ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 10- ವೇಮಭೂಪಾಲನ ಸಂಗೀತ ಚಿಂತಾಮಣಿ

Posted On: Sunday, December 17th, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 10- ವೇಮಭೂಪಾಲನ ಸಂಗೀತ ಚಿಂತಾಮಣಿ ಮತ್ತು ಗ್ರಂಥ ಸಂಪಾದನೆಯಲ್ಲಿ 20ನೇ ಶತಮಾನದ ವಿದ್ವಾಂಸರ ಕೊಡುಗೆ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 10- Vema Bhūpāla’s Sangīta Cintāmaṇi and the contributions by the Scholars of 20th Century in procuring the treatises.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ವೇಮಭೂಪಾಲನೆಂಬುವ ಬರೆದ ಗ್ರಂಥ ಸಂಗೀತಚಿಂತಾಮಣಿ. ಚಿಂತಾಮಣಿ ಎನ್ನುವುದು ಒಂದು ರತ್ನ. ಅಂದರೆ ಗೀತ-ವಾದ್ಯ-ನೃತ್ಯಗಳೆಂಬ ತೌರ್ಯತ್ರಿಕ ಸಂಗೀತವಿಷಯದ ಶಾಸ್ತ್ರರತ್ನ ಎಂಬ ಅಭಿಧಾನದಿಂದ ಈ ಗ್ರಂಥ ತನ್ನನ್ನು ಹೆಸರಿಸಿಕೊಂಡಿದೆ. ಇದರ ರಚನೆಯ ಕಾಲ ೧೪೦೦ನೇ ಇಸವಿ.

ವೇಮಭೂಪಾಲ- ವೈಯಕ್ತಿಕ ವಿವರಗಳು

ವೇಮನು ಆಂಧ್ರಪ್ರದೇಶದ ಕೊಂಡವೀಟಿ ನಗರಾಧೀಶ್ವರ. ರೆಡ್ಡಿ ವಂಶಜ. ಈತನನ್ನು ಸ್ತುತಿಸಿ ಶ್ರೀನಾಥನೆಂಬ ಕವಿ ವೇಮಭೂಪಾಲೀಯಂ ಎಂಬ ಕಾವ್ಯವನ್ನು ರಚಿಸಿದ್ದನೆಂದರೆ ಈತನೂ, ಈತನ ವಂಶದವರು ಎಷ್ಟೊಂದು ಉದಾರಿಗಳು, ಧರ್ಮ-ದೇವಾಲಯ- ಕಲಾಪೋಷಕರು ಎನ್ನುವುದು ಅರ್ಥವಾಗುತ್ತದೆ. ಈತನ ಕೊಂಡವೀಟಿ ಸಂಸ್ಥಾನವು ಆರಂಭದಲ್ಲಿ ಸ್ವತಂತ್ರಸಂಸ್ಥಾನವಾಗಿದ್ದರೂ ಕ್ರಮೇಣ ರಾಜಕೀಯ ಸ್ಥಿತ್ಯಂತರಗಳಿಂದಾಗಿ ವಿಜಯನಗರ ಕರ್ನಾಟ ಸಾಮ್ರಾಜ್ಯದ ಅಧೀನಕ್ಕೆ ಬಂದದ್ದನ್ನು ಗಮನಿಸಬಹುದು.

ಸಂಗೀತಚಿಂತಾಮಣಿ- ಗ್ರಂಥವಿಶೇಷ ಮತ್ತು ಅಧ್ಯಾಯಕ್ರಮ

ಸಂಗೀತಚಿಂತಾಮಣಿಯು ವಾದ್ಯ-ಗೀತ ಮತ್ತು ನೃತ್ಯದ ಅನೇಕ ವಿಚಾರಗಳನ್ನು ಚರ್ಚಿಸುತ್ತದೆ. ಜಾಯಪಸೇನಾಪತಿಯ ನೃತ್ತರತ್ನಾವಳಿ ಗ್ರಂಥದ ಎಷ್ಟೋ ಲಕ್ಷಣಗಳಿಗೆ ಈ ಗ್ರಂಥದ ಲಕ್ಷಣಗಳು ನಿಕಟವಿದೆ. ಅದರಲ್ಲೂ ಕಲ್ಲಿನಾಥನು ಸಂಗೀತರತ್ನಾಕರಕ್ಕೆ ವ್ಯಾಖ್ಯಾನ ಬರೆಯುವಾಗ ಹೆಸರಿಸುವ ಮಧುಪ ಅಥವಾ ಮುಡುಪವೆಂಬ ಪಾದಚಾರಿಗಳನ್ನು ಅಥವಾ ನೃತರತ್ನಾವಳಿ ಪಾದಪಾಟಗಳೆಂದು ಹೆಸರಿಸುವ ಕಾಲಿನ ಚಲನೆಗಳನ್ನು ಈ ಗ್ರಂಥವು ಪಾದಮಣಿಗಳೆಂದೇ ಹೆಸರಿಸಿ ವಿವರಿಸುವುದನ್ನು ಗಮನಿಸಬಹುದು.[1] ಸಂಗೀತಚಿಂತಾಮಣಿಯೂ ತಿರಿಪ ಮೊದಲಾದ ಭ್ರಮರಿ ಸಹಿತವಾದ ನೃತ್ತಕ್ರಮ, ಉತ್ಲ್ಪುತಿ ಕರಣಗಳನ್ನು ಪಟ್ಟಿ ಮಾಡಿ ವಿವರಿಸುವ ವಿಶಿಷ್ಟ ಗ್ರಂಥ. ಈ ವೇಮಭೂಪಾಲನು ಸಾಹಿತ್ಯಚಿಂತಾಮಣಿ ಎಂಬ ಮತ್ತೊಂದು ಗ್ರಂಥವನ್ನೂ ಬರೆದಿದ್ದ ಎನ್ನುವುದೂ ತಿಳಿದುಬರುತ್ತದೆ.

ಸಂಪಾದನೆ

ಇಂಥ ಹಲವು ಗ್ರಂಥಗಳ ಹಸ್ತಪ್ರತಿಗಳನ್ನು ಪ್ರತಿಲಿಪೀಕರಿಸಿ ತಂದು, ನಮ್ಮಂಥ ಅದೆಷ್ಟೋ ಸಂಶೋಧಕ ಅಧ್ಯಯನಕಾರರಿಗೆ ಒದಗುವಂತೆ ಮಾಡಿದವರಲ್ಲಿ ಸರ್ವಪ್ರಥಮರು ಕರ್ನಾಟಕದ ಅಪ್ರತಿಮ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರು. ಅವರ ಪರಿಶ್ರಮದಲ್ಲಿ ದೊರಕಿದ ಹಸ್ತಪ್ರತಿಗಳನ್ನು ರಾಮನಾಥನ್ ಎಂಬ ಮತ್ತೋರ್ವ ವಿದ್ವಾಂಸರು ಮ್ಯೂಸಿಕ್ ರೀಸರ್ಚ್ ಲೈಬ್ರೈರಿ ಡಾಟ್ ಆರ್ಗ್ ಎಂಬ ಅಂತರ್ಜಾಲ ತಾಣದಲ್ಲಿ ಉಚಿತ ಡೌನ್ಲೋಡ್ ಕಲ್ಪಿಸಿಕೊಟ್ಟಿದ್ದಾರೆ. ಜೊತೆಗೆ ಅದೆಷ್ಟೋ ವಿದ್ವಾಂಸರು ಡಾ. ರಾಘವನ್, ಪಂಡಿತ ವಾಸುದೇವ ಶಾಸ್ತ್ರಿಗಳು, ಪಂಡಿತ ಸುಬ್ರಹ್ಮಣ್ಯ ಶಾಸ್ತ್ರಿಗಳು, ಮಾನವಲ್ಲಿ ರಾಮಕೃಷ್ಣ ಕವಿಗಳು, ಮೊದಲಾದವರು ೨೦ನೇ ಶತಮಾನದ ಮಧ್ಯಭಾಗದಲ್ಲಿ ಹಸ್ತಪ್ರತಿಗಳನ್ನು ವಿವಿಧ ಪತ್ರಾಗಾರ ಇಲಾಖೆಗಳಿಂದ ಸಂಪಾದಿಸಿ, ಅಧ್ಯಯನ ನಡೆಸಿ ಟಿಪ್ಪಣಿ ಬರೆದು ದುಡಿದ ಪರಿಣಾಮವೇ, ಈ ಹೊತ್ತಿಗೆ ಕೊಂಚ ಮಟ್ಟಿಗಾದರೂ ಎಲ್ಲ ಗ್ರಂಥಗಳು ಮುದ್ರಿತಗೊಂಡು ಲಭ್ಯವಾಗುವಂತಾಗಿವೆ. ಅದೆಷ್ಟೋ ಸಂಶೋಧಕ- ಅಧ್ಯಯನಾಸಕ್ತರಿಗೆ ಕೈಗೆಟುಕುವಂತೆ ಲಭ್ಯವಾಗಿವೆ. ಅವರ ಈ ಮೌಲಿಕ ಕೊಡುಗೆಯನ್ನು ನಿತ್ಯವೂ ನೆನಪಿಸಿಕೊಳ್ಳುತ್ತಿರಬೇಕು. ಮತ್ತು ಭಾರತದ ಅದೆಷ್ಟೋ ಪ್ರಾಚೀನ ಗ್ರಂಥಗಳು ಉಚಿತವಾಗಿ ಅಪ್ಲೊಡ್ ಮತ್ತು ಡೌನ್ಲೋಡ್ ಆಗುವಂತೆ ಸರ್ಕಾರ ಇನ್ನೂ ಹೆಚ್ಚಿನ ಅನುಕೂಲಗಳನ್ನು, ಪರಿಶ್ರಮವನ್ನು ಮಾಡಬೇಕಿದೆ. ಆಗಷ್ಟೇ ಎಷ್ಟೋ ಪ್ರಾಚೀನ ಗ್ರಂಥಗಳ ಪುನರುಜ್ಜೀವನ ಮತ್ತು ಅಧ್ಯಯನಗಳು ಸಾಧ್ಯ.

ಆಧಾರಗ್ರಂಥಗಳು

ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- https://www.noopurabhramari.com/want-to-subscribe-noopura-bhramari-and-purchase-the-dance-books/

Ramakrishnakavi, M, Shrimanvalli (Compiled) (1983). Bharatakosha. New Delhi: Mushiram Manoharlal Publishers.

 

  1. ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ವಿವರಗಳಿಗೆ https://www.noopurabhramari.com/yakshamargamukura/

Leave a Reply

*

code