ಅಂಕಣಗಳು

Subscribe


 

ಭಕ್ತಿ ಶೃಂಗಾರದ ಬಳಕೆ ಎಷ್ಟು ಔಚಿತ್ಯ?

Posted On: Monday, February 14th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

ಗಂಡು ಹೆಣ್ಣಿನ ಪ್ರೀತಿ ಬೇರೆ ಯಾವ ಬಗೆಯ ಸಂಬಂಧದ ಪ್ರೀತಿ, ಮಿಲನಕ್ಕಿಂತಲೂ ಉತ್ಕಟ. ಅದರಲ್ಲಿ ಪರಮಾತ್ಮನನ್ನು ಆರೋಪಿಸಿ ನೋಡುವ ಕ್ರಮ ಇತ್ತೀಚೆಗೆ ವ್ಯಾಪಕ. ಆದರೆ ಕೇವಲ ಪರಮಾತ್ಮ ಜೀವಾತ್ಮ ಎಂದಿರುವುದಷ್ಟೇ ಸಾಕಾಗುವುದಿಲ್ಲ, ಅದನ್ನು ಪೂರ್ಣವಾಗಿ ಒಪ್ಪಲಾಗುವುದಿಲ್ಲ್ಲ ಎಂಬುದಿರುವುದಕ್ಕೇ ಅಲ್ಲವೇ, ನಾಯಕ ನಾಯಿಕಾ ಭಾವ ಬಂದದ್ದು? ಶೃಂಗಾರ ಬರೀ ಭಕ್ತಿ ಎಂದಾಗುತ್ತಿದ್ದರೆ ಬರೀ ಸ್ವಾಧೀನ ಪತಿಕೆ ಸಾಕಾಗಿರ್ತಿತ್ತಲ್ವಾ? ಆದರೆ ಅದಷ್ಟೇ ಸಾಕಾಗುವುದಿಲ್ಲ ಎಂದಿದ್ದಕ್ಕೇ ಉಳಿದ ೭ ಬಗೆಯ ಪರಕೀಯ ನಾಯಿಕೆಯರು ಇರುವುದು. ಹಾಗೆ ನೋಡಿದರೆ ಪರಮಾತ್ಮನಿಗೆ ನಾವೆಲ್ಲರೂ ಪರಕೀಯರೆ. ಆದ್ದರಿಂದ ಭಾವ-ರಸ ಇಲ್ಲದಿದ್ದರೆ ಅಂತಹ ಶೃಂಗಾರದಿಂದೇನು ಪ್ರಯೋಜನ? ಶೃಂಗಾರವನ್ನು ಕಲಾವಿದ ತನ್ನೊಳಗೆ ಅನುಭವಿಸುತ್ತಾ ಹೋದರೆ ಮಾತ್ರ ರಸಸಂವಹನ ಸಾಧ್ಯ.

ದೇವದಾಸಿಗಳು ಭಕ್ತಿ ಶೃಂಗಾರವನ್ನು ಮಾಡುತ್ತಿರಲಿಲ್ಲ. ಜೊತೆಗೆ ತಂಜಾವೂರು ಸಹೋದರರೂ ಭಕ್ತಿ ಶೃಂಗಾರವನ್ನು ಪ್ರತಿಪಾದಿಸಲಿಲ್ಲ. ಅಷ್ಟೇ ಏಕೆ, ಇಂದಿಗೆ ಅಭಿನಯಕ್ಕೆ ಆಧಾರವಾದ ಗೀತಗೋವಿಂದ ಅಷ್ಟಪದಿ, ಕ್ಷೇತ್ರಜ್ಞನ ಪದಗಳು, ತ್ಯಾಗರಾಜರಾದಿಯಾಗಿ ಹಲವು ವಾಗ್ಗೇಯಕಾರರು ಬರೆದ ರಚನೆಗಳ ಪೈಕಿ ಬಹುಪಾಲು ಆವರಿಸಿಕೊಂಡಿರುವುದು ಶೃಂಗಾರವೇ ಹೌದು. ಭಕ್ತಿ ಶೃಂಗಾರ ಏನಿದ್ದರೂ ರುಕ್ಮಿಣಿ ದೇವಿ, ಕೃಷ್ಣ ಅಯ್ಯರ್ ಕಾಲದಲ್ಲಿ ಬಂದದ್ದು. ಈ ಭಕ್ತಿ ಶೃಂಗಾರವನ್ನು ನೃತ್ಯದಲ್ಲಿ ಅಳವಡಿಸಿದ ರುಕ್ಮಿಣಿ ಕ್ರಮವನ್ನು ಪ್ರಶ್ನಿಸಿದ ಬಾಲಸರಸ್ವತಿಯವರು ಈ ವಿಚಾರದಲ್ಲಿ ಸಮ್ಮತಿ ಸೂಚಿಸಲಿಲ್ಲ. ಹಾಗಾಗಿ ಇಂದಿಗೆ ವ್ಯಾಪಕವಾಗಿ ಬೆಳೆದ ಭಕ್ತಿ ಶೃಂಗಾರವನ್ನು ಎಷ್ಟರಮಟ್ಟಿಗೆ ನಂಬಬೇಕು ಅಥವಾ ಬಿಡಬೇಕು ಅನ್ನುವುದೇ ಒಂದು ಸಮಸ್ಯೆ.

-ಲಲಿತಾ ಶ್ರೀನಿವಾಸನ್,

ಹಿರಿಯ ನೃತ್ಯ ಗುರುಗಳು ಮತ್ತು ಅಧ್ಯಕ್ಷರು,

ಕರ್ನಾಟಕ ನೃತ್ಯಕಲಾ ಪರಿಷತ್, ಬೆಂಗಳೂರು.

 

ಕ್ತಿ – ಶೃಂಗಾರಗಳ ಸಂಬಂಧ ಬಹಳ ಆಳವಾದ ವಿವೇಚನೆಯ ವಿಷಯ. ರಂಗಪ್ರದರ್ಶನದ ಚೌಕಟ್ಟಿನಲ್ಲಿ ಶೃಂಗಾರದ ಜೀವಂತಿಕೆ, ಭಕ್ತಿಗೆ ಉಂಟಾಗುವುದು ಕಷ್ಟಸಾಧ್ಯ. ಶಿವರಾಮ ಕಾರಂತರು ಈ ಬಗೆಗೆ ಬಹಳ ಹಿಂದೆಯೇ ಕಟು ವಿಮರ್ಶೆ ಮಾಡಿದ್ದುಂಟು.

-ಲಕ್ಷ್ಮೀಶ ತೋಳ್ಪಾಡಿ,

ಹಿರಿಯ ವಿದ್ವಾಂಸರು, ಚಿಂತಕರು,

ಶಾಂತಿಗೋಡು, ದಕ್ಷಿಣಕನ್ನಡ.

 

Leave a Reply

*

code