ಶಾಸ್ತ್ರರಂಗ-ಸಂಚಿಕೆ 5-ಜಗದೇಕಮಲ್ಲನ ಸಂಗೀತಚೂಡಾಮಣಿ,ಹರಿಪಾಲನ ಸಂಗೀತಸುಧಾಕರ,ಸೋಮದೇವನ ಸಂಗೀತರತ್ನಾವಲೀ

Posted On: Sunday, November 12th, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 5- 11-12ನೇ ಶತಮಾನಕ್ಕೆ ಸಲ್ಲುವ ಇಂದಿಗೂ ಅಪ್ರಕಟಿತವಾಗಿಯೇ ಇರುವ ಚಾಲುಕ್ಯ ರಾಜವಂಶೀಯರಾದ ಜಗದೇಕಮಲ್ಲನ ಸಂಗೀತ ಚೂಡಾಮಣಿ, ಹರಿಪಾಲನ ಸಂಗೀತ ಸುಧಾಕರ ಮತ್ತು ಸೋಮದೇವನ ಸಂಗೀತ ರತ್ನಾವಲೀ ಎಂಬ ಗ್ರಂಥಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 5- Sangīta Treatises authored by Chalukya royal family- Jagadekamalla’s Sangīta Cūḍāmaṇi, Haripāladeva’s Sangīta Sudhākara and Somadeva’s Sangīta Ratnāvalī (Rare texts of 11-12th CE, which is still unpublished)

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನದ ಕೆಲವು ಮುಖ್ಯ ಅಂಶಗಳು

ಹರಿಪಾಲದೇವ ಅಥವಾ ಕ್ಷೇಮರಾಜ ಬರೆದ ಗ್ರಂಥ ಸಂಗೀತಸುಧಾಕರ. ಇದು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರನ ಮಾನಸೋಲ್ಲಾಸಕ್ಕಿಂತ ಕೊಂಚ ಮೊದಲಿನ ಕಾಲದಲ್ಲಿ ಬರೆಯಲ್ಪಟ್ಟದ್ದು. ಅಂದರೆ ೧೦೫೦ರಿಂದ ೧೧೭೫ನೇ ಇಸವಿಯ ಒಳಗಿನದ್ದು ಎಂದು ಅಂದಾಜಿಸಲಾಗಿದೆ. ಹಾಗೆಂದು ಈತ ೧೩೦೯-೧೩೧೨ನೇ ಇಸವಿಯಲ್ಲಿದ್ದ ಮಹಾರಾಷ್ಟ್ರದ ಸೇವುಣ/ಯಾದವದೊರೆ ಎಂಬುದಾಗಿಯೂ ವಿದ್ವಾಂಸರ ಅಭಿಪ್ರಾಯಗಳೂ ಇವೆ.

ಹರಿಪಾಲದೇವ- ವೈಯಕ್ತಿಕ ವಿವರಗಳು

ಗುಜರಾತ್-ಮಹಾರಾಷ್ಟ್ರದ ವ್ಯಾಪ್ತಿಯನ್ನು ಆಳಿದ ಕರ್ನಾಟಕದ ಚಾಲುಕ್ಯ ವಂಶದ ಭೀಮರಾಜ – ಬಕುಳಾದೇವಿಯರ ಮಗ ಹರಿಪಾಲದೇವ ಅಥವಾ ಕ್ಷೇಮರಾಜ. ಹರಿಪಾಲನಿಗೆ ಅಲಂಕಾರ- ಛಂದಶ್ಶಾಸ್ತ್ರ- ಸಂಗೀತವನ್ನೂ ಒಳಗೊಂಡಂತೆ ವಿವಿಧ ಭಾಷೆ ಮತ್ತು ಶಾಸ್ತ್ರಗಳಲ್ಲಿ ಅಪಾರ ಪ್ರತಿಭಾ ವ್ಯುತ್ಪತ್ತಿಗಳಿದ್ದವು. ವಿಚಾರಚತುರ್ಮುಖ, ವಿಚಾರಪರಮೇಷ್ಠಿ, ವೀಣಾತಂತ್ರೀವಿಶಾರದನೆಂದೇ ಹೆಸರಾಗಿದ್ದ ಈತ ಪ್ರಬಂಧಗಳೆಂಬ ಹೆಸರಿನ ಅನೇಕ ಸಾಹಿತ್ಯಿಕ ರಚನೆಗಳನ್ನೂ ಮಾಡಿದ್ದನಂತೆ. ಈತನು ರಾಜ್ಯಭಾರವನ್ನು ಮಾಡದೆ ತನ್ನ ಮಲಸೋದರ ಕರ್ಣನಿಗೆ ರಾಜ್ಯವನ್ನು ಬಿಟ್ಟುಕೊಟ್ಟಿದ್ದ.

ದಕ್ಷಿಣಭಾರತದ ತೀರ್ಥಯಾತ್ರೆಯ ಸಮಯದಲ್ಲಿ ತಮಿಳುನಾಡಿನ ಸಂಗೀತಕಲಾವಿದರು ವಿನಂತಿಸಿಕೊಂಡ ಮೇರೆಗೆ ಸಂಗೀತಸುಧಾಕರವನ್ನು ರಚಿಸಿದ್ದನೆಂದು ಹೇಳಿಕೊಂಡಿದ್ದಾನೆ. ಗೂರ್ಜರಚಕ್ರವರ್ತಿ, ಹರಿಭೂಪತಿ, ಹರೀಶ್ವರ, ಹರೀಂದ್ರ, ಹರಿಭೂಬುಜ, ಹರಿಪಾಲ ಮಹೀಪತಿ, ಹರಿಭೂಪತಿ, ಹರಿಪಾಲ ಮಹಿಭುಜಾ ಎಂಬ ಹೆಸರುಗಳಲ್ಲಿ ಈತನು ಬರೆದ ಲಕ್ಷಣಗಳು ಕಂಡುಬರುತ್ತವೆ. ಈತನ ಲಕ್ಷಣಗಳನ್ನು ಸಂಗೀತರತ್ನಾಕರಕ್ಕೆ ವ್ಯಾಖ್ಯಾನ ಬರೆದ ಕರ್ನಾಟಕದ ಕಲ್ಲಿನಾಥ, ಅಭಿನವ ಭರತಸಾರ ಸಂಗ್ರಹದಲ್ಲಿ ಮುಮ್ಮಡಿ ಚಿಕ್ಕಭೂಪಾಲ, ಬಾಲರಾಮಭರತದಲ್ಲಿ ಕೇರಳದ ಬಾಲರಾಮವರ್ಮರು ಸ್ಮರಿಸಿ ಉಲ್ಲೇಖಿಸಿದ್ದಾರೆ. ನಂದಿಕೇಶ್ವರನ ಭರರ್ತಾರ್ಣವ ಗ್ರಂಥದಲ್ಲಿ ಈತನ ಕೆಲವೊಂದು ಲಕ್ಷಣಗಳು ಕಂಡುಬರುತ್ತವೆ.[1]

ಸಂಗೀತಸುಧಾಕರ-ಅಧ್ಯಾಯ ವಿಭಾಗಕ್ರಮ ಮತ್ತು ಲಕ್ಷಣ ವಿಶೇಷತೆಗಳು

ಸಂಗೀತ ಎಂದರೆ ಗೀತ- ವಾದ್ಯ- ನರ್ತನಗಳೆಲ್ಲವೂ ಸೇರಿದ ಪರಿಭಾಷೆ. ಸಂಗೀತಸುಧಾಕರವೂ ಈ ಎಲ್ಲ ಅಂಶಗಳ ಕುರಿತು ಚರ್ಚಿಸುತ್ತದೆ. ನೃತ್ತ, ಕಾಂತಾ ಅಥವಾ ತಾಲ, ವಾದ್ಯ, ಅಭಿನಯ, ಗೀತಗಳೆಂಬುದು ಇದರ ಪ್ರಮುಖ ಐದು ಅಧಿಕರಣ ಅಂದರೆ ಅಧ್ಯಾಯಗಳು.

ತಾಲಾಧಿಕರಣ ತಾಲದ ಕುರಿತಾಗಿ ಸಂಕ್ಷಿಪ್ತವಾದ ವಿಚಾರಗಳನ್ನು ಹೊಂದಿದೆ. ವಾದ್ಯಾಧಿಕರಣದಲ್ಲಿ ತತ-ಅವನದ್ಧ- ಸುಷಿರ-ಘನವೆಂಬ ವಿವಿಧ ವಾದ್ಯಗಳ ಲಕ್ಷಣಗಳು, ಗೀತಾಧಿಕರಣದಲ್ಲಿ ಶ್ರುತಿ-ನಾದ-ಮೂರ್ಛನ- ಜಾತಿ-ರಾಗ- ತಾನ-ಪ್ರಬಂಧಲಕ್ಷಣ ಮೊದಲಾದವುಗಳ ವಿವರಗಳು ಇವೆ. ನೃತ್ತ ಮತ್ತು ಅಭಿನಯ ಅಧ್ಯಾಯಗಳಲ್ಲಿ ಅಂಗೋಪಾಂಗ ಅಭಿನಯ- ಚಾರಿ-ಕರಣಗಳು-ಅಂಗಹಾರ-ಮಂಡಲಭೇದ- ನರ್ತಕಲಕ್ಷಣಗಳ ವಿವರಗಳಿವೆ. ಅಭಿನಯ ಅಧಿಕರಣದಲ್ಲಿ ವಿವಿಧ ಅಭಿನಯ- ಭಾರತೀ ಮೊದಲಾದ ಚತುರ್ ವೃತ್ತಿಗಳು, ನೇಪಥ್ಯ ವಿಧಿ, ನಾಯಕ-ನಾಯಿಕಾಗಳೆಂಬ ಸಾಮಾನ್ಯಾಭಿನಯ, ದಶರೂಪಕಾದಿಗಳನ್ನು ವಿವರಿಸಿದ್ದಾನೆ.

ಹರಿಪಾಲದೇವನ ಲಕ್ಷಣವಿಶೇಷತೆಗಳನ್ನು ಗುರುತಿಸುವುದಾದರೆ- ಸುಮಾರು ೧೩೦ ವಿಧದ ಕರಣಗಳನ್ನು ಗುರುತಿಸುತ್ತಾನೆ. ಅದರಲ್ಲೂ ಭರತನಿಗಿಂತ ಭಿನ್ನವಾದ, ಯಾವ ಗ್ರಂಥಗಳಲ್ಲೂ ಅಷ್ಟಾಗಿ ದೊರಕದ, ವಿಶೇಷವೆನಿಸುವ ಮಾಹೇಶ್ವರ, ನಾರಾಯಣ, ಐಂದ್ರ, ವಾರುಣ, ಚಾಂದ್ರ, ಹೈರಂಬ, ಮಾನ್ಮಥ, ಶಂಖ ಮೊದಲಾದ ಅನೇಕ ಕರಣಗಳ ವಿಚಾರವಿದೆ. ಹೀಗೆ ಕಂಡುಬರುವ ಕರಣಗಳು ಭರತಾರ್ಣವ ಪ್ರಕಟಿತ ಕೃತಿಯಲ್ಲಿರುವ ಕರಣಗಳೊಂದಿಗೆ ಹೋಲುತ್ತವೆ ಕೂಡಾ. ಈ ಕರಣಗಳ ಬಗೆಗಿನ ಅಧ್ಯಯನವನ್ನು ಯಕ್ಷಮಾರ್ಗಮುಕುರ ಎಂಬ ಇದೇ ಲೇಖೀಕೆಯ ಅಧ್ಯಯನ ಕೃತಿಯಲ್ಲಿ ಸವಿಸ್ತಾರವಾಗಿ ಪ್ರಕಟಿಸಲಾಗಿದೆ..

ಗ್ರಂಥ ಸಂಪಾದನೆ

ಸಂಗೀತಸುಧಾಕರ ಗ್ರಂಥದ ಓಲೆಯ ಕಟ್ಟು ಭರತಾರ್ಣವ, ಲಾಸ್ಯರಂಜನ, ಭರತಸಿದ್ಧಾಂತಂ ಗ್ರಂಥಗಳ ಜೊತೆಗೆ ತಂಜಾವೂರು ಸರಸ್ವತಿ ಮಹಲ್ ಮತ್ತು ಮೈಸೂರಿನ ಸರಸ್ವತೀ ಮಹಲ್ ಗ್ರಂಥಾಲಯಗಳ ಸಹಿತ ದೇಶದ ಬೇರೆ ಬೇರೆ ಗ್ರಂಥಾಲಯಗಳಲ್ಲಿ ಇವೆ. ಮತ್ತು ಇವು ಈ ಗ್ರಂಥಗಳ ಹಸ್ತಪ್ರತಿಗಳೊಂದಿಗೆ ಬೆರಕೆಯಾಗಿದ್ದು; ಇದನ್ನು ಪ್ರತ್ಯೇಕಿಸಿ ಸಂಪಾದಿಸಿ ಪ್ರಕಟಿಸುವ ಕೆಲಸ ಅವಶ್ಯವಾಗಿ ಆಗಬೇಕಿದೆ.

ಪರಾಮರ್ಶನ ಕೃತಿಗಳು

Sangita Sudhakarah by Haripala deva (Devanagari manuscript 1-204 leaves; A 843 Accession no. Film no Fn 424). Mysore: Oriental Research Institute.  And Govt Oriental Manuscript Library Manuscript, Madras R No. 779 and 3082 procured by Indira Kala Sangeeta Vishwavidyalaya, Kairaghar University, Madhyapradesh, GOML87pp. Vol 2nd. <https://ia902805.us.archive.org/view_archive.php?archive=/11/items/sangitasudhakaraharipala/Sangita%20sudhakara_Haripala.zip&file=SangitaSudhakara-1-IKSV-RBmf102.pdf>

Sastri, Vasudeva, K (Ed.) (1998). Bharatarnava-Nadikeshwara Virachita. Tanjavur: Maharaja Serfoji’s Sarasvati Mahal Library.

ಮನೋರಮಾ ಬಿ.ಎನ್. ಯಕ್ಷಮಾಗಮುಕುರ [1]– ಅಧ್ಯಯನ ಕೃತಿ

Leave a Reply

*

code