ಅಂಕಣಗಳು

Subscribe


 

ಹಸ್ತಮಯೂರಿ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭರತನಾಟ್ಯದ ಆಂಗಿಕಾಭಿನಯದಲ್ಲಿ ಮುಖ್ಯವಾದದ್ದು ಹಸ್ತಮುದ್ರೆಗಳು. ನಾನಾಭಾವನೆಗಳನ್ನು ಸೂಚಿಸಲು ನಾನಾ ಹಸ್ತಗಳನ್ನು ಬಳಸಲಾಗುತ್ತದೆ. ಉದ್ದಿಷ್ಟಾರ್ಥದ ಅಭಿವ್ಯಂಜನೆಗೆ, ಧ್ಯಾನಾನುಕೂಲತೆಗೆ, ಶರೀರ ಸೌಖ್ಯ ಹತೋಟಿಗೆ ಬಳಸಲಾಗುವ ಹಸ್ತಗಳು ಶಾಸ್ತ್ರರೀತ್ಯಾ ನರ್ತನಪ್ರಕಾರಗಳಲ್ಲಿ ಬಳಸಲ್ಪಡುತ್ತದೆ. ಆದರೆ ಹಲವರಿಗೆ ಆ ಹಸ್ತಗಳ ನಿರ್ದಿಷ್ಟ ಪರಿಚಯ, ಅವು ಮಾಡುವ ಸಂವಹನ ಸಾಧ್ಯತೆಗಳ ಬಗೆಗೆ ಅಷ್ಟಾಗಿ ಅರಿವಿಲ್ಲ. ಈ ನಿಟ್ಟಿನಲ್ಲಿ ನೃತ್ಯಕ್ಷೇತ್ರದಲ್ಲಿ ವಿವರಿಸಲಾದ ಹಸ್ತಮುದ್ರೆಗಳ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನ ಹಸ್ತ ಮಯೂರಿ ಪ್ರತೀ ಸಂಚಿಕೆಗೊಂದರಂತೆ ಹಸ್ತಮುದ್ರೆಗಳ ಲಕ್ಷಣ, ವಿನಿಯೋಗ ಅವುಗಳ ಬಳಕೆ, ಮತ್ತು ಇತರ ಸಾಧ್ಯತೆಗಳ ಕುರಿತಂತೆ ಕಿರುಪರಿಚಯವನ್ನು ಮಾಡಲಾಗುವುದು. ಹಸ್ತದ ಕುರಿತಾಗಿ ನಿಮ್ಮ ಗಮನಕ್ಕೆ ಬಂದ ಸಂಗತಿಗಳನ್ನು ಇಲ್ಲಿ ಚರ್ಚಿಸಬಹುದು.

ಪ್ರತಿಯೊಂದು ಹಸ್ತಗಳ ಬಳಕೆ, ವಿನಿಯೋಗವಷ್ಟೇ ಅಲ್ಲದೆ, ಅದರ ಮೂಲ ಕಲ್ಪನೆಯ ಬಗೆಗೆ ಮತ್ತು ದೈನಂದಿಕ ಜೀವನದಲ್ಲಿ ಅದರ ಪಾತ್ರವನ್ನು ವಿವೇಚಿಸುವುದು ಹಸ್ತಮಯೂರಿಯ ಉದ್ದೇಶ. ಜೊತೆಗೆ ನೃತ್ಯದ ಆರೋಗ್ಯಮುಖಗಳನ್ನೂ ನೋಡಬೇಕೆಂಬುದು ಭ್ರಮರಿಯ ಹಂಬಲ. ನೃತ್ಯದಲ್ಲಿ ಬಳಸುವ ಹಸ್ತಗಳನ್ನು, ಅದರ ಆರೋಗ್ಯ ಸಂಬಂಧಿ ವಿಚಾರಗಳನ್ನು ಸಂಚಿಕೆಗೊಂದರಂತೆ ಪ್ರಸ್ತುತಪಡಿಸುತ್ತಲಿದ್ದೇವೆ. ನೃತ್ಯವೆಂಬುದು ಮನರಂಜನೆ ಮಾತ್ರವಲ್ಲ, ಅದು ಆರಾಧನೆ; ಅದು ಸಂವಹನ ; ಕಲಿಯುವಾತನಿಗೂ, ಕಲಿಸುವಾತನಿಗೂ, ಕಲಾವಿದನಿಗೂ ಮಾನಸಿಕ ಶಿಕ್ಷಣ ಕೂಡಾ!

* ಶಿಖರ ಹಸ್ತ

* ಮುಷ್ಠಿ ಹಸ್ತ

* ಶುಕತುಂಡ ಹಸ್ತ

* ಅರಾಳ(ಲ) ಹಸ್ತ

* ಅರ್ಧಚಂದ್ರ ಹಸ್ತ

* ಮಯೂರ ಹಸ್ತ

* ಕರ್ತರೀಮುಖ ಹಸ್ತ

* ಅರ್ಧ ಪತಾಕ ಹಸ್ತ

* ತ್ರಿಪತಾಕಹಸ್ತ

* ಅಸಂಯುತ ಹಸ್ತಗಳು

Leave a Reply

*

code