Dance researchers’ Forum Updates

ನೃತ್ಯ ಸಂಶೋಧಕರ ಚಾವಡಿ :ನೂಪುರ ಭ್ರಮರಿ ನಾಡಿನ ಹೆಸರಾಂತ ಕಲಾನಿಯತಕಾಲಿಕೆಯಾಗಿ ಮೊದಲ್ಗೊಂಡು ಪ್ರತಿಷ್ಠಾನ ಮತ್ತು ಪ್ರಕಾಶನಸಂಸ್ಥೆಯಾಗಿ ರೂಪ ಪಡೆದು ಇದೀಗ ನೃತ್ಯ ಸಂಶೋಧಕರ ಚಾವಡಿ(Dance researchers’ Forum)ಎಂಬ ಸಂಶೋಧನೆಗೆ ಮೀಸಲಾದ ವಿಭಾಗವನ್ನೂ ಪ್ರಾರಂಭಿಸಿದೆ. ಈ ಚಾವಡಿಯು ಫೆಬ್ರವರಿ ೨೦, ೨೦೧೨ರ ಮಹಾಶಿವರಾತ್ರಿಯ ಶುಭಾವಸರದಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ಉದ್ಘಾಟನೆಗೊಂಡ ದಿನದಿಂದ ಈ ವರೆಗೆ ಕರ್ನಾಟಕ ಮತ್ತು ಹೊರರಾಜ್ಯದ ಸುಮಾರು ೪೦ಕ್ಕಿಂತಲೂ ಹೆಚ್ಚಿನ ಮಂದಿ ಸಂಶೋಧನಾಸಕ್ತರು ಇದರ ಸದಸ್ಯರಾಗಿದ್ದು ಕಲಾಸಂಶೋಧನೆಯ ಅನಿವಾರ್ಯತೆಯ ಹಿನ್ನೆಲೆ ಮತ್ತು ವೇದಿಕೆ ಕಲ್ಪಿಸಿಕೊಡಬೇಕಾದ ನೆಲೆಗಳನ್ನು ಸ್ಪಷ್ಟಪಡಿಸುತ್ತಿದೆ. ಹೆಸರಾಂತ ಸಂಶೋಧಕರೂ, ವಿದ್ವಾಂಸರೂ ಆದ ಶತಾವಧಾನಿ ಡಾ. ಆರ್. ಗಣೇಶ್ ರ ಪ್ರಧಾನ ಸಲಹಾಸಮಿತಿಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು; ಈ ಚಾವಡಿಯು ವಾರ್ಷಿಕ ಕಲಾ ಸಂಶೋಧನಾ ಸಮ್ಮೇಳನ, ನೃತ್ಯ ಸಂಶೋಧನಾ ಪುಸ್ತಕ ಪ್ರಕಟಣೆ, ಕಲಾಸಂಶೋಧನೆಗೆ ಮೀಸಲಾದ ವಿಶೇಷ ಸಂಶೋಧನಾ ನಿಯತಕಾಲಿಕೆ, ಕಲಾ ಸಂಶೋಧನೆಗೆ ಪ್ರತ್ಯೇಕವಾದ ಗ್ರಂಥಾಲಯ, ಗೋಷ್ಠಿ ಮತ್ತು ಅಧ್ಯಯನ ಸ್ವರೂಪದ ಕಮ್ಮಟ-ಕಾರ್ಯಾಗಾರ-ಉಪನ್ಯಾಸ-ಪ್ರಾಯೋಗಿಕ ಪರಿಷ್ಕರಣಗಳು ಪ್ರಧಾನವಾದ ಯೋಜನೆಗಳನ್ನಾಗಿಸಿದೆ. ನೂಪುರ ಭ್ರಮರಿ ದ್ವೈಮಾಸಿಕ, ವರ್ಷದ ಕಲಾ ವಿಮರ್ಶೆ ಪ್ರಶಸ್ತಿ, ಪ್ರಕಾಶನ ಮತ್ತು ಪ್ರಕಟಣೆಗಳು ಸಂಸ್ಥೆಯ ಧ್ಯೇಯೋದ್ದೇಶವನ್ನು ಮತ್ತಷ್ಟು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಯೋಜನೆಗಳಲ್ಲಿ ಕೆಲವೊಂದರ ಮುನ್ನೋಟ ಕೆಳಕಂಡಂತಿದೆ.

ಅಭಿನಂದನೆಗಳು- ರಾಜ್ಯಮಟ್ಟದ ನೃತ್ಯ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ

Posted On: April 15th, 2013 by ಸಂಪಾದಕಿ

ನೃತ್ಯ ಸಂಶೋಧನೆ ಮತ್ತು ಪ್ರಯೋಗಗಳೆಡೆಗೆ ಅರ್ಥಪೂರ್ಣ ವಿಚಾರಗೋಷ್ಠಿ – ಅಖಿಲ ಭಾರತೀಯ ನೃತ್ಯ ಸಂಶೋಧನ ಸಮ್ಮೇಳನ-೨೦೧೩ – ಒಂದು ನೋಟ

Posted On: April 15th, 2013 by ಮಂಜುನಾಥ ಭಟ್. ಎಚ್, ಬೆಂಗಳೂರು.

Dance Research Conference 2013- report

Posted On: February 16th, 2013 by Editor/ಸಂಪಾದಕಿ

Vikasana Goshti Part 1-2 (2012)

Posted On: August 27th, 2012 by

Planning of the year -Agenda and Vikasana Goshti by Dance researchers Forum

Posted On: August 8th, 2012 by

Generalbody meeting with Research class

Posted On: June 13th, 2012 by

“ನೃತ್ಯ ಮಾರ್ಗ ಮುಕುರ” ಕೃತಿ

Posted On: May 17th, 2011 by