ಅಂಕಣಗಳು

Subscribe


 

ಒಳನೋಟ-ಶಿಶಿರ ಶೃಂಗಾರ ೨೦೧೦

Posted On: Monday, February 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

೧೯ ಡಿಸೆಂಬರ್ : ಸೌರಭ ಸಂಗೀತ ನೃತ್ಯಕಲಾ ಪರಿಷತ್‌ನ ಶಿಷ್ಯೆ ಶಿಬಾನಿ ಅಶೋಕ್ ಅವರ ನೃತ್ಯಾರ್ಚನೆ. ಸ್ಥಳ : ಕಾವೇರಿ ಕಲಾಕ್ಷೇತ್ರ, ಮಂಗಳೂರು.

೨೫ ಡಿಸೆಂಬರ್ : ಮಂಗಳೂರಿನ ಭರತ ನೃತ್ಯ ಸಭಾ ಆಯೋಜಿಸುವ ಡಾ. ವಸುಂಧರಾ ದೊರೆಸ್ವಾಮಿ ಅಭಿನಯಿಸುವ ‘ಪಾಂಚಾಲಿ’-ಏಕವ್ಯಕ್ತಿ ಯಕ್ಷಭರತ ಸಂಗಮ. ಸ್ಥಳ : ಪುರಭವನ, ಮಂಗಳೂರು.

೨೫ ಡಿಸೆಂಬರ್ : ಮೈಸೂರಿನ ಭೂಷಣ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆಂಡ್ ವಿಶುವಲ್ ಪ್ರೆಸೆಂಟೆಶನ್‌ನ ಗುರುಗಳಾದ ಭೂಷಣ್ ಮತ್ತು ಅಂಜನಾ ಭೂಷಣ್ ಅವರ ನೃತ್ಯ ಪ್ರದರ್ಶನ. ಸ್ಥಳ : ನಿಮಾಪರ ಡ್ಯಾನ್ಸ್ ಫೆಸ್ಟಿವಲ್. ೨೬ರಂದು : ಕೊನಾರ್ಕ್ ಡ್ಯಾನ್ಸ್ ಫೆಸ್ಟಿವಲ್, ಒರಿಸ್ಸಾ. ೨೭ರಂದು : ಬಾರಾಬತಿ ಡ್ಯಾನ್ಸ್ ಫೆಸ್ಟಿವಲ್, ಕಟಕ್. ೨೨ ಜನವರಿ : ಪೊಲ್ಲಾಚಿಯ ತಮಿಳು ಸಂಘ. ೨೩, ಜನವರಿಯಂದು : ಕಾಸ್ಮೋಪೊಲಿಟನ್ ಕ್ಲಬ್, ಕೊಯಮತ್ತೂರು.

೨೫, ೨೬ ಮತ್ತು ೨೭ ಡಿಸೆಂಬರ್ : ಕೆರೆಮನೆ ಶಿವರಾಮ ಹೆಗಡೆ ಜನ್ಮ ಮಹೋತ್ಸವ, ಇಡಗುಂಜಿ ಯಕ್ಷಗಾನ ಮಂಡಳಿ ಅಮೃತ ಮಹೋತ್ಸವ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಅಂಗವಾಗಿ ತೆಂಕು ಮತ್ತು ಬಡಗು ಯಕ್ಷಗಾನ ಬಯಲಾಟ, ‘ಅಮೃತ ಮಂಥನ’-‘ಅಮೃತ ವೀಕ್ಷಣ’-ಅಮೃತೋತ್ತರ ಅಭಿಯಾನ’ವೆಂಬ ಮೂರು ಪ್ರತ್ಯೇಕ ವಿಚಾರ ಸಂಕಿರಣದಲ್ಲಿ ಹತ್ತು ವಿಷಯಗಳ ಗೋಷ್ಠಿ, ಕೂಚಿಪುಡಿ-ಕಥಕಳಿ ನೃತ್ಯ ಪ್ರದರ್ಶನ, ಗುರುವಂದನ, ಸ್ಮೃತಿಹೊತ್ತಗೆ-ಸ್ಮೃತಿಚಕ್ರ ಬಿಡುಗಡೆ, ಕೆರೆಮನೆ ಶಂಭು ಹೆಗಡೆ ಪುತ್ಥಳಿ ಅನಾವರಣ, ಹೊಸ್ತೋಟ ಮಂಜುನಾಥ ಭಾಗವತರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ, ಮೂವತ್ತೊಂಭತ್ತು ಹಿರಿಯ ಕಲಾವಿದರಿಗೆ ವಿಶೇಷ ಸಮ್ಮಾನ, ವಸ್ತು ಪ್ರದರ್ಶನ. ಸ್ಥಳ : ಯಕ್ಷಾಂಗಣ, ಗುಣವಂತೆ, ಹೊನ್ನಾವರ.

೨೬ ಮತ್ತು ೨೭ ಡಿಸೆಂಬರ್ : ನೃತ್ಯ ಮಂಟಪ ಟ್ರಸ್ಟ್‌ನ ಮೂರನೇ ವಾರ್ಷಿಕೋತ್ಸವ. ಸ್ಥಳ : ಕಾವೇರಿ ಕಲಾಕ್ಷೇತ್ರ, ಮಡಿಕೇರಿ.

೨೭ ಡಿಸೆಂಬರ್ : ನೃತ್ಯ ಭಾರತಿ ಸಂಸ್ಥೆಯ ಶಿಷ್ಯೆಯರಾದ ಪವಿತ್ರಾ ರಾವ್ ಮತ್ತು ನಿಖಿತಾ ಅವರ ರಂಗಪ್ರವೇಶ. ಸ್ಥಳ : ಪುರಭವನ, ಮಂಗಳೂರು.

೨೮ ಡಿಸೆಂಬರ್ : ಸಮನ್ವಯ ಕಲಾ ಉತ್ಸವ. ಸ್ಥಳ : ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.

೧ ಜನವರಿ : ಸಾಯಿ ನೃತ್ಯೋತ್ಸವ. ಶಮಾ ಮತ್ತು ಸಂಜಯ್ ಅವರ ಶಿಷ್ಯರಿಂದ, ಸುಜಾತಾ ವೆಂಕಟೇಶ್, ಶ್ವೇತಾ ವೆಂಕಟೇಶ್ ಅವರುಗಳಿಂದ ಭರತನಾಟ್ಯ, ಯು‌ಎಸ್‌ಎಯ ಸುನಂದಾ ನಾಯರ್ ಅವರಿಂದ ಮೋಹಿನಿಯಾಟ್ಟಂ. ಸ್ಥಳ : ಸೇವಾಸದನ, ಬೆಂಗಳೂರು.

೫ ಜನವರಿ: ಸುರತ್ಕಲ್‌ನ ನಾಟ್ಯಾಂಜಲಿ ಸಂಸ್ಥೆಯ ರಜತವರ್ಷ ಉದ್ಘಾಟನೆ. ಸ್ಥಳ : ವಿದ್ಯಾದಾಯಿನಿ ಕಲಾಮಂದಿರ, ಸುರತ್ಕಲ್.

೭, ೮ ಮತ್ತು ೯ ಜನವರಿ : ವೀಣಾಮೂರ್ತಿ ವಿಜಯ್ ಅವರು ಸಂಯೋಜಿಸುವ ಎರಡನೇ ವರ್ಷದ ಅಂತರ್ರಾಷ್ಟ್ರೀಯ ನೃತ್ಯೋತ್ಸವ. ಸ್ಥಳ : ಸೇವಾಸದನ, ಬೆಂಗಳೂರು.

೮, ೯ ಮತ್ತು ೧೦ ಜನವರಿ : ಕಲ್ಪ ಸಂಸ್ಥೆ ಪ್ರಾಯೋಜಿಸುವ ದ್ವಿತೀಯ ವರ್ಷದ ಪ್ರಗ್ಜ್ಯೋತಿ ಡ್ಯಾನ್ಸ್ ಫೆಸ್ಟಿವಲ್. ಸ್ಥಳ : ರವೀಂದ್ರ ಭವನ್, ಗೌಹಾಟಿ.

೧೪ ಜನವರಿ : ಮಂಗಳೂರಿನ ಸನಾತನ ನಾಟ್ಯಾಲಯದ ‘ನೃತ್ಯೋತ್ಸವ’. ಸ್ಥಳ : ಪುರಭವನ, ಮಂಗಳೂರು.

೧೫ ಜನವರಿ : ಭರತ ನೃತ್ಯ ಸಭಾದ ತಿಂಗಳ ಕಾರ್ಯಕ್ರಮದಲ್ಲಿ ಡಾ. ಶ್ರೀವಿದ್ಯಾ ಮುರಳೀಧರ್ ಅವರ ಭರತನಾಟ್ಯ. ಸ್ಥಳ : ಪುರಭವನ, ಮಂಗಳೂರು.

೧೭ ಜನವರಿ : ಗಾನಭೂಷಣ ಉಷಾ ಈಶ್ವರ ಭಟ್ ಅವರ ನೇತೃತ್ವದ ಗೋಪಾಲಕೃಷ್ಣ ಮ್ಯೂಸಿಕ್ ಸ್ಕೂಲ್, ಕಾಸರಗೋಡು- ಸಂಸ್ಥೆಯ ೧೭ನೇ ವರ್ಷದ ವಾರ್ಷಿಕೋತ್ಸವ. ೧೫೦ ವಿದ್ಯಾರ್ಥಿಗಳಿಂದ ಸಂಗೀತ ಸುಧೆ ; ವಿಶೇಷ ಕಚೇರಿ : ಕುನ್ನಕುಡಿ ಬಾಲಮುರಳೀಕೃಷ್ಣ. ಸ್ಥಳ : ಲಲಿತಕಲಾಸದನ, ಕಾಸರಗೋಡು.

೨೧ ಜನವರಿ: ಕುರಿಯ ವಿಠ್ಠಲ ಶಾಸ್ತ್ರಿ ಯಕ್ಷಗಾನ ಸಂಸ್ಮರಣಾ ಪ್ರಶಸ್ತಿ ಪ್ರದಾನ ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಬಲಿಪ ನಾರಾಯಣ ಭಾಗವತರಿಗೆ. ಭಾಗವತ ಶ್ರೀಕರ ದಾಮ್ಲೆ ಅವರಿಗೆ ವಿಶೇಷ ಸನ್ಮಾನ. ಹೊಸನಗರ ಮೇಳದಿಂದ ಯಕ್ಷಗಾನ ಬಯಲಾಟ. ಸ್ಥಳ : ಶಾರದಾ ಸಭಾ ಭವನ, ಉಜಿರೆ.

೨೩ ಜನವರಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಗಡಿನಾಡು ಯಕ್ಷ ಪರಿಷತ್ತು ಸಹಯೋಗದಲ್ಲಿ ‘ಯಕ್ಷ ಪುನರ್ನವ’- ಸನ್ಮಾನ, ಕೃತಿ ಬಿಡುಗಡೆ., ಸಂವಾದ, ಗೋಷ್ಟಿ, ದಾಖಲೀಕರಣ, ಯಕ್ಷಗಾನ ಬಯಲಾಟ, ದೊಂದಿ ಬೆಳಕಿನ ಆಟ, ಯಕ್ಷಗಾನ ಬೊಂಬೆಗಳ, ರೇಖಾಚಿತ್ರಗಳ, ವೇಷಭೂಷಣಗಳ ಪ್ರದರ್ಶನ.

೨೩ ಜನವರಿ : ದೃಷ್ಟಿ ಡ್ಯಾನ್ಸ್ ಫೆಸ್ಟಿವಲ್. ನೃತ್ಯಗ್ರಾಮದ ಒಡಿಸ್ಸಿ, ಅನುರಾಧಾ ವಿಕ್ರಾಂತ್ ಅವರ ಭರತನಾಟ್ಯ, ನಾದಂ ಡ್ಯಾನ್ಸ್ ಎನ್ಸೆಂಬಲ್‌ರಿಂದ ಕಥಕ್, ಸೂರ್ಯಾ ರಾವ್ ಮತ್ತು ಪ್ರತಿಕ್ಷಾ ಕಾಶಿ ಅವರ ಕೂಚಿಪುಡಿ. ಸ್ಥಳ : ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.

೨೫ ಜನವರಿ : ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್‌ನ ನಿರ್ದೇಶಕಿ ವೈಜಯಂತಿ ಕಾಶಿ ಅವರ ಶಿಷ್ಯೆ ಪ್ರತೀಕ್ಷಾ ಕಾಶಿ ಅವರ ಕೂಚಿಪುಡಿ ನೃತ್ಯ ಪ್ರದರ್ಶನ, ಸ್ಥಳ : ನೃತ್ಯೋತ್ಸವ, ರವೀಂದ್ರ ನಾಟ್ಯ ಮಂಟಪ, ಮುಂಬೈ. ೧ ಫೆಬ್ರವರಿ : ಜಬಲ್ಪುರದ ಕಲಾಭವನದಲ್ಲಿ ನಡೆಯುವ ನೃತ್ಯೋತ್ಸವ.

೨೯ ಜನವರಿ : ವೈಜಯಂತಿ ಕಾಶಿ ಅವರ ಶಿಷ್ಯ ಗುರುರಾಜ್ ಅವರಿಂದ ‘ಶಿವೋಹಂ’. ಸ್ಥಳ : ಪುರುಷರ ನೃತ್ಯೋತ್ಸವ, ಜಯದೇವ ಭವನ, ಭುವನೇಶ್ವರ.

೩೧ ಜನವರಿ : ಶ್ರೀಕೃಷ್ಣ ಮಠ ಮತ್ತು ರಾಧಾಕೃಷ್ಣ ನೃತ್ಯ ನಿಕೇತನ ಆಚರಿಸುವ ಭರತಮುನಿ ಜಯಂತ್ಯುತ್ಸವ ಮತ್ತು ಶ್ರೀ ರಾಧಾಕೃಷ್ಣ ತಂತ್ರಿ ಸಂಸ್ಮರಣಾ ಮಹೋತ್ಸವ. ‘ನೃತ್ಯಾರ್ಪಣ’ ಮತ್ತು’ ರಾಮಾಯಣ ದರ್ಶನಂ’ ನೃತ್ಯರೂಪಕ. ಕರ್ನಾಟಕ ಕಲಾಶ್ರೀ ಡಾ.ಸರ್ವೋತ್ತಮ ಕಾಮತ್, ಗುರುಕುಲಭೂಷಣ ವಿದ್ವಾನ್ ಯು.ಕೆ.ಪ್ರವೀಣ್, ವಿದುಷಿ ಸೀತಾ ಕೋಟೆ, ವಿದುಷಿ ಕೃಪಾ ಫಡ್ಕೆ ಅವರಿಗೆ ‘ಭರತ ಪ್ರಶಸ್ತಿ’. ಸ್ಥಳ: ರಾಜಾಂಗಣ ಸಭಾಂಗಣ, ಉಡುಪಿ.

೧ ಫೆಬ್ರವರಿ : ವಿವಿಧ ಕಲಾವಿದರ ಒಗ್ಗುಡುವಿಕೆಯಲ್ಲಿ ಸಾಯಿ ನೃತ್ಯೋತ್ಸವ. ಸ್ಥಳ : ಸೇವಾ ಸದನ, ಬೆಂಗಳೂರು.

೩,೪ ಮತ್ತು ೫ ಫೆಬ್ರವರಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸುವ ‘ವಿದ್ಯಾರ್ಥಿ ಯಕ್ಷಗಾನ ಸಂಭ್ರಮ’. ಒಂಭತ್ತು ಕಾಲೇಜುಗಳ ಯಕ್ಷಗಾನ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಮತ್ತು ಹಿರಿಯ ಯಕ್ಷಗಾನ ವಿದ್ವಾಂಸರಿಂದ ಅವಲೋಕನ. ಸ್ಥಳ : ಪುರಭವನ, ಮಂಗಳೂರು.

೧೬ ಮತ್ತು ೨೩ ಫೆಬ್ರವರಿ : ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್‌ನಿಂದ ‘ಕೃಷ್ಣಾರ್ಪಣಂ’. ಸ್ಥಳ : ಗುರು ಭಕ್ತಿ ಉತ್ಸವ, ಮಂತ್ರಾಲಯ; ಮತ್ತು ಕೊನಾರ್ಕ್ ಡ್ಯಾನ್ಸ್ ಫೆಸ್ಟಿವಲ್, ಕೊನಾರ್ಕ್.

Leave a Reply

*

code