ಅಂಕಣಗಳು

Subscribe


 

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ- ಭಾಗ 8

Posted On: Thursday, April 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ರುಕ್ಮಿಣೀದೇವಿ ಅರುಂಡೇಲ್ ಅವರು ಸಂಯೋಜಿಸಿದ ನೃತ್ಯರೂಪಕ ಮತ್ತು ಅವುಗಳ ನಿರ್ಮಿತಿ ಕಾಲಗಳೆಡೆಗೆ

ಈ ಬಾರಿ ಒಮ್ಮೆ ದೃಷ್ಟಿ ಹಾಯಿಸೋಣವೇ?

rukmini devi arundale

ವಾಲ್ಮೀಕೀ ರಾಮಾಯಣ ( ಒಟ್ಟು ೬ ಭಾಗಗಳಲ್ಲಿ )

ಸೀತಾ ಸ್ವಯಂವರಂ      ೧೯೫೪

ಶ್ರೀ ರಾಮವನಾಗಮನಂ  ೧೯೬೦

ಪಾದುಕಾ ಪಟ್ಟಾಭಿಷೇಕಂ  ೧೯೬೦

ಶಬರಿ ಮೋಕ್ಷಂ   ೧೯೬೫

ಚೂಡಾಮಣಿಪ್ರದಾನಂ     ೧೯೬೮

ಮಹಾ ಪಟ್ಟಾಭಿಷೇಕಂ     ೧೯೭೦

ಭಾಗವತ ಮೇಳ

ಉಷಾ ಪರಿಣಯಂ೧೯೫೯

ರುಕ್ಮಾಂಗದ ಚರಿತ್ರಂ      ೧೯೫೯

ರುಕ್ಮಿಣೀ ಕಲ್ಯಾಣಂ        ೧೯೬೪

ಧ್ರುವ ಚರಿತ್ರಂ    ೧೯೭೧

ಕೊರವಂಜಿ

ಕುಟ್ರಾಲ ಕೊರವಂಜಿ೧೯೪೪

ಕಣ್ಣಪ್ಪರ್ ಕೊರವಂಜಿ      ೧೯೬೨

ಕೃಷ್ಣಮರಿ ಕೊರವಂಜಿ      ೧೯೭೧

ಇತರೆ ಸಂಯೋಜನೆಗಳು

ಕಾಳಿದಾಸನ ಕುಮಾರ ಸಂಭವಂ   ೧೯೪೭

ಜಯದೇವನ ಗೀತಗೋವಿಂದ       ೧೯೫೯

ರವೀಂದ್ರನಾಥ ಟಾಗೋರರ ಶ್ಯಾಮ         ೧೯೬೧

ಅಂಡಾಳ್ ಚರಿತ್ರಂ        ೧೯೬೧

ಕಾಳಿದಾಸನ ಅಭಿಜ್ಞಾನ ಶಾಕುಂತಲಂ       ೧೯೬೭

ಕುಚೇಲೋಪಾಖ್ಯಾನಂ    ೧೯೭೨

ಮತ್ಸ್ಯ ಕೂರ್ಮ ಅವತಾರಂ         ೧೯೭೪

ಮೀನಾಕ್ಷಿ ವಿಜಯಂ        ೧೯೭೭

ದಮಯಂತಿ ಸ್ವಯಂವರಂ ೧೯೭೮

ಬುದ್ಧಾವತಾರಂ  ೧೯೭೯

ಅಜಮಿಳೋಪಾಖ್ಯಾನಂ   ೧೯೮೦

ಮೇವಾರದ ಮೀರಾ        ೧೯೮೪

ಕುಟ್ರಾಲ ಕೊರವಂಜಿ : ಮಾನಸಿಕ, ಬೌದ್ಧಿಕ ನೆಲೆಯಲ್ಲಿ ಪರಿಪಕ್ವವಾಗಿ ಹೊರಬಂದ ಮೊದಲ ಸಂಯೋಜನೆ. ಇದರ ಪ್ರದರ್ಶನವನ್ನು ೧೯೪೬ರಲ್ಲಿ ನೋಡಿದ ಡಾ. ಜೇಮ್ಸ್ ಕಸಿನ್ ಮದ್ರಾಸಿನಿಂದ ಪ್ರಕಟವಾಗುತ್ತಿದ್ದ ‘ಸ್ವತಂತ್ರ’ ಎಂಬ ಜರ್ನಲ್‌ನಲ್ಲಿ ಹೀಗೆ ಬರೆಯುತ್ತಾರೆ ;

‘The rescuing from oblivion of a long forgotten work… would itself be an event of much importance to Tamil scholarship. But the artistic eye of Srimati Rukmini Devi saw the possibility of the revival of the forgotten dance-drama, not in the sense of putting new wine into old bottles, for no vestige of the exhilarating elements of music and dance remained; nor in the sense of putting old wine into new bottles for no modern dance or music had any affinity with the old Tamil verses… Happily…Vidwan K. Krishnamachariar…was entrusted the recreation of the musical expression of the poem; and the result has been a first class demonstration of what may be figuratively called artistic reincarnation, through which the spirit of tradition finds new life’.

ಹಾಗೆ ನೋಡಿದರೆ ಟೈಗರ್ ವರದಾಚಾರ್ಯರು ಕೊರವಂಜಿಗೆ ರಾಗ ಸಂಯೋಜನೆ ಮಾಡಲು ಹೊರಟವರಲ್ಲಿ ಮೊದಲಿಗರು ಎಂಬುದು ಅಷ್ಟಾಗಿ ಯಾರಿಗೂ ತಿಳಿದಿಲ್ಲ. ವರದಾಚಾರ್ಯರು ಸಂಯೋಜನೆ ಮಾಡುತ್ತಿದ್ದಾಗಲೇ ಅವರ ಸಹೋದರ ವೀಣಾ ಕೃಷ್ಣಮಾಚಾರ್ಯರು ಅದನ್ನು ಕೈಗೆತ್ತಿಕೊಂಡು ಮುಂದುವರೆಸಿದರು. ಕಾರಣ ಬೇರೇನಲ್ಲ ; ಕೊರವಂಜಿಗೆ ಶಾಸ್ತ್ರೀಯದ ರಾಗದ ಜೊತೆಗೆ ಜಾನಪದದ ಮಾದರಿಯ ರಾಗಸ್ಪರ್ಶವೂ ಬೇಕಿತ್ತು. ಆ ಹೊತ್ತಿಗೆ ಕಲಾಕ್ಷೇತ್ರದಲ್ಲಿ ಕಾರೈಕಲ್ ಶಾರದಾಂಬಳ್ ಅವರೂ ಇದ್ದುದರಿಂದ ಮತ್ತು ಅವರಿಗೆ ಕೊರವಂಜಿ ಸಂಪ್ರದಾಯಗಳ ಬಗ್ಗೆ ಅರಿವು, ಜ್ಞಾನವಿದ್ದುದರಿಂದ ನೃತ್ಯ ಸಂಯೋಜನೆಗೆ ಗಟ್ಟಿಯಾದ ಬಲ ಒದಗಿತ್ತು…

(ಸಶೇಷ)

*******

Leave a Reply

*

code