ಅಂಕಣಗಳು

Subscribe


 

ಶಂಭೋ ಶಂಕರ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಯವರ ‘ಚಿನ್ಮಯಿ ಕವನ ಸಂಕಲನದಿಂದಾಯ್ದ ನಟರಾಜನ ನೃತ್ಯ ವಿಶೇಷವನ್ನು ಬಣ್ಣಿಸುವ ಯುಗಳಗೀತೆ)

ಶಂಭೋ ಶಂಕರ ಶಿವ ಶಿವ ಶಂಕರ

ಶಂಭೋ ಶಂಕರ ಶಿವ ಶಿವ ಶಂಕರ !

ನಟ : ರುದ್ರಭೀಕರ, ಅತಿಗಂಭೀರ;

ನಟಿ : ಸೌಮ್ಯ ಸುಂದರಾಕಾರ

ನಟ : ಜಗದ ಹುಟ್ಟಿಗೂ ಮೊದಲೆ ಪ್ರಕೃತಿಯೊಡ

ನಾಟ ಹೂಡಿರುವೆ ದೇವ

ದಿವ್ಯ ದೃಷ್ಟಿಯೆ ಸಾಕು ಜೀವರನು

ಕುಣಿಯತೊಡಗಿಸಿದೆ ದೇವ ||೧||

ನಟಿ : ಜಡತೆಯಲ್ಲಿ ಚೈತನ್ಯ ತುಂಬಿ, ಜೀ-

ವನದಿ ಚೆಲುವಿನಲೆ ಚೆಲ್ಲಿ

ಅಡವಿಯೆಲ್ಲ ರಸ ಹಸುರಿನಲ್ಲಿ ಸಿರಿ

ಸೊಬಗ ಸುರಿಸಲಿಹವಲ್ಲಿ ||೨||

ನಟ : ಜೀವಕಳೆಯಿಲ್ಲದಲೆ ಬತ್ತಿಹೋಗಿಹ ಜೀವ

ಕೊಳವಂದು ತುಂಬಿತ್ತು ನೋಡು

ಚೈತನ್ಯರಸದಲ್ಲಿ ಮಿಂದು, ಹುಲುಕಡ್ಡಿಗಳು

ಹಾಡಿದವು ಜೀವಿಗಳು ಹೊಸತು ಹಾಡು ||೩||

ನಟಿ : ಜೀವನದ ವಿಧವಿಧದ ಭಂಗಿಯಲಿ ಜೀವಿಗಳ

ಕುಣಿಸುತಿಹೆ ಓ ಮಹಾ ನಾಟ್ಯಾಕಾರ…

ಚಿತ್ತಭಿತ್ತಿಯ ಮೇಲೆ ಭಾವ ಕುಂಚವ ಪಿಡಿದು

ನಗೆಹೊಗೆಯ ಸುಳಿ ಚಿತ್ರಿಸುವೆ, ಚಿತ್ರಕಾರ ||೪||

ನಟ : ರಚಿಸುತಿಹೆ, ಕೆಡಿಸುತಿಹೆ; ಕೂಡಿಸುವೆ,ಅಗಲಿಸುವೆ

ನೀನೊಬ್ಬ ಭುವಿಯ ಹಿರಿಯಾಟಗಾರ

ನಿಮಿಷವೊಂದರಲಳಿಸಿ, ಮರುನಿಮಿಷದಲಿ ನಗಿಸಿ

ಮತ್ತೆ ನಿಶ್ಶಬ್ದತೆಯು ಮಂತ್ರಗಾರ ||೫||

ನಟಿ : ನೀನಂದು ಕಣ್ ಬಿಟ್ಟು ಬಳಿಕ ಮರೆಯಾದೆಯೈ

ಎಲ್ಲಿಯಡಗಿದೆ ದಿವ್ಯ ಪುರುಷ ?

ಪ್ರಕೃತಿಯೊಡಲಲಿ ತಮವು ಸುತ್ತಿ ನರ್ತಿಸುತಿಹುದು

ನೀಬೇಗ ಬಾ ನವ್ಯ ಪರುಷ ||೬||

ನಟ : ಸತ್ವವಡಗಿತೇ ರಜವು ಉಡುಗಿತೇ

ಹೋಯಿತೇನು ಬೆಳಕೆಲ್ಲ ?

ಚೆಲುವು ಬೆಳಕು, ಐಕ್ಯತೆಯು, ಬಾಳಿನಲಿ

ಬೇರೆ ಬೇರೆ ಬೇಕಿಲ್ಲ ||೭||

ನಟ : ಯಾವ ತಾಯಿಯ ಕೊರಲ ಮಾಂಗಲ್ಯ ಹರಿಯಿತೈ

ಏನು ರೋದನೆ ನಮ್ಮ ಹೃದಯದಲ್ಲಿ !

ಮೆಟ್ಟು ಕೆಟ್ಟುದನು, ನೀ ಕಟ್ಟುವಾ ಶಿವಪೂರ್ಣ

ಭಾವಮಾಂಗಲ್ಯವನು ಬದುಕಿನಲ್ಲಿ ||೮||

ನಟ : ಬರಲಿ ಬೆಂಕಿ ಹಣೆಗಣ್ಣನೊಡೆದು

ಓ ರುದ್ರ ! ಭೀಕರಾಕಾರ

ಸುಡುವುದೆಲ್ಲಮಂ ಸುಟ್ಟುಬಿಟ್ಟು ಶುಭ

ಸತ್ಯಬೀರು ಸಾಕಾರ ||೯||

ಕುಣಿಕುಣಿದು ಬಾ ನಿನ್ನ ಪ್ರಲಯತಾಂಡವ ರಚಿಸಿ

ದಿಕ್ತಟಕು ಬಿತ್ತರಿಸು ಶಂಭೋ

ಒಳಿತೊಂದನೇ ಉಳಿಸಿ, ಆಶಿವನೆಲ್ಲವ ನುಂಗಿ

ಬಾನು ಭುವಿಯಂತರವ ತುಂಬೋ ||೧೦||

ನಟಿ : ರವಿಕಿರಣಗಳ ಬೆಳಕು, ಬರಿ, ಜಗವಸುತ್ತದೆಯೆ

ನಮ್ಮುಸಿರಿನೊಳಗಿಳಿದು ಬರಲಿ

ಶಿವ ಬೆಳಕು ಬರಲೆದೆಯು ಬೆಳಗಿ ತೊಳಗಲು ದಿವ್ಯ

ಶೂನ್ಯ ನೆಲಸಿರೆ ಸಚ್ಚಿದಾನಂದ ತರಲಿ ||೧೧||

Leave a Reply

*

code