramari, a dance magazine, is planning to bring out an information book of dance researchers. Those who have completed/ongoing Ph.D, fellowship, M. Phil or dissertations under different universities related to dance can send their resume along with relevant details to the Editor, Noopura Bhramari, Sannidhya Printers and publishers, Dechoor Road, near Ashwatthakatte, Madikeri, Kodagu 571201, or in e-mail editor@noopurabhramari.com. For details, call 9964140927.

Details should consist following information : Name, research topic, enrolled year, Unversities/college/ organisation, Guide, Synopsis of the research, Other research taken/took, experience in research, published/unpublished details, Copy of Published research ( if it is possible), resume of researcher, objectives and methodolgy of research. Dance research may be related with various ways. e.g: history, folk, sculpture, music, painting, contemporary, social aspect etc.

This is purely for public interest. No hidden agenda.Please co-operate.

ಕಲೆ ಮತ್ತು ನೃತ್ಯಕ್ಕೆ ಮೀಸಲಾದ ಈಗಾಗಲೇ ವಿದ್ವಜ್ಜನರ ವಲಯದಲ್ಲಿ ಹೆಸರಾಗಿರುವ ನೂಪುರ ಭ್ರಮರಿ ಪತ್ರಿಕೆಯು ಕರ್ನಾಟಕದಲ್ಲಿ ಈಗಾಗಲೇ ನೃತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಂಶೋಧಕರ ಕುರಿತಾದ ಮಾಹಿತಿಯನ್ನು ಸಂಕಲಿಸಿ ಕ್ರೋಢೀಕರಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಈಗಾಗಲೇ ನೃತ್ಯದಲ್ಲಿ ಆದ/ಆಗುತ್ತಿರುವ ಪಿ‌ಎಚ್‌ಡಿ/ಎಂಫಿಲ್ ಪ್ರಬಂಧಗಳು ಮತ್ತು ಪದವಿ ಪ್ರೌಢ ಪ್ರಬಂಧಗಳ ರಚನಾಕಾರರು/ಸಂಶೋಧಕರ ಕುರಿತು ಪತ್ರಿಕೆಯು ಅಂಕಣ ಮತ್ತು ಸಾವಕಾಶವಾಗಿ ಪುಸ್ತಕರೂಪದಲ್ಲಿ ಸಂಕಲನವನ್ನು ಹೊರತರಲಿದೆ. ಈ ಸಂಕಲನರೂಪವು ನೃತ್ಯ ಕ್ಷೇತ್ರದಲ್ಲಿ ಆಗಬೇಕಾದ ಸಂಶೋಧನೆಗಳ ಹಿನ್ನಲೆಯನ್ನು ಗಮನಿಸಿ ಕಲಾಸಕ್ತರ ಹಿತಾಸಕ್ತಿಯ ನಿಟ್ಟಿನಲ್ಲಿ ಆಗಲಿದ್ದು; ಶೈಕ್ಷಣಿಕ ವಲಯಕ್ಕೆ ಮತ್ತು ಸಂಶೋಧನಾಸಕ್ತ ಕಾರ್ಯಗಳ ಮಾಹಿತಿ ಸಂಗ್ರಹಣೆಗೆ ಸಹಕಾರಿಯಾಗಲಿದೆ.

ಆದ್ದರಿಂದ ಕರ್ನಾಟಕದಲ್ಲಿ ನೃತ್ಯ ಮತ್ತು ಅದಕ್ಕೆ ಪೂರಕವಾಗಿ ಇತಿಹಾಸ, ವಾಸ್ತುಶಿಲ್ಪ, ಸಂಗೀತ, ಶಿಲ್ಪಕಲೆ, ದ್ಶಶ್ಯಕಲೆ, ಜಾನಪದ, ಸಮಕಾಲೀನ, ಸಾಮಾಜಿಕ ದೃಷ್ಟಿಕೋನದಲ್ಲಿ ಆಗಿರುವ/ಆಗುತ್ತಿರುವ ಪ್ರಕಟಿತ/ಅಪ್ರಕಟಿತ, ಕನ್ನಡ/ಇಂಗ್ಲೀಷ್‌ನಲ್ಲಿ ಹೊರಬಂದ ಪಿ‌ಎಚ್‌ಡಿ/ಎಂಫಿಲ್ ಪ್ರಬಂಧ ಅಥವಾ ಪದವಿ ಪ್ರೌಢ ಪ್ರಬಂಧಗಳ (ಎಂ.ಎ ಡಸರ್ಟೇಶನ್, ಫೆಲೋಶಿಫ್ ಪ್ರಬಂಧಗಳು) ರಚನಾಕಾರರು, ಪದವಿಗೆ ಸಲ್ಲಿಸಲಾದ ವಿಷಯ ಮತ್ತು ಅದರ ಕುರಿತು ಸಂಶೋಧನಾ ಉದ್ದೇಶ ಮತ್ತು ಅಧ್ಯಯನ ವಿಧಾನವನ್ನೊಳಗೊಂಡ ಸಾರಲೇಖ ಹಾಗೂ ವಿಶ್ವವಿದ್ಯಾನಿಲಯ ಅಥವಾ ಕಾಲೇಜು, ಮಾರ್ಗದರ್ಶಕರು, ಸಲ್ಲಿಸಲಾದ ವರ್ಷ, ಸಂಶೋಧನೆಯು ಪ್ರಕಟಿತ ಕೃತಿಯಾಗಿದ್ದಲ್ಲಿ ಅದರ ಕುರಿತು ವಿವರ, ಪ್ರಕಟಿತ ಕೃತಿಯನ್ನು ಕಳಿಸುವ ಅನುಕೂಲವಿದ್ದಲ್ಲಿ ಒಂದು ಸಾದರಪ್ರತಿ, ಸಂಶೋಧನೆಗೆ ಸಂಬಂಧಿಸಿದ ಅನುಭವ, ಫುಲ್ ಸ್ಕೇಪ್ ೨ ಪುಟ ಮೀರದಂತೆ ಸ್ವವಿವರದ ಬಯೋಡಾಟಾವನ್ನು ಸಂಕ್ಷಿಪ್ತವಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ಈಮೈಲ್ ಸಲ್ಲಿಸಲು ಕೋರಲಾಗಿದೆ. ಸಂಪಾದಕರು, ನೂಪುರ ಭ್ರಮರಿ, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ, ಮಡಿಕೇರಿ, ಕೊಡಗು, 571201. ಮೊಬೈಲ್ : 9964140927. ಈ ಮೈಲ್ :editor@noopurabhramari.com

2 Responses to ಸಂಶೋಧನಾ ಸಂಗ್ರಹ ವೇದಿಕೆ

  1. ಶ್ರೀ ರಾಘವೇಶ್ವರ ಭಾರತೀ

    ಸತತವಾಗಿ ಒಂದಿಲ್ಲೊಂದು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಂಡೇ ಇರುವ ನಿನ್ನ ಸಾತ್ವಿಕ ಸಕ್ರಿಯತೆ ಸಂತೋಷ ತರುತ್ತಿದೆ…

  2. S C HOSAMANI

    VERY GOOD KEEP IT UP WELL DONE

Leave a Reply

*

code