ಅಂಕಣಗಳು

Subscribe


 

ಅಭಿನಯ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ದಾಸಜ

ಅಭಿನಯವದೆಂದೆನಲು ಜೀವರಸ ಸುಧೆಯಕ್ಕು

ಅಭಿಮಾನದಿಂ ಕಾಯೆ ಕಲೆಯ ಚೆಲು ನೆಲೆಯಕ್ಕು

ಅಭಿಸರಣವಾತ್ಮಕುಂ ಶಾಂತತೆಯ ನೆಲೆಗಾಣ್ವ

ಚಿಂತನೆಯ ಮಾರ್ಗವಕ್ಕುಂ

ಅಭಿದಾನವಕ್ಕದುಂ ಸಾಧಿಪರ ಮತಿಗೆನಲು

ಕಬಳವದು ಜ್ಞಾನಿಗುಂ ಸಂಸ್ಕೃತಿಯ ಕಾಣ್ವಗುಂ

ಸಬಲವದು ಚಿತ್ತವೃತ್ತಿಯತೋರಮಿಗೆ

ಜಗದ ದೃಶ್ಯಮಂ ಪ್ರತಿಬಿಂಬಿಸಲ್

Leave a Reply

*

code