ಶೋಧಸರಣಿ ಯ ಅಂತಿಮ ಕಂತು 10- ಸನಾತನ ರೇಷ್ಮೆ ಉಡುಗೆ : ಭಾರತೀಯರಿಗೊಂದು ಕೊಡುಗೆ

Posted On: Sunday, September 19th, 2021
1 Star2 Stars3 Stars4 Stars5 Stars (No Ratings Yet)
Loading...

Author: ವಿವೇಕ್ ಶ್ರೀಧರ್, ಬೆಂಗಳೂರು

ಭಾರತೀಯ ಕಲೆಗಳ ವಿವಿಧ ಶಾಖೆ ಗಳಾದ ಶಿಲ್ಪ, ಚಿತ್ರ, ಗಾನ, ನೃತ್ಯದೊಂದಿಗೆ ಅದರ ರಸತತ್ತ್ವ, ಇತಿಹಾಸ, ಅಭಿನಯಶಾಖೆ, ಸಾಹಿತ್ಯ, ರಚನೆಗಳು ಮತ್ತು ಸಮಕಾಲೀನ ನೆಲೆಯ ಆವಶ್ಯಕತೆಗಳನ್ನು ನೂಪುರಭ್ರಮರಿಯ 15ನೆ ವರ್ಷದ ಈ ಘಟ್ಟದಲ್ಲಿ ಕಲಾ ಸಂಶೋಧನ ಪ್ರಸ್ತುತಿಯ ರೂಪದಲ್ಲಿ ಆನಂದಿಸಿದ್ದೇವೆ. ಇದೆ ಮೊದಮೊದಲೆಂಬಂತೆ ಹೊಸತಾದ, ವಿಶಿಷ್ಟ ಬಗೆಯ ಸಂಶೋಧನಾಪ್ರಸ್ತುತಿಗಳನ್ನು ಕಳೆದ ಎರಡೂವರೆ ತಿಂಗಳಿನಿಂದ ಸತತ ನೋಡುತ್ತಾ ಬಂದಿದ್ದೇವೆ. ಈ ಎಲ್ಲ ಪ್ರಸ್ತುತಿಗಳ ಸಂಶೋಧಕ ಬಂಧುಗಳಿಗೆ, ತಜ್ಞ ಸಮಿತಿಗೆ ಹಾರ್ದಿಕ ಅಭಿವಂದನೆಗಳನ್ನು ಅರ್ಪಿಸುತ್ತಾ ಇದೋ….
ಶೋಧಸರಣಿ ಯ ಅಂತಿಮ ಕಂತು 10- ಸನಾತನ ರೇಷ್ಮೆ ಉಡುಗೆ : ಭಾರತೀಯರಿಗೊಂದು ಕೊಡುಗೆ- ವಿವೇಕ್ ಶ್ರೀಧರ್ ಅವರ ಪ್ರಸ್ತುತಿ ಯೊಂದಿಗೆ ಈ ಮಹತ್ವಪೂರ್ಣ ಸರಣಿಯ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ.
ಈ ಸರಣಿಯಲ್ಲಿ ರೇಷ್ಮೆಸೀರೆ ಗಳ ವೈವಿಧ್ಯ, ವಿನ್ಯಾಸ, ಕ್ರಮ, ಪರಂಪರೆ, ನೇಯ್ಗೆಯ ವಿಧಾನ ಮೊದಲಾಗಿ ಭಾರತೀಯ ಪಾರಂಪರಿಕ ಸೀರೆಗಳ ವೈಶಿಷ್ಟ್ಯವನ್ನು ಸೀರೆಗಳ ಪ್ರಾತ್ಯಕ್ಷಿಕೆಯೊಂದಿಗೆ ಕೈಗೊಳ್ಳಲಾಗಿದ್ದು; ಅಪೂರ್ವವೆನಿಸುವ ಮಾಹಿತಿಗಳನ್ನು ಒಳಗೊಂಡಿದೆ. ಅದರಲ್ಲೂ ಸೀರೆಯನ್ನು ಮೆಚ್ಚುವ ನಾರೀಮಣಿಯರು, ಅದನ್ನು ಆಯ್ಕೆ ಮಾಡಲು ಹೆಣಗುವ ಪುರುಷವೀರರು😄
ಮರೆಯದೆ ನೋಡಬೇಕಾದ, ಆನಂದಿಸಬೇಕಾದ ಕಂತು ಇದು..
ShodhaSarani – An art research series By #Noopurabhramari (R.)
This series is dedicated to all kinds of PerformingArts including allied art forms. Our aim is to encourage, promote qualitative research; and help in the upcoming studies by establishing the productive research to the Art fraternity.

Leave a Reply

*

code