Reports

ಆತ್ಮೀಯ………..

ನೂಪುರ ಭ್ರಮರಿಯನ್ನು ವರುಷದಿಂದಲೂ ತಾವೆಲ್ಲರೂ ಅವಲೋಕನ ಮಾಡುತ್ತಿದ್ದೀರಿ. ಆಶೀರ್ವದಿಸುತ್ತಿದ್ದೀರಿ. ಪ್ರತೀ ಸಂಚಿಕೆಯ ಯಶಸ್ಸಿನ ಹಿಂದೆಯೂ ತಮ್ಮ ಹರಕೆ ಹಾರೈಕೆಗಳಿವೆ ಎಂಬುದು ನಮ್ಮ ಸಂತೋಷ. ತಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಮಗೆ ನಿರಂತರ ಬೇಕು.

ಒಂದು ಪತ್ರಿಕೆಯನ್ನು ರೂಪಿಸುವುದರ ಹಿಂದಿನ ಕಷ್ಟಗಳು ನಿಮಗೆ ಗೊತ್ತಿದೆ. ಅದರಲ್ಲೂ ಪ್ರಕಟಿತ ಪತ್ರಿಕೆಯು ಒಮ್ಮೊಮ್ಮೆ ಆಸಕ್ತ ಓದುಗರನ್ನು ಮುಟ್ಟುವಲ್ಲಿ ಅಡಚಣೆಗಳು ಉಂಟಾಗುತ್ತಿವೆ. ಎಷ್ಟೋ ಬಾರಿ ವಿಳಾಸ ಅದಲು ಬದಲಾಗುವುದೋ ಅಥವಾ, ಬದಲಾಗುವುದೋ, ಅಥವಾ ಅಂಚೆದೋಷಗಳಿಂದಾಗಿ ಸಂಚಿಕೆಗಳು ತಲುಪುವಲ್ಲಿ ವಿಳಂಬವಾಗುತ್ತಿದೆ, ಕ್ಲಪ್ತ ಸಮಯಕ್ಕೆ ತಲುಪುತ್ತಿಲ್ಲ. ಹಲವು ಬಾರಿ ತಲುಪದ ಸಂದರ್ಭಗಳೂ ಇವೆ ಎಂದು ಆಸಕ್ತ ಓದುಗರು ತಿಳಿಸಿದ್ದಿದೆ. ಮಾತ್ರವಲ್ಲ, ಕೆಲವು ಓದುಗರು ಪತ್ರಿಕೆಯನ್ನು ತರಿಸಿಕೊಳ್ಳುವ ನಿಟ್ಟಿನಲ್ಲೂ ನೂಪುರ ಭ್ರಮರಿಯ ಬಳಗಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ತಮ್ಮಲ್ಲೊಂದು ವಿನಂತಿ.

ಕೊನೆಯ ಪುಟದಲ್ಲಿ ಲಭ್ಯವಿರುವ ಬಾಕ್ಸ್‌ನ್ನು ಕತ್ತರಿಸಿ ನಿಮ್ಮ ಹೆಸರು, ವಿಳಾಸ, ಅಭಿಪ್ರಾಯಗಳೊಂದಿಗೆ ನಮಗೆ ಬರೆಯಿರಿ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಸ್ಫೂರ್ತಿ ನೀಡುತ್ತದೆ. ತಮ್ಮ ಅಭಿಪ್ರಾಯಗಳನ್ನು ಈ-ಮೈಲ್ ಮೂಲಕವೂ ನಮಗೆ ತಿಳಿಸಬಹುದು. ಪತ್ರಿಕೆ ತಲುಪುತ್ತಿರುವ ಮತ್ತು ಅದರ ವಿಷಯಗಳ ಕುರಿತು ಆಗಾಗ ನಿಮ್ಮಿಂದ ಅನಿಸಿಕೆಗಳನ್ನು ನಾವು ಪ್ರೀತಿಯಿಂದ ಎದುರು ನೋಡುತ್ತಿರುತ್ತೇವೆ.

ಅಷ್ಟೇ ಅಲ್ಲ, ಸಂಗೀತ-ನೃತ್ಯ-ಲಲಿತಕಲೆಗಳಿಗೆ ಸಂಬಂಧಿಸಿದಂತೆ ನಿಮ್ಮ ಚಿಂತನೆಗಳನ್ನು, ಲೇಖನಗಳನ್ನು ಭ್ರಮರಿಯ ವಿವಿಧ ವಿಭಾಗಕ್ಕೆ ಕಳುಹಿಸಿ ಈ ಜ್ಞಾನಯಜ್ಞಕ್ಕೆ ಕೈಜೋಡಿಸಬಹುದು. ಇದಕ್ಕೆ ಹಿರಿ-ಕಿರಿಯರ ಭೇಧವಿಲ್ಲ. ಗುರು-ಕಲಾವಿದ-ವೀಕ್ಷಕ-ಪ್ರೇಕ್ಷಕ-ಪೋಷಕ-ವಿದ್ಯಾರ್ಥಿ..ಹೀಗೆ ಆಸಕ್ತರು ನೃತ್ಯಕ್ಕೆ ಸಂಬಂಧಿಸಿದಂತೆ ತಮಗನಿಸಿದ ಎಲ್ಲ ಅನಿಸಿಕೆ, ಅಭಿಪ್ರಾಯಗಳನ್ನು ಕಳಿಸಬಹುದು.

ಅಂದಹಾಗೆ ಆಸಕ್ತ ಓದುಗರು ಬಹಳಷ್ಟು ಮಂದಿ ಚಂದಾವಿವರಗಳನ್ನು ಕೇಳಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವಂತೆ ನೂಪುರ ಭ್ರಮರಿಯ ಉದ್ದೇಶ ಲಾಭ ಲೆಕ್ಕಾಚಾರವಲ್ಲ. ಕಲೆಯ ಮೇಲಿನ ಆಸಕ್ತಿಯಿಂದ ಹುಟ್ಟಿಕೊಂಡ ಪುಟ್ಟ ಪ್ರಯತ್ನವಿದು. ಹಾಗಾಗಿ ಓದುಗಬಂದುಗಳು ಪತ್ರಿಕೆಯ ಮೌಲ್ಯವನ್ನು ಅರಿತು ತಮಗನಿಸಿದ ಮೊತ್ತವನ್ನು ಕಳುಹಿಸುತ್ತಿದ್ದಾರೆ, ಜೊತೆಗೆ ಸಂಚಿಕೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ವಂದನೆಗಳು, ಕೃತಜ್ಞತೆಗಳು.

…ಎದೆ ಎದೆಗೂ ನಡುವಿದೆ ಹಿರಿಗಡಲು
ಮುಟ್ಟಲಾರೆವೇನೋ..ಸೇತುವೆ ಕಟ್ಟಲಾರೆವೇನೋ…?
ಪ್ರೀತಿಯಿರಲಿ,..ನಮ್ಮ ನಿಮ್ಮ ನಡುವೆ…

State level One day Symposium on Indian Traditional Theatrical Art forms - Yakshagana and Bharatanrtya (Association and Application)

State level One day Symposium on Indian Traditional Theatrical Art forms – Yakshagana and Bharatanrtya (Association and Application)

Posted On: January 30th, 2020 by Shalini Vittal, Bengaluru
ನಾರಾಯಣಸ್ಮರಣ ಮತ್ತು ಯಕ್ಷಗಾನ - ಭರತನೃತ್ಯ ಸಂಬಂಧದ ವಿಚಾರಸಂಕಿರಣ & ಯಕ್ಷಭಾಣಿಕಾ

ನಾರಾಯಣಸ್ಮರಣ ಮತ್ತು ಯಕ್ಷಗಾನ – ಭರತನೃತ್ಯ ಸಂಬಂಧದ ವಿಚಾರಸಂಕಿರಣ & ಯಕ್ಷಭಾಣಿಕಾ

Posted On: December 22nd, 2019 by ಸಂಪಾದಕಿ

Dutikarma prakasha – A practical recosntruction of Dutis in Nrutya

Posted On: June 10th, 2019 by Editor
State level Dance Research Symposium+ ‘Bharata Natya Bodhini’ release +E-Research journal launch

State level Dance Research Symposium+ ‘Bharata Natya Bodhini’ release +E-Research journal launch

Posted On: August 15th, 2018 by
‘Shivaaraadhana through Nrityaadhyayana’ – A Dance Research Symposium

‘Shivaaraadhana through Nrityaadhyayana’ – A Dance Research Symposium

Posted On: February 15th, 2018 by Editor

Dance Research Conference 2013- report

Posted On: February 16th, 2013 by Editor/ಸಂಪಾದಕಿ
Karnataka State level One day Workshop/ Seminar on  ‘ Research in Dance – Process and Challenges’

Karnataka State level One day Workshop/ Seminar on ‘ Research in Dance – Process and Challenges’

Posted On: February 24th, 2012 by

ಉಪನ್ಯಾಸ

Posted On: August 15th, 2009 by

‘ವರುಷವೆರಡು ಕಳೆದಿದೆ… ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ…’

Posted On: March 15th, 2009 by

ನೂಪುರಭ್ರಮರಿ: ವಾರ್ಷಿಕ ಸಂಭ್ರಮದ ಕಾರ್ಯಕ್ರಮ ವಿವರ

Posted On: November 7th, 2008 by