
ನರ್ತನ ಜಗತ್ತಿನ ಒಳನೋಟಗಳನ್ನು ಕಟ್ಟಿಕೊಡುವ ಕೆಲಸದಲ್ಲಿ, ಅದರ ಆಳ ವಿಸ್ತಾರಗಳನ್ನು ಅರಿಯುವಲ್ಲಿ ಕಾರ್ಯಕ್ರಮ, ಪ್ರಯತ್ನಗಳೂ ಬಹುಮುಖ್ಯ. ಇದು ನಮ್ಮನ್ನು ಸಮಕಾಲೀನ ಜಗತ್ತಿನೊಂದಿಗೆ ಸ್ಪಂದಿಸುವಂತೆ ಮಾಡುತ್ತದೆ, ಜೊತೆಗೆ ನಮ್ಮ ನಡುವಿನ ಗುರು-ಕಲಾವಿದ-ಕಲಾಪ್ರೇಮಿಗಳನ್ನು ಅವರ ಪ್ರಯತ್ನ-ಪ್ರತಿಭೆಗಳನ್ನು ಅರಿಯಲೂ ಸಹಕಾರಿಯಾಗುತ್ತದೆ. ಇದೊಂದು ನಿಟ್ಟಿನಲ್ಲಿ ಪ್ರೋತ್ಸಾಹವೂ ಹೌದು. ಅದಕ್ಕಾಗಿಯೇ ಹಿನ್ನೋಟ-ಮುನ್ನೋಟಗಳ ಈ ‘ಒಳನೋಟ’.
ಆದ್ದರಿಂದ ಓದುಗರ ಅನಿಸಿಕೆಯಂತೆ ಪತ್ರಿಕೆ ಹೊರಬರುವ ಹೊತ್ತಿಗೆ ಆ ವರೆಗಿನ ಪ್ರತೀ ಎರಡು ತಿಂಗಳುಗಳ ಕಾರ್ಯಕ್ರಮ ಪರಿವಿಡಿಯನ್ನು ಇನ್ನು ಮುಂದೆ ನೀಡಲಾಗುವುದು. ವಿವರಗಳನ್ನು ಕಳಿಸಿ ಕೊಡುವವರು ಪತ್ರಿಕೆಯ ನಿಷ್ಠ ಓದುಗರೂ, ಸದಸ್ಯರೂ ಆಗಿದ್ದು, ಸ್ಪಂದಿಸುವವರಾಗಿದ್ದರೆ ಒಳ್ಳೆಯದು. ನಿಮ್ಮ ಸಂಸ್ಥೆಯ ಅಥವಾ ಪ್ರದೇಶದ ಕಾರ್ಯಕ್ರಮದ ವಿವರಗಳನ್ನು ಪ್ರತೀ ತಿಂಗಳ ಮೊದಲ ವಾರದ ಒಳಗಾಗಿ ಕಳಿಸಿಕೊಡಬಹುದು. ವಿಶಿಷ್ಟ ಕಾರ್ಯಕ್ರಮಗಳೆನಿಸಿದರೆ ಅದನ್ನು ದೀವಟಿಗೆ ಅಂಕಣಕ್ಕೆ ಬಳಸಿಕೊಳ್ಳಲಾಗುವುದು.