
ಅಭಿಜ್ಞಾನ – ಈ ಶಬ್ದ ಕಾಳಿದಾಸನ ‘ಅಭಿಜ್ಞಾನ ಶಾಂಕುತಲ’ದಿಂದ ಸುವಿಖ್ಯಾತ. ಅಷ್ಟೇಕೆ, ನಾಟ್ಯಶಾಸ್ತ್ರಕ್ಕೇ ವ್ಯಾಖ್ಯಾನವನ್ನಿತ್ತ ಅಭಿನವಗುಪ್ತರಿಗೆ ತುಂಬ ಪ್ರಿಯವಾದ ದರ್ಶನದ ಹೆಸರೂ ಹೌದು. ಇದು ಗುರುತಿಸುವಿಕೆ, ನೆನಪು ಎಂಬ ಅರ್ಥವನ್ನುಳ್ಳದ್ದು. ಆದ್ದರಿಂದ ನಾಟ್ಯ-ನೃತ್ಯಕ್ಕೇ ತಮ್ಮನ್ನು ತೆತ್ತುಕೊಂಡ, ಶ್ರದ್ಧಾವಂತ, ಹೊಸತನದ ಭರವಸೆಯುಳ್ಳ ಪ್ರಬುದ್ಧರೆನಿಸುವ ಯುವ ಕಲಾವಿದರನ್ನು ಪರಿಚಯಿಸುವ, ಗುರುತಿಸುವ ಅಂಕಣಕ್ಕೆ ಅಭಿಜ್ಞಾನವೆಂದು ನಾಮಕರಣ ಮಾಡಿ ನಮ್ಮ ನಡುವಿನ ಅಪೂರ್ವವೆನಿಸುವ ಪ್ರತಿಭೆಗಳ ಅನಾವರಣಕ್ಕೆ ಮುಂದಾಗುತ್ತಿದೇವೆ. ಅಂಕಣದ ಹೆಸರು ಮತ್ತು ಇಂತಹುದೊಂದು ಅಂಕಣ ಆರಂಭಿಸುವಲ್ಲಿ ಸೂಚಿಸಿದ ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಮೊದಲಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಅಂದಹಾಗೆ ನಿಮ್ಮ ನಡುವಿನ ವಿಶೇಷ ನೃತ್ಯಪ್ರತಿಭೆಗಳನ್ನು ಅವರ ನುಡಿಗಳಲ್ಲಿ ಆಲಿಸಿ ಅಂದವಾಗಿ (ಕನ್ನಡ/ಇಂಗ್ಲೀಷ್) ಲೇಖನಿಯ ಅಚ್ಚೊತ್ತಿ. ಗುಣಮಟ್ಟದ ಬರೆಹಗಳಿಗೆ ಸದಾ ಅವಕಾಶಗಳಿವೆ.
Abhijnana- column dedicated to budding artists who are sincere,special to the dance field. Abhijnana- The word is extracted by Abhinvagupta’s commentary which gives the meaning- recognizing or nostalgia. This word is also famous from the extraordinary work of Kaladasa ‘ Abhijnana Shakuntala’. The name for this column was given by multilingual scholar Shatavadhani Dr. R.Ganesh.
Come; extend your hands in popularizing the names of special budding artists of your area.