Life Time Achievement Award-2013 with the title ‘Noopura Kalaa Kalahamsa’ to ‘Smt.Leela Ramanathan’

Posted On: Thursday, February 7th, 2013
1 Star2 Stars3 Stars4 Stars5 Stars (1 votes, average: 1.00 out of 5)
Loading...

Author: editor

ನೃತ್ಯಕ್ಷೇತ್ರಕ್ಕೆ ನಿಸ್ಪೃಹತೆ, ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿದ ಅಧ್ಯಯನ, ಪ್ರಯೋಗವೆರಡರಲ್ಲೂ ಸಮಾನಾಸಕ್ತಿ ಹೊಂದಿ ಗುರು-ಹಿರಿಯರಿಗೆ, ಸಮಕಾಲೀನರಿಗೆ ಮತ್ತು ಯುವಚೈತನ್ಯಗಳಿಗೆ ಸ್ಪೂರ್ತಿದಾಯಕವಾಗಿ ದುಡಿಯುತ್ತಿರುವ ಹಿರಿಯರಿಗೆ ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯು ನೀಡುವ ಪುರಸ್ಕಾರವಿದು. ನಿರ್ಣಾಯಕ ಸಮಿತಿಯ ಸಮಷ್ಟಿ ಅಭಿಪ್ರಾಯದಲ್ಲಿ ನಿರ್ಧಾರಗೊಳ್ಳುವ‌ಈ ಪುರಸ್ಕಾರ ೨೦೧೩ರ ನೃತ್ಯ ಸಂಶೋಧನ ಸಮ್ಮೇಳನದ ಮೂಲಕ ಆರಂಭಗೊಳ್ಳುತ್ತಿದೆ. ಪ್ರಪ್ರಥಮವಾಗಿ ಈ ಪುರಸ್ಕಾರಕ್ಕೆ ’ನೂಪುರ ಕಲಾ ಕಲಹಂಸ’ ವೆಂಬ ಅಭಿದಾನದಿಂದ ಭಾಜನವಾಗುತ್ತಿರುವವರು ಬೆಂಗಳೂರಿನ ಹಿರಿಯ ನೃತ್ಯಕಲಾವಿದೆ ಶ್ರೀಮತಿ ವಿದುಷಿ ಲೀಲಾರಾಮನಾಥನ್.

Leela Ramanathan belongs to an extremely illustrious family from Karnataka. Her grandfather Rajamantra Praveena HV Nanjundayya was the founder Vice Chancellor of theMysoreUniversityand a founder of the Kannada Sahitya Parishat and her father C Bhaskaraiyya was the Deputy Auditor General ofIndia.

Leela Ramanathan has done her MA Honors in English Literature and won the Purna Krishna Rao Gold Medal. She was also one of the most popular teachers at the Maharani’s college where she taught after her education. However her first love has always been dance and instead of pursuing her doctoral studies at Girton College, Oxford, she decided to dedicate her life to the pursuit of Indian Classical Dance. She has studied under some of the greatest Dance Maestros of all time; Bharata Natyam under Kolar Puttappa Pillai, Ram Gopal, Meenakshi Sundaram Pillai, Muthiah Pillai, Kitappa Pillai and Mylapore Gowri, Kathakali from Chandu Panikar, Kathak from Bowri Prasad and Sohanlal and Orissi from Debu Prasad Das.

Leela Ramanathan has toured the world extensively as part of the first Cultural Delegation set up by Pandit Nehru under the leadership of Mrinalini Sarabhai and later with Ram Gopal. She has performed, lectured and taught all over India and across North and South America, Europe, the Middle East and Australia.

Marriage to the late Brig K Ramanathan took her all over the country as an army wife where she continued with her teaching and dancing. In 1972 she founded the Meenakshi Sundaram Center of Performing Arts in Bangalore under the auspices of the East West Education Trust. She is the Honorary Director of the school where she taught Bharatha Natyam. She is a prolific writer and researcher in classical Indian dance forms with over 800 articles to her credit and book on the anvil.

Leela Ramanathan was the former President of the Karnataka Nrityakala Parishat, a member of the Sangeeta Nritya Academy and is a Trustee of the East West Education Trust. She is also a member of various national and state level Dance Audition Boards.

She is the recipient of numerous awards and titles from organizations like the Karnataka Gana Kala Parishat, Bangalore Gayana Samaj, Karnataka Sangeetha Nritya Academy, Bangalore University, University Women’s Association and the Karnataka Nritya Kala Parishat. The Karnataka Government awarded her the State Rajyotsava Award and the Shantala Award. Her interpretation of Varnams in Bharatha Natyam is renowned and they have been archived by the Central Sangeet Nataka Academy and Karnataka Sangeet Nritya Academy.

ನೃತ್ಯಕಲಿಕೆಗೆ ಅಷ್ಟಾಗಿ ಪ್ರೋತ್ಸಾಹವಿರದಿದ್ದ ಕಾಲದಲ್ಲಿ ಬಡವಬಲ್ಲಿದರೆನ್ನದೆ ತಾವು ನೃತ್ಯಕಲಿಸಿದಷ್ಟೂ ಕಾಲ ವಿದ್ಯಾರ್ಥಿಗಳಿಂದ ಚಿಕ್ಕಾಸನ್ನೂ ಪಡೆಯದೆ ನಿಸ್ವಾರ್ಥಪ್ರೇಮದಲ್ಲಿ ಕಲೆಯನ್ನು ಪೋಷಿಸಿದವರು ಶ್ರೀಮತಿ ಲೀಲಾ ರಾಮನಾಥನ್. ವೃದ್ಧಾಪ್ಯದ ತೊಂದರೆಗಳ ನಡುವೆಯೂ ನೃತ್ಯ, ಕಲೆಯೆಂದಾಕ್ಷಣ ಆನಂದಭಾಷ್ಪವನ್ನೇ ಸುರಿಸುವ ಲೀಲಾ ಅವರು ಕರ್ನಾಟಕದ ಪ್ರಬುದ್ಧ ಚಿಂತನೆಯ ನೃತ್ಯಗುರುಗಳಲ್ಲಿ ಒಬ್ಬರು.

ಕೋಲಾರ ಪುಟ್ಟಪ್ಪ, ಮೀನಾಕ್ಷಿ ಸುಂದರಂ ಪಿಳ್ಳೈ, ಮೈಲಾಪುರ ಗೌರಿ ಅಮ್ಮಾಳ್ ಮತ್ತು ಕಿಟ್ಟಪ್ಪ ಪಿಳ್ಳೈರಂತಹ ನೃತ್ಯಕ್ಷೇತ್ರದ ಅತಿರಥ-ಮಹಾರಥರಲ್ಲಿ ಪಳಗಿದವರು ಲೀಲಾ ರಾಮನಾಥನ್. ತಮ್ಮ ಗುರು ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಜ್ಞಾಪಕಾರ್ಥವಾಗಿ ಬೆಂಗಳೂರಿನಲ್ಲಿಯೇ ೧೯೭೦ರ ದಶಕದಲ್ಲಿ ಮೀನಾಕ್ಷಿ ಸುಂದರಂ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್‌ನ್ನು ಕಟ್ಟಿ, ಬೆಳೆಸಿ, ನಿರ್ದೇಶಕರಾಗಿ-ಗುರುಗಳಾಗಿ ದುಡಿದವರು. ೧೯೮೦ರ ದಶಕಗಳಲ್ಲಿಯೇ ಇವರ ನೃತ್ಯಕಾರ್ಯಕ್ರಮಗಳು ದೆಹಲಿ, ಕೊಲ್ಕತ್ತಾ ದೂರದರ್ಶನ ಕೇಂದ್ರಗಳಲ್ಲಿ ಪ್ರಸಾರಗೊಂಡಿತ್ತೆಂದರೆ ಇವರ ನೃತ್ಯಪ್ರಾವೀನ್ಯತೆಯನ್ನು ಊಹಿಸಬಹುದು. ೭೦-೮೦ರ ದಶಕಗಳಲ್ಲಿ ಇವರು ನರ್ತಿಸಿದ ಅಪೂರ್ವವೆನಿಸುವ ಸಾಂಪ್ರದಾಯಿಕ ನೃತ್ಯಬಂಧಗಳು, ವರ್ಣಗಳು ಕೇಂದ್ರ ಮತ್ತು ರಾಜ್ಯದ ಅಕಾಡೆಮಿಗಳಲ್ಲಿ ವಿಡೀಯೋ ದಾಖಲೀಕರಣಗೊಂಡು ರಕ್ಷಿಸಲ್ಪಟ್ಟಿವೆ. ೯೦ನೇ ದಶಕದಲ್ಲಿ ನರ್ತನ ಎಂಬ ಪುಸ್ತಕವನ್ನು ಬರೆದ ಲೀಲಾ ಅವರು; ವರ್ಣ, ಅಷ್ಟಪದಿ, ಪದ ಇತ್ಯಾದಿ ಹಲವು ನೃತ್ಯಬಂಧಗಳಿಗೆ ಮತ್ತು ಬುದ್ಧಚರಿತ, ಸೀತಾಪರಿಣಯ ಮುಂತಾದ ನೃತ್ಯನಾಟಕಗಳಿಗೆ ನೃತ್ಯಸಂಯೋಜನೆ-ನಿರ್ದೇಶನ ಮಾಡಿದ್ದಾರೆ. ೧೯೭೦-೯೦ರವರೆಗಿನ ದಶಕಗಳಲ್ಲಿ ಲೀಲಾ ಅವರು ಹಲವು ಕಮ್ಮಟ/ಕಾರ್ಯಾಗಾರ/ ವಿಚಾರಸಂಕಿರಣ/ವಿಶ್ವವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ನೃತ್ಯದ ಕುರಿತು ಉಪನ್ಯಾಸ ನೀಡಿದ ಪ್ರಮುಖರು. ೧೯೮೦ರ ದಶಕಗಳಲ್ಲಿ ಕರ್ನಾಟಕ ನೃತ್ಯಕಲಾ ಪರಿಷತ್, ಸಂಗೀತ ಮತ್ತು ನೃತ್ಯ ಅಕಾಡೆಮಿ ಇತ್ಯಾದಿ ಸಂಘ-ಸಂಸ್ಥೆಗಳಲ್ಲಿ ಸಲಹಾಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಲೇಖಿಕೆಯಾಗಿ ತಮ್ಮ ಅತ್ಯದ್ಭುತ ವಿಚಾರಸರಣಿಗಳಿಂದ ಹಿಂದೂ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ ಇತ್ಯಾದಿ ಪತ್ರಿಕೆಗಳಲ್ಲಿ ಮತ್ತು ಹೆಸರಾಂತ ನೃತ್ಯ-ಸಂಗೀತ ನಿಯತಕಾಲಿಕೆಗಳಲ್ಲಿ ಪ್ರಖ್ಯಾತರಾದವರು. ಅಂತೆಯೇ ಪ್ರಶಸ್ತಿ-ಪುರಸ್ಕಾರಗಳ ವಶೀಲಿಯ ಬೆನ್ನು ಹಿಡಿಯದೆ ತಮ್ಮ ಕರ್ತವ್ಯನಿಷ್ಠೆಗೆ ಹೆಸರಾದ ಸಾಧ್ವಿ ಲೀಲಾ ರಾಮನಾಥನ್ ನಿಸ್ಪೃಹ ಜೀವನಕ್ಕೆ ಮಾನ್ಯರು, ಧನ್ಯರು. ಅವರನ್ನು ನೂಪುರಭ್ರಮರಿ ನೃತ್ಯ ಸಂಶೋಧಕ ಚಾವಡಿಯು ಪುರಸ್ಕಾರದ ರೂಪದಲ್ಲಿ ಆದರಪೂರ್ವಕವಾಗಿ ಗೌರವಿಸಲು ಹೆಮ್ಮೆ, ಸಂತೋಷಪಡುತ್ತಿದೆ.

 

ಅವರ ಬಗ್ಗೆ ಡಾ. ಕರುಣಾ ವಿಜಯೇಂದ್ರ ಬರೆದ ಲೇಖನ ನಿಮಗಾಗಿ…ಇಲ್ಲಿದೆ…

 

ಎತ್ತರವಾದ ನಿಲುವು, ಬೆಳ್ಳಿ-ಕಪ್ಪು ಕೂದಲಿನ ಅಗಲವಾದ ಹರಡಿದಂತಹ ತುರುಬು, ಹಣೆಯನ್ನು ಸಂಪೂರ್ಣವಾಗಿ ಆವರಿಸಿರುವ ಅಗಲವಾದ ದುಂಡಾದ ಕುಂಕುಮ, ಕಪ್ಪು ಕಾಡಿಗೆಯೊಳಗಿನಿಂದ ಇಣುಕುವ ಕಾಂತಿಭರಿತ ಪಾರಿವಾಳದಂತಹ ಕಣ್ಣುಗಳು, ಮೊಗದ ತುಂಬಾ ಮಂದಹಾಸ, ಸರಳವಾಗಿ ಮೆದುವಾಗಿ ಬರುವ ಪದಪುಂಜಗಳಲ್ಲಿ ಸೀ..ದನ್ಚೆ ಇಸ್ ಸ್ಪಿರಿತುಅಲ್. ಈತ್ ಇಸ್ ದಿವಿನೆ. ಈಫ಼್ ಯೌ ಸುರ್ರೆನ್ದೆರ್ ತೊ ಇತ್ ಥೆನ್ ಒನ್ಲ್ಯ್ ಯೌ ವಿಲ್ಲ್ ಎನ್ಜೊಯ್ ಎಂದು ಕೈಯನ್ನು ಸುತ್ತುತ್ತಾ ಲಾಲಿತ್ಯವಾಗಿ ಮಾತನಾಡಿದ ಶೈಲಿ…ಯಾರೆಂದು ಗುರುತಿಸಲಾದೀತೇ? – ಯಾಕಾಗದು? ೭೦ರ ದಶಕದಿಂದಲೂ ಅವರು ಬರೆಯುತ್ತಿದ್ದ ಡೆಕ್ಕನ್ ಹೆರಾಲ್ಡ್ ಬರೆಹಗಳನ್ನು ಓದುತ್ತಾ ಬೆಳೆದುಬಂದಿರುವ, ಅವರ ಪಾಠಗಳನ್ನು ಕೇಳಿ-ಕಲಿತಿದ್ದರೆ ಅವರು ಲೀಲಾ ರಾಮನಾಥನ್ ಎಂದು ಯಾರು ಬೇಕಾದರೂ ಗುರುತಿಸುತ್ತಾರೆ.

ಅರರೇ, ಹೌದಲ್ಲ..! ಇತ್ತೀಚೆಗೆ ಅವರನ್ನು ನಾವು ಯಾವ ನೃತ್ಯ ಕಾರ್ಯಕ್ರಮಗಳಲ್ಲೂ ಕಾಣುತ್ತಿಲ್ಲವಲ್ಲ? ಆದರೆ ನೃತ್ಯಕ್ಷೇತ್ರದಲ್ಲಿ ಮನೆಮಾತಾಗಿ ಸುಮಾರು ೪ ದಶಕಗಳಿಗೂ ನಿರಂತರವಾಗಿ ನೃತ್ಯಕ್ಕೆಂದೇ ದುಡಿದಿರುವ ಲೀಲಾ ರಾಮನಾಥನ್ ಇಂದಿಗೂ ನರ್ತನವನ್ನು ತಮ್ಮ ಪ್ರಪಂಚದಲ್ಲಿ ಅಭ್ಯಸಿಸುತ್ತಾ ಸಂತೋಷವಾಗಿದ್ದಾರೆಂಬುದಂತೂ ಸತ್ಯ.

೯೦ರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದ ಕಾಲಕ್ಕೆ ನಮಗೆ ಲೀಲಾ ಅವರು ನೃತ್ಯದ ಉಪನ್ಯಾಸಗಳನ್ನು ನೀಡಲು ಬರುತ್ತಿದ್ದರು. ಅವರ ಮಾತು, ಧಾಟಿ, ಓಘಕ್ಕೆ ಸಾತ್ತ್ವಿಕ ಪದದ ಬಳಕೆ ಬಹಳ ಸೂಕ್ತವಾಗಿ ಹೊಂದುತ್ತಿತ್ತು.ಸಾತ್ತ್ವಿಕದ ಅರ್ಥ ತಿಳಿಯದಿದ್ದರೂ ಮರುಳಾಗಿದ್ದೆ. ಇಂದು ನನ್ನ ಅಧ್ಯಯನದ ಹಾದಿಯಲ್ಲಿ ತಿರುಗಿ ನೋಡಿದರೆ ಅವರ ಸಾಕಷ್ಟು ಉಪನ್ಯಾಸಗಳು ನನ್ನಲ್ಲಿ ಪರಿಣಾಮ ಬೀರಿರುವುದರ ಅರಿವಾಗಿದೆ. ಅವರನ್ನು ಕಾಣಬೇಕೆಂಬ ತೀವ್ರ ತುಡಿತದಿಂದ ಭೆಟ್ಟಿಯಾಗಲು ತೆರಳಿದಾಗ ಅವರೊಡನೆ ಹಂಚಿಕೊಂಡ ಕೆಲವು ಸಂಭಾಷಣೆಗಳ ತಿರುಳು ಇದೀಗ ನಿಮ್ಮ ಮುಂದಿದೆ.

ಲೀಲಾಮೇಡಂ ಪ್ರಶಸ್ತಿ-ಪುರಸ್ಕಾರ-ಹಾರ-ತುರಾಯಿಗಳನ್ನು ಇಷ್ಟಪಡುವವರಲ್ಲ. ಆದರೂ ನೂಪುರ ಭ್ರಮರಿ ನೃತ್ಯಸಂಶೋಧಕರ ಚಾವಡಿಯಿಂದ ಪುರಸ್ಕಾರದ ನೆವದಲ್ಲಿ ಅವರನ್ನು ಗೌರವಿಸುವ ಸದವಕಾಶ ಒದಗಿಬಂದಿದ್ದನ್ನು ತಿಳಿಸಲು ಉತ್ಸುಕಳಾಗಿದ್ದೆ. ಅಳುಕಿನಿಂದಲೇ ಅವರ ಮುಂದೆ ಕುಳಿತೆ. ನೆನಪಿದೆಯೇ ಎಂದು ಕೇಳಿದರೆ ನನಗೇ ತಿರುಗಿಸಿ ನಿನಗೆ ನೆನಪಿದೆಯೇ ಎಂದು ಪ್ರಶ್ನೆ ಹಾಕಿ ತಬ್ಬಿಬ್ಬುಗೊಳಿಸಿದರು. ಪೆಚ್ಚಾಗಿ ನಕ್ಕೆ. ಅವರೋ ಜೋರಾಗಿ ಮಗುವಿನಮ್ತೆ ನಗುತ್ತಲೇ ಇದ್ದರು. ನಂತರ ಸಹಜವಾಗಿ ಮಾತಿಗಿಳಿದರು. ಅವರ ಮಗಳು ಮಾಳವಿಕಾ ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದರು. ನಿಧಾನವಾಗಿ ಪುರಸ್ಕಾರದ ಬಗ್ಗೆ ಬಿನ್ನವಿಸಿ ಮಾತಾಡಿ ಒಪ್ಪಿಸುವ ಹೊತ್ತಿಗೆ ನಿಡಿದಾದ ಉಸಿರು ತನ್ನಿಂತಾನೇ ಹೊರಬಂದಿತ್ತು. ಅಂದು ಆ ಹದಗೊಂಡ ಹಿರಿಯ ಮನಸ್ಸು ಆರ್ದ್ರಗೊಂಡು ಕಣ್ಣುಗಳು ಹನಿಗೂಡಿದ್ದವು. ಸಂತೋಷದ ಪನ್ನೀರು ಕಣ್ಣಿಂದ ಜಿನುಗಿತ್ತು. ಮತ್ತೆ ನೃತ್ಯದ ಬಗೆಗಿನ ಮಾತುಗಳು ಆರಂಭವಾದವು. ಅವರ ವಯಸ್ಸಿನ ತೊಂದರೆಗಳನ್ನು ಗಮನಿಸಿ ಹೆಚ್ಚು ಕಾಡಬಾರದೆಂದು ನನ್ನಲ್ಲಿದ್ದ ಪ್ರಶ್ನೆಗಳನ್ನು ಮಾಳವಿಕಾರ ಕೈಗಿತ್ತೆ. ಅವರು ಅಮ್ಮನೊಂದಿಗೆ ಮಾತನಾಡಿ ಕಳಿಸಿದ ಉತ್ತರಗಳ ಸಾರಾಂಶ ಸ್ವರೂಪ ನಿಮ್ಮ ಮುಂದಿದೆ.

·    HOW COULD YOU MANAGE THE ‘SWEET AND SOUR’ DAYS AS DANCER?

For me dance has been my life and I danced because I loved it; Not for any rewards or recognition.  I also promised my father when I took up dance as a career that I would never take any money for my performances or teaching. And thanks to God’s grace I was able to do just that. So all the money that my performances earned were donated to charity. That way I had the pleasure of not only doing something I loved but also helping various worthwhile causes. It has not been an easy journey but I an optimist and persevered to reach where I am today.

 

·    HOW SOCIETY, PEOPLE, GOVERNMENT RESPONDED OR RECIPROCATED TOWARDS ART OF DANCE THEN AND NOW..

When I started my career I knew it was going to be a hard road ahead.  In those days it was taboo for girls from respectable families to not just learn dance but perform on the stage. It was tough when I was learning from Kolar Puttappa, Ram Gopal and then Meenakshi Sundaram Pillai and Kittappa Pillai. But I was determined to follow my dreams and I did just that of course with the backing of first my parents and then my husband. And I am glad I did because it was pioneers like us who made dance socially acceptable today.  Of course the pendulum has swung to the other extreme and we have every girl learning the dance and performing whether she has the talent or not.

For me dance has always been about spirituality and attaining the state of Godliness.   I believe with my heart and soul in the Nayaka Nayika  bhava  and have striven towards reaching God whenever I dance. This is probably one of the reasons that I have never been a popular dancer catering to the senses. My dance has always catered to the intellect.

It is my belief that while Government can do a lot more they are hampered by bureaucracy and politics and hence their efforts never reach complete fruition.

 

·    STUDY, RESEARCH, RECONSTRUCTION’ COULD IT BE MANTRA FOR THE EVOLUTION, EXECUTION OF DANCE? DOES SCHOLARLY INPUTS STRENGTHENS THE ART OF DANCE TODAY?

I made the Varnams my speciality because according to me a Varnam combines Nritya, Nritta and Abhinaya of the highest order and gives the dancer a platform to innovate and create to her heart’s content. I have always believed that you can be as creative in the classical styles as you can be in modern dance idioms, provided you are steeped in the technique and have done your research thoroughly.

I have always been an intellectual dancer who believed not just in learning the technique but also the theory of dance. I believe that all our classical dance forms are rooted in our history and culture and to be a complete dancer you need to be steeped in the theory of the dance. This is why through out my career of over 70 years I have lectured, taught and researched the myriad facets of classical dance in India.  I have written extensively about it as well. In fact my daughter is in the process of getting my treatise on the dance in India published.

My contribution to the Pandanallur style of Bharata Natyam, which attracted me because of its pristine purity and majesty was the abhinaya content. If you want to create abhinaya you need to not just know but be steeped in the origins of the dance for which you need to research and understand how dance originated. The myths, the legends and the stories should be grist to the mill for any good composer and choreographer. How can you build a house without foundations?

 

·    WHAT KIND OF AMBIENCE/ SCENARIO WOULD BE APT FOR THE ART OF DANCE , YOUR WISH…. YOUR DREAMS….

I believe that, to perform you need to go through the grind, from the basic thatta adavus. It takes 10 to 15 years of slogging to make a reasonable dancer. I quote my oft repeated adage to my students that there is no royal road to learning, it is 99% perspiration and 1% inspiration.

I do not subscribe to the current trend of instant learning and worse still of learning “items” without the necessary grounding or knowledge of the technique.

I am a strong believer in evolution and like all life forms dance has to evolve too. We are currently going through a period of uncontrolled growth and consequently a dilution of standards. But being an eternal optimist I believe that from this cauldron of  changing styles and experimentation will evolve a strong classical stream which will endure for another 3000 years.

 

·    YOUR MESSAGE …YOUR FEELINGS TOWARDS THE LIFE TIME ACHIEVEMENT AWARD…

Thank you very much for this honor. I am sorry that I cannot be present here today to receive this award myself, but as they say the spirit is willing but the flesh is weak. When Karuna came to meet me she said something which was like nectar to a teacher. She said that I had inspired her and changed her entire thinking. It brought tears to my eyes. Thank you Karuna.

So thank you all and I would like to leave you with one message which is follow your heart with single-minded focus, passion and determination. And do it with dignity and grace. Do it for the joy of learning and knowledge. Fame and money is secondary.

God bless you all and thank you.

Leave a Reply

*

code