ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನರ್ತನ ವಿಮರ್ಶೆ’ ಸ್ಪರ್ಧೆ

Posted On: Thursday, December 27th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಆತ್ಮೀಯರೇ,

ಬರೆವಣಿಗೆ ಮತ್ತು ಕಲೆಯ ಅಂಗ-ಭಾಗವಾಗಿರುವ ವಿಮರ್ಶೆಗಳಿಗೆ ಮತ್ತು ವಿಮರ್ಶಕರಿಗೆ ಗೌರವ ನೀಡಿ ಅವರ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಪ್ರಯತ್ನವಿದು ಈ ನೋಟಕ್ಕೆ ಪ್ರಾರಂಭದ ದಿಸೆಯಿಂದಲೇ ಶತಾವಧಾನಿ ಡಾ. ಆರ್. ಗಣೇಶರು ನಿರ್ಣಾಯಕ ಸಮಿತಿಯ ಅಧ್ಯಕ್ಷರಾಗುವ ಮೂಲಕ ನಮಗೆ ಹೆಮ್ಮೆಯನ್ನು ತಂದಿದ್ದಾರೆ. ನಮ್ಮ ಈ ಪ್ರಯತ್ನವನ್ನು ಬೆಂಬಲಿಸಬೇಕಾಗಿ ಸವಿನಯ ಕೇಳಿಕೆ.

ನರ್ತನ ಮತ್ತು ಪ್ರದರ್ಶಕ ಕಲೆಗಳ ಕುರಿತ ಪ್ರತಿಷ್ಠಿತ ದ್ವೈಮಾಸಿಕ ಮತ್ತು ಪ್ರತಿಷ್ಠಾನ ‘ನೂಪುರ ಭ್ರಮರಿ’ – ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ 2010 ನೇ ಸಾಲಿನಲ್ಲಿ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನರ್ತನ ವಿಮರ್ಶೆ ಸ್ಪರ್ಧೆಯನ್ನು ಆರಂಭಿಸಿದ್ದು; ಮೊದಲಿನ 2 ವರುಷಗಳಲ್ಲಿ ಈ ಪ್ರಶಸ್ತಿಯು ವಿಮರ್ಶಕರಾದ ಪ್ರಿಯಾ ರಾಮನ್ ಮತ್ತು ಪ್ರತಿಭಾ ಸಾಮಗ ಅವರಿಗೆ ಸಂದಿರುತ್ತದೆ.

ಈ ಹಿನ್ನೆಲೆಯಲ್ಲಿ 2012ನೇ ಸಾಲಿನ ಪ್ರಶಸ್ತಿಗಾಗಿ ವಿಮರ್ಶಕರಿಂದ ರಚಿತ ಪ್ರಕಟಿತ ವಿಮರ್ಶೆಗಳನ್ನು ಆಹ್ವಾನಿಸಿದ್ದು ; ಪ್ರವೇಶಗಳನ್ನು ಕಳುಹಿಸಲು ಅಂತಿಮ ದಿನಾಂಕ ಜನವರಿ 15, 2013

ನಿಯಮಾವಳಿಗಳು

·    ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆ/ನಿಯತಕಾಲಿಕೆ/ಅಂತರ್ಜಾಲ ಪತ್ರಿಕೆಗಳಲ್ಲಿ 2012 ಜನವರಿಯಿಂದ 2012 ಡಿಸೆಂಬರ್ ಒಳಗೆ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ.

·    ಲೇಖಕರು ತಮ್ಮ ಅತ್ಯುತ್ತಮವೆನಿಸುವ 3 ವಿಮರ್ಶೆಗಳನ್ನು ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಥವಾ ನಾಮನಿರ್ದೇಶನದ ಶಿಫಾರಸ್ಸುಗಳನ್ನು ಅಂಚೆ ಅಥವಾ ಈಮೇಲ್ ಮೂಲಕ ಜನವರಿ 15, 2013ರ ಒಳಗೆ ತಲುಪುವಂತೆ ಕಳುಹಿಸಬೇಕು.

·    ಕಾರ್ಯಕ್ರಮದ ಸಾಧಕ-ಬಾಧಕ ಅಂಶಗಳನ್ನು ಚರ್ಚಿಸುವ ವಿಮರ್ಶೆಗಳಿಗೆ ಮಾತ್ರ ಸ್ವಾಗತ. ಕಾರ್ಯಕ್ರಮ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ.

·    ಓರ್ವ ಲೇಖಕ/ಲೇಖಿಕೆ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು.

·    ಈ ಕುರಿತಂತೆ ಕಲಾವಿದರು/ಗುರು-ಶಿಕ್ಷಕರು/ಕಲಾಸಕ್ತ ಬಂಧುಗಳು ಉತ್ತಮರೆನಿಸುವ ವಿಮರ್ಶಕರನ್ನು ಸೂಕ್ತವೆನಿಸುವ ವಿವರಗಳೊಂದಿಗೆ ನಾಮನಿರ್ದೇಶನಗೊಳಿಸಲು (ನಾಮಿನೇಟ್) ಅವಕಾಶವಿದೆ.

·    ಸೂಕ್ತವೆನಿಸುವ ಪ್ರವೇಶಗಳು ಬಾರದೇ ಹೋದಲ್ಲಿ ಪ್ರಶಸ್ತಿಯ ಗುಣಮಟ್ಟದ ದೃಷ್ಟಿಯಿಂದ ಪ್ರಶಸ್ತಿಯನ್ನು ಆ ವರುಷಕ್ಕೆ ತಡೆಹಿಡಿಯಲಾಗುವುದು. ಸ್ಪರ್ಧೆಯ ಸಂಬಂಧವಾಗಿ ಯಾವುದೇ ವೈಯಕ್ತಿಕ ಲಾಬಿಗಳಿಗೆ ಅವಕಾಶವಿಲ್ಲ. ಆಯ್ಕೆ ಸಮಿತಿಯ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ.

ಅತ್ಯುತ್ತಮನಿಸುವ ವಿಮರ್ಶೆಗೆ ಫೆಬ್ರವರಿ 15,2013 ರಂದು  ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ನೃತ್ಯ ಸಂಶೋಧನಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನಪತ್ರ, ಸ್ಮರಣಿಕೆ, ನಗದು ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.

 

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:

ಮನೋರಮಾ ಬಿ.ಎನ್

ಸಂಪಾದಕರು, ‘ನೂಪುರ ಭ್ರಮರಿ’

ಸಾನ್ನಿಧ್ಯ, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ, ಮಡಿಕೇರಿ, ಕೊಡಗು 571201

ದೂರವಾಣಿ: 99641140927

ಈ ಮೈಲ್ : editor@noopurabhramari.com

 

 

English Version

 

Noopura Bhramari’ is conducting a Karnataka state-level Award contest ‘best dance review / criticism of the year’ since 2 years  ; which aims to develop the standards of art criticism field and also to encourage the writers who shares their valuable thoughts and serves the art field. Mrs. Priya Raman (Hyderabad) and Pratibha Samaga (Udupi) has received the award of 2010, 2011 respectively.

Hence for the year-2012; Dance critics are invited to send their published reviews / criticisms on dance programmes / rangapravesham / Utsav/ conference etc. There is also an opportunity to general public/Art connoisseurs to nominate the critics for this contest.

They may send a maximum three entries either in Kannada or English. The last date for filing in the entry is January 15, 2013. The award will be given on February 15, 2013 on the occasion of National level Dance research conference to be held at Bharatiya Vidyabhan. 

Award committee decisions will be final. The sub standard write-ups which gives only the reports of programmes will be rejected irrespective of their age, qualification and, achievements. Personal meddling with the Award process is totally discouraged. 


Email: editor@noopurabhramari.com
Mobile: + 91 99641 40927
Address : Manorama B.N, Editor, ‘Noopura Bhramari’, Sannidhaya, Dechoor Road, Near Ashwatthakatte, Madikeri, Kodagu 571201, Karnataka

Leave a Reply

*

code