ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ರಂಗಭೂಮಿ ಮತ್ತು ನಾಟ್ಯದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ನಮಗೆಲ್ಲರಿಗೂ ಇದೆ. ಹೊಸತೆನಿಸಲು, ನಮ್ಮನ್ನು ಓದಿಗೆ ಹಚ್ಚಲು, ಅರಿವಿನ ಕಿಚ್ಚು ಹಚ್ಚುವ ಪ್ರಯತ್ನ ಅಕ್ಷರ ಭ್ರಮರಿಯದ್ದು. ಕೇವಲ ಜ್ಞಾನವಷ್ಟೇ ಅಲ್ಲ, ರಂಜನೆಯೂ ಇದರ ಉದ್ದೇಶ. ಮಸ್ತಕಕ್ಕೆ ಬೇಕು ಪುಸ್ತಕದ ತಾಕತ್ತು. ಈ ದಿಸೆಯಲ್ಲಿ ಪ್ರತೀ ಸಂಚಿಕೆಯಲ್ಲೂ ನೃತ್ಯದ ಕುರಿತ ಪ್ರಮುಖ ಪುಸ್ತಕಗಳನ್ನು ಪರಿಚಯಿಸುವ, ವಿಮರ್ಶಿಸುವ ಆಶಯ. ಈ ಮೂಲಕ ಓದುವ ಅಭಿರುಚಿ , ನೃತ್ಯದ ಕುರಿತಾಗಿ ಅಧ್ಯಯನದ ಆಸಕ್ತಿ ಹೆಚ್ಚಿಸುವ ಗುರಿಯೂ ಜೊತೆಗಿದೆ. ನಿಮ್ಮ ಸಲಹೆ, ಅಭಿಪ್ರಾಯ, ಲೇಖನಗಳಿಗೆ ಎಂದಿನಂತೆ ಭ್ರಮರಿಯ ಕದ ತೆರೆದಿರುತ್ತದೆ. ನೀವೂ ಕೂಡಾ ಪುಸ್ತಕಗಳನ್ನು ವಿಮರ್ಶಾತ್ಮಕವಾಗಿ ಪರಿಚಯಿಸಬಹುದು. ಇದು ಅಕ್ಷರ ಲೋಕದಲ್ಲೊಂದು ಪರಿಭ್ರಮಣ

ರೂಪಕ, ರಸಪ್ರಕರಣಗಳ ಅವಲೋಕ : ದಶರೂಪಕ

Monday, February 15th, 2010

ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ರೂಪಕ, ರಸಪ್ರಕರಣಗಳ ಬಗ್ಗೆ ವಿಷದವಾಗಿ ನಿರೂಪಣೆ ನೀಡಿರುವ ಶ್ರೇಷ್ಟವೆನಿಸುವ ಗ್ರಂಥಗಳ ಪೈಕಿ ದಶರೂಪಕವೂ ಒಂದು. ೧೦-೧೧ ಶತಮಾನದಲ್ಲಿ ಜೀವಿಸಿದ್ದೆನ್ನಲಾದ ಧನಂಜಯನೆಂಬ ಕವಿಯಿಂದ ರಚಿತಗೊಂಡ ಈ ಗ್ರಂಥ ಧನಿಕ ಎಂಬ ಧನಂಜಯನ ಸಹೋದರನೆಂದು ಕರೆಯಲಾದವನಿಂದ ಬರೆಯಲ್ಪಟ್ಟ ದಶರೂಪಾವಲೋಕವ್ಯಾಖ್ಯೆಯನ್ನು ಹೊಂದಿದೆ.
ಮುಂಜರಾಜ ಎಂಬ ರಾಜನ ಆಸ್ಥಾನದಲ್ಲಿದ್ದ ಧನಂಜಯನು ವೈದಿಕ ಸಂಪ್ರದಾಯವನ್ನಿಟ್ಟ್ಟುಕೊಂಡಿದ್ದ ವಿಷ್ಣು ಎಂಬವನ ಪುತ್ರನೆಂದು ಹೇಳಿಕೊಂಡಿದ್ದಾನೆ. ಧನಿಕನು ಈ ರಾಜನನ್ನು ವಾಕ್ಪತಿರಾಜನೆಂದು ಉಲ್ಲೇಖಿಸಿದ್ದಾನೆ. ಈ ರಾಜನು ಮಾಳವ ದೇಶದಲ್ಲಿ ಆಳುತ್ತಿದ್ದ [...]

ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ

Saturday, August 15th, 2009
ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ

ಜೀವನದಲ್ಲಿ ಕೆಲವೊಂದು ಘಟನೆಗಳು, ಕ್ಷಣಗಳು, ವ್ಯಕ್ತಿಗಳನ್ನು ಮರೆಯಲಾಗುವುದಿಲ್ಲ. ಕಾರಣ, ಅವು ಅಷ್ಟು ಪರಿಣಾಮಕಾರಿ. ಇದಕ್ಕೊಂದು ಉತ್ತಮ ಉದಾಹರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಸಂಪನ್ನಗೊಂಡ ಯುವ ವೃತ್ತಿಪರ ಯಕ್ಷಗಾನ ಕಲಾವಿದರ ಪುನಶ್ಚೇತನಾ ಶಿಬಿರ.
ಇತ್ತೀಚೆಗೆ ಪ್ರತಿಯೊಬ್ಬರೂ ಬಯಸುತ್ತಿರುವುದು ಪ್ರಸಿದ್ಧಿಯನ್ನು, ಸಿದ್ಧಿಯನ್ನಲ್ಲ. ಅದು ನೃತ್ಯ ಮತ್ತು ಯಕ್ಷಗಾನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕಳೆದ ಜೂನ್ ೭ರಿಂದ ೧೩ ರವರೆಗೆ ೭ ದಿವಸಗಳ ಕಾಲ ಯುವ ವೃತ್ತಿಪರ ಯಕ್ಷಕಲಾವಿದರಿಗೆ ( [...]

`ಭರತನಾಟ್ಯ’ದ ದಿಗ್ದರ್ಶನ

Sunday, February 15th, 2009

‘ಒಬ್ಬ ಲೇಖಕ ಅಥವಾ ಸಾಹಿತಿಯ ಕೈ ಮತ್ತೊಬ್ಬರ, ಇನ್ನೊಬ್ಬ ಲೇಖಕ-ಸಾಹಿತಿಯ ಜೇಬಿನಲ್ಲಿರುತ್ತದೆ’- ಸಾಹಿತ್ಯ ಜಗತ್ತಿನ ಸಾರ್ವಕಾಲಿಕ  ವ್ಯಂಗ್ಯ!  ಕನ್ನಡದಲ್ಲಿ ಉಪಲಬ್ದವಿರುವ ಅದೆಷ್ಟೋ ಭರತನಾಟ್ಯ ಸಂಬಂಧಿತ ಪುಸ್ತಕಗಳು ಈ ಮಾತಿಗೆ ಹೊರತಲ್ಲ. ಹಾಗಾಗಿ ಭರತನಾಟ್ಯ ಸಂಬಂಧಿತ ಹಲವು ಪುಸ್ತಕಗಳಲ್ಲಿ ಕಣ್ಣಾಡಿಸಿದರೂ ಸಂಶೋಧನೆಯಿಲ್ಲದ ಒಂದೇ ಬಗೆಯ ವರ್ಣನೆ, ಮಾಹಿತಿ ಸರ್ವೇ ಸಾಮಾನ್ಯ.
ಆದರೆ ೧೯೮೧ ರಲ್ಲಿ ಹೊರಬಂದ ಒಂದು ಕನ್ನಡ ಗ್ರಂಥ ಇಂದಿಗೂ ಇವೆಲ್ಲವುಗಳಿಗಿಂತಲೂ ಭಿನ್ನವೆನಿಸಿ ಸಾಕಷ್ಟು ಓದುಗರಿಗೆ ಚಿಂತನಪ್ರದವಾದ ಮಾಹಿತಿಗಳನ್ನು ನೀಡುತ್ತಾ, ಹಲವು ಪ್ರಬಂಧಗಳಿಗೆ, ಪಠ್ಯಪುಸ್ತಕಗಳಿಗೆ, ಲೇಖನಗಳಿಗೆ ಆಕರವಾಗಿ ದಶಕಗಳಿಂದಲೂ [...]

ಕಲಾರಂಗದ ಕಥನದ ಕೃತಿ : ಯಕ್ಷೋಪಾಸನೆ

Monday, December 15th, 2008

ಯಕ್ಷೋಪಾಸನೆ- ಸೂರಿಕುಮೇರಿ ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ
ನಿರೂಪಣೆ : ಡಾ ! ಎಂ. ಪ್ರಭಾಕರ ಶಿಶಿಲ
ಪ್ರಕಾಶನ : ಡಾ | ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ
ಮುದ್ರಣ : ಮಂಜುಶ್ರೀ ಪ್ರಿಂಟರ್ಸ್, ಉಜಿರೆ
ಬೆಲೆ : ೨೦೦ ರೂಗಳು
ಆತ್ಮವೃತ್ತಾಂತಗಳು ಯಾವುದೇ ವ್ಯಕ್ತಿಯ ಸಮಗ್ರ ಸಾಹಿತ್ಯ, ಶೋಧನೆ, ಕೃಷಿಯನ್ನು ನಿರೂಪಿಸುವಂತದ್ದು. ಆದರೆ ಇತ್ತೀಚೆಗೆ ಕಲಾವಿದರ ಕೃತಿಗಳು, [...]

ರಂಗ ಸಂಪ್ರದಾಯದ ವಿಶ್ವಕೋಶ

Thursday, November 6th, 2008

- ಮನೂ ‘ಬನ

ಭಾರತದ ರಂಗಸಂಪ್ರದಾಯಗಳೆಲ್ಲದಕ್ಕೂ ಆಧಾರ ಗ್ರಂಥವೆಂದು ನಾವು ಪರಿಗಣಿಸುವುದಾದರೆ ಪ್ರಥಮ ಸ್ಥಾನ ಭರತಮು ವಿರಚಿತ ನಾಟ್ಯಶಾಸ್ತ್ರಕ್ಕೆ. ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ ರಂಗ ಮಾಧ್ಯಮವನ್ನು ಶಾಸ್ತ್ರೀಯವಾಗಿ ತಿಳಿಸಿದ ಹಲವು ಕಲಾಪ್ರಕಾರಗಳಕ್ಕೇ ಇರುವ ವಿಶ್ವಕೋಶವಿದು. ಇದು ಕೇವಲ ಭರತನಾಟ್ಯಕ್ಕಷ್ಟೇ ಅಲ್ಲದೆ ಭಾರತದ ಎಲ್ಲಾ ರಂಗಕಲೆಗಳಿಗೂ ಆಕರ ಗ್ರಂಥ.

ಕ್ರಿಸ್ತಪೂರ್ವ ೨ ಮತ್ತು [...]

ಸಂಗೀತ ನೃತ್ಯ ಲಕ್ಷಣಗಳ ಪಿತಾಮಹ : ಪುಂಡರೀಕ ವಿಠಲ

Thursday, November 6th, 2008

- ಮನೂ ‘ಬನ’

ಭರತನ ನಾಟ್ಯಶಾಸ್ತ್ರದಿಂದ ಆರಂಭವಾಗಿ ಇತ್ತೀಚಿನವರೆಗೂ ಅನೇಕ ಸಂಗೀತ-ನೃತ್ಯ ಶಾಸ್ತ್ರ ಗ್ರಂಥಗಳು ಹೊರಬಂದಿವೆ. ಆದರೆ ಅವುಗಳಲಿ ಕಣ್ಮರೆಯಾಗಿ ಹೋದದ್ದೇ ಹೆಚ್ಚು. ಇದೇ ಸಾಲಿಗೆ ಸೇರಿಹೋಗುವ ಅಪಾಯ ಎದುರಿಸುತ್ತಿದ್ದ ೧೬ನೇಯ ಶತಮಾನದ ನಾಲ್ಕು ಗ್ರಂಥಗಳ ಸಮಗ್ರ ಗ್ರಂಥವೇ ಪುಂಡರೀಕಮಾಲಾ.

ಪುಂಡರೀಕ ವಿಠಲ : ಕರ್ಣಾಟಕ ಸಂಗೀತ, ಹಿಂದೂಸ್ಥಾನೀ ಸಂಗೀತ [...]

ಅಭಿನಯ ದರ್ಶನ : ನಂದಿಯ ದರ್ಪಣ

Thursday, November 6th, 2008

- ಮನೂ ‘ಬನ’

||ಆಂYಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಂ

ಆಹಾರ್ಯಂ ಚಂದ್ರತಾರಾದಿ ತಂ ವಂದೇ ಸಾತ್ವಿಕಂ ಶಿವಂ||

‘ಯಾರಿಗೆ ಈ ವಿಶ್ವವು ಅಂಗಾಭಿನಯವೋ, ವಾಕ್ (ಮಾತು) ರೂಪವಾದುದೆಲ್ಲವೂ ಯಾರಿಗೆ ವಾಚಿಕಾಭಿನಯವೋ, ಚಂದ್ರ-ನಕ್ಷತ್ರಾದಿಗಳು ಯಾರಿಗೆ ಆಹಾರ್ಯಾಭಿನಯವೋ (ವೇಷಭೂಷಣ) ಅಂಥ ಸಾತ್ವಿಕರೂಪ ಶ್ರೀ ಶಿವನಿಗೆ ನಮಸ್ಕಾರ.

ಭರತನಾಟ್ಯ ಕಲಿಯುವ ಮತ್ತು ಕಲಿಸುವ [...]

ಕಾವ್ಯ ಮತ್ತು ನೃತ್ಯದ ಸಾಂಗತ್ಯ : ಲಾಸ್ಯರಂಜನ

Thursday, November 6th, 2008

- ಮನೂ ‘ಬನ’

ನೃತ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯಗ್ರಂಥಗಳು ವಿರಳವೇ ಸರಿ. ಹೀಗಿರುವಾಗ ಛಂದಸ್ಸಿನಲ್ಲಿರುವ ನೃತ್ಯ ಶಾಸ್ತ್ರ ಲಕ್ಷಣವನ್ನು ವಿವರಿಸುವ ಕನ್ನಡ ಗ್ರಂಥಗಳಲ್ಲಿ ಪ್ರಥಮ ಗ್ರಂಥ ಎಂದು ಹೆಸರಿಸಬಹುದಾದಲ್ಲಿ ಸಿಂಹಭೂಪಾಲನ ಲಾಸ್ಯರಂಜನ ಎಂದರೆ ತಪ್ಪಾಗಲಾರದು.
ಇದರ ಕರ್ತೃ ಸಿಂಹಣ. ಒಟ್ಟು ೮ ಪ್ರಕರಣಗಳನ್ನು, ೮೬೪ ಪದ್ಯಗಳನ್ನೂ ಹೊಂದಿದ ಗ್ರಂಥವು, [...]

ಗೀತ-ನೃತ್ಯ-ನಾಟಕಗಳ ಸಾಂಗತ್ಯ : ಗೀತನಾಟಕ

Thursday, November 6th, 2008

- “ವಿಪ್ರಭಾ”

ಕನ್ನಡ ಸಾಹಿತ್ಯ ಲೋಕಕ್ಕೆ ಒಳ್ಳೆಯ ನೆನಪುಗಳನ್ನಿತ್ತ ಕವಿ-ಸಾಹಿತಿಗಳು ಏಕಕಾಲಕ್ಕೆ ನೃತ್ಯ ರಂಗಭೂಮಿಗೂ ಮರೆಯಲಾರದ ಕೊಡುಗೆಗಳನಿತ್ತಿದ್ದಾರೆ. ಅಚ್ಚುಕಟ್ಟಾದ ಲಯವುಳ್ಳ ಸ್ವರ, ಸಾಹಿತ್ಯಗಳ ರಚನೆಗಳು ನೃತ್ಯರೂಪಕ-ನಾಟಕಗಳನ್ನು ಅಭಿನಯಿಸುವ ಕಲಾವಿದರಿಗೆ ನಿಜಕ್ಕೂ ನಿಧಿಯಿದ್ದಂತೆ! ಇದರಿಂದ ಸಂಗೀತ ನೃತ್ಯ ಮತ್ತು ಹಿನ್ನಲೆ ಕಲಾವಿದರು ನೃತ್ಯದ ವ್ಯಾಪ್ತಿಯನ್ನು ಎಷ್ಟರ ಮಟ್ಟಿಗೆ ವಿಸ್ತರಿಸಬಲ್ಲುರು [...]

ಭಾರತೀಯ ಸಾಹಿತ್ಯದ ಅದ್ವಿತೀಯ ಪ್ರೇಮಗೀತೆ- ಗೀತಗೋವಿಂದ (ಅಷ್ಟಪದಿ)

Thursday, November 6th, 2008

- ಮನೂ ‘ಬನ’

ಪರಮಾತ್ಮನೆಡೆಗೆ ಮಧುರ ಭಕ್ತಿ ಮತ್ತು ಶೃಂಗಾರಗಳ ನಿವೇದನೆ ಜೊತೆಗೆ ಮಾನವ ಸ್ವಭಾವಗಳ ನಿರೂಪಣೆಂiiನ್ನು ಹೊಂದಿರುವ ಅತ್ಯದ್ಭುತ, ಅಸಾಮಾನ್ಯ ಸಂಸ್ಕೃತ ಕಾವ್ಯ ರತ್ನವೆಂದರೆ ಗೀತಗೋವಿಂದ. ಇದನ್ನು ಪ್ರಥಮ ಗೀತನಾಟಕ ಅಥವಾ ಸಂಗೀತರೂಪಕವೆನ್ನಬಹುದು. ಅನೇಕ ಸಂಗೀತ, ನೃತ್ಯ, ನಾಟಕಗಳಿಗೂ ಮಾರ್ಗದರ್ಶಕ ಸರಸ ಕೃತಿಯಾಗಿರುವ ಇದು, ನಂದಿಕೇಶ್ವರನ ಹೇಳಿಕೆಯಂತೆ [...]