ಅಂಕಣಗಳು

Subscribe


 

ಪರಿಷ್ಕಾರ ಬೇಕಿದೆ ಕಲಾಮನಸ್ಸುಗಳಿಗೆ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: -ಡಾ| ಎಂ. ಪ್ರಭಾಕರ ಜೋಷಿ ಮತ್ತು ಇತರರು

ಇತ್ತೀಚೆಗೆ ಬೆಂಗಳೂರಲ್ಲಿ ವಿದುಷಿ ವೈಜಯಂತಿ ಕಾಶಿ ಅವರು ಪ್ರದರ್ಶಿಸಿದ ಶ್ರೀಕೃಷ್ಣ ಜೀವನ ಸೃಜನಶೀಲ ಪ್ರಯೋಗದಲ್ಲಿ ಯಕ್ಷಗಾನ ಮಹಾಕವಿ ಪಾರ್ತಿಸುಬ್ಬರ ಪೂತನಾಮೋಕ್ಷದ ಪದ್ಯಗಳನ್ನು ಅಳವಡಿಸಿದ್ದರು. ಅದರಂತೆಯೇ ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರಾದಾಮಣಿ ಶೇಖರ್ ಅವರ ಶಿಷ್ಯೆ ಶಾಲ್ಮಲಿ ಘಾಟೆ- ಇವರ ಗುರುವಂದನದಲ್ಲಿ ಅಭಿನಯಕ್ಕಾಗಿ ಪಾರ್ತಿಸುಬ್ಬರ ಶೂರ್ಪನಖಾ ಪ್ರಕರಣವನ್ನು ಸಂಯೋಜಿಸಲಾಗಿತ್ತು. ಈ ಪ್ರಯೋಗಗಳು ಎಂದೋ ಆಗಬೇಕಾದ್ದವುಗಳು. ನಮ್ಮ ಭರತನೃತ್ಯದಲ್ಲಿ ಬಳಸಬಹುದಾದ ನೂರಾರು ಪದ್ಯಗಳು ಯಕ್ಷಗಾನ ಪ್ರಸಂಗಗಳಲ್ಲಿವೆ. ಆಸಕ್ತರು ಗಮನ ಹರಿಸಿ ಯತ್ನಿಸಲೆಂದು ಆಶಯ.

-ಡಾ| ಎಂ. ಪ್ರಭಾಕರ ಜೋಷಿ, ಸಂಶೋಧಕರು, ಮಂಗಳೂರು.

ನೃತ್ಯದಲ್ಲಿ ಭಾವಾರ್ಥ ತಿಳಿಯದೆ ಅಭಿನಯ ಮಾಡಿದಲ್ಲಿ ರಸಾಸ್ವಾದನೆಗೆ ಭಂಗ ಬರುತ್ತದೆ ಎಂಬುದನ್ನು ಕಲಾವಿದರು, ನೃತ್ಯಸಂಯೋಜಕರು ಅರ್ಥ ಮಾಡಿಕೊಳ್ಳಬೇಕು. ಉದಾ:- ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ನೃತ್ಯ ಪ್ರದರ್ಶನದಲ್ಲಿ ಉಳ್ಳವರು ಶಿವಾಲಯವ ಮಾಡುವರು ವಚನದಲ್ಲಿ ಕಲಾವಿದೆಯು ಪ್ರದರ್ಶಿಸಿದ ಭಾವ ಯಾಕೋ ಅಪ್ರಸ್ತುತವೆನಿಸಿತು. ಅಪೇಕ್ಷಣೀಯವಲ್ಲದ ಹೆಚ್ಚಾದ ದುಃಖಭಾವ ವಚನದಲ್ಲಿರುವ ದೇಹವೇ ದೇವಾಲಯ ಎಂಬ ಧನ್ಯ ಭಾವವನ್ನೇ ಮರೆಸಿತ್ತು ಬದಲಾಗಿ ಶರಣನು ತಾನೂ ಏನೂ ಮಾಡಲೂ ಸಾಧ್ಯವಿಲ್ಲದ ಅಸಹಾಯಕ, ಹಣವಿದ್ದರೆ ತಾನೂ ದೇವಾಲಯ ಕಟ್ಟಿಬಿಡುತ್ತಿದ್ದೆ, ಅಂತಹ ಸಿರಿವಂತಿಕೆ ತನಗೆ ಬೇಕಿತ್ತು ಎಂಬುದನ್ನೇ ತೋರಿಸಿ ಕಸಿವಿಸಿ ಉಂಟು ಉಂಟುಮಾಡಿದ್ದು ಸುಳ್ಳಲ್ಲ. ಇಂತಹ ಸಂಯೋಜನೆಗಳಿಂದ ತಪ್ಪು ಅರ್ಥಗಳೇ ಜಾಸ್ತಿ ಎಂಬುದು ನನ್ನ ಭಾವನೆ. ಈ ನಿಟ್ಟಿನಲ್ಲಿ ಹಿರಿ-ಕಿರಿಯರೆನ್ನದೆ ಗುರು-ಕಲಾವಿದರುಗಳು ದಿಟ್ಟವಾಗಿ ಪ್ರಯತ್ನಿಸಿದರೆ ಪ್ರದರ್ಶಿಸುವವರಿಗೂ, ಜೊತೆಗೆ ನೋಡುಗರಿಗೂ ಧನ್ಯತೆ ಬಂದೀತು.

-ವಿಷ್ಣುಪ್ರಸಾದ್ ಎನ್., ಮಂಗಳೂರು.

Rhythmotion- ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ತರಬೇತಿ ಸಂಸ್ಥೆಯು ಆಗಸ್ಟ್ ೯ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆeಚಿಜಿ ಂiಜ Soಛಿieಣಥಿ ಗೆ ಧನಸಹಾಯ ನೀಡುವ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಸಂಸ್ಥೆಯ ಮತ್ತು ಶೈಲಾ ಕೊತ್ವಾಲ ಅವರ ಕಿವುಡರಿಗಾಗಿ ಇರುವ ಸಂಸ್ಥೆಯ ವಿಶೇಷ ವಿದ್ಯಾರ್ಥಿಗಳು ಈ ಕಾರ್ಯಕ್ರಮ ನಡೆಸಿಕೊಟ್ಟರು. ನೃತ್ಯ ಗುರುಗಳಾದ ಮಾಯಾ ರಾವ್, ಲಲಿತಾ ಶ್ರೀನಿವಾಸನ್, ಬೆಂಗಳೂರು ದೂರದರ್ಶನದ ನಿರ್ದೇಶಕ ಮಹೇಶ್ ಜೋಷಿ, ಏರ್ ಮಾರ್ಷಲ್ ದಾಸ್ತೂರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಇಂತಹ ವಿಶೇಷ ಕಾರ್ಯಕ್ರಮಗಳು ಮತ್ತಷ್ಟು ಮೂಡಿ ಬರಲಿ, ದಾರಿದೀಪವಾಗಲಿ.

-ಸಂಪಾದಕರು, ದೃಷ್ಟಿ ನಿಯತಕಾಲಿಕೆ, ಬೆಂಗಳೂರು.

There is a need to provide deliverance to millions of human emotions and transcend from the chaos surrounding us. It’s the way to relate with people and seek beauty in creation. It’s a means to dissolve differences and exemplify excellence and perseverance. Dance is a manifestation of serenity and divinity.

For the first time in the history of Indian dance, Mrs.Vyjayanthi Kashi’s Shmbhavi School of dance  trying to bring together all artists related to dance from different facets of life. It’s an effort to provide a platform for the flourishing artists and pay tributes to the prolific performers. Personal interactions, lecture demonstrations, workshops, dance games and competitions for children, youth and all geneal public… It’s all possible at the India’s first Dance Fair. This non stop extravaganza stretching from morning till night on 4th and 5th october 2008 at the Chitrakala Parishad, Kumara Krupa, Bangalore.

Leave a Reply

*

code