ಅಂಕಣಗಳು

Subscribe


 

ಅವಹಿತ್ಥ ಹಸ್ತ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

avahitta hasta

ಲಕ್ಷಣ: ಅಲಪದ್ಮ ಹಸ್ತಗಳನ್ನು ಎದೆಯ ಬಳಿ ಹಿಡಿದುಕೊಂಡರೆ ಅವಹಿತ್ಥ ಹಸ್ತ. ಅವಹಿತ್ಥ ಎಂದರೆ ಮನಸ್ಸಿನ ಭಾವನೆಯನ್ನು ಮರೆಮಾಚುವುದು ಎಂಬರ್ಥವಿದೆ. ಲಾಸ್ಯರಂಜನ, ಹಸ್ತ ಮುಕ್ತಾವಳಿ, ನಾಟ್ಯಶಾಸ್ತ್ರದ ಪ್ರಕಾರ ಶುಕತುಂಡಹಸ್ತಗಳನ್ನು ಎದೆಗೆ ಅಭಿಮುಖವಾಗಿಸಿ, ಬಾಗಿಸಿ, ಕ್ರಮೇಣ ಅಂಗೈ ಕೆಳಗಾಗುವಂತೆ ಮಾಡುವುದು ಅವಹಿತ್ಥ ಎನ್ನಲಾಗಿದೆ. ಅವಹಿತ್ಥಕವೆಂಬ ಕರಣ ಮತ್ತು ನಾಟ್ಟಡವು ಎಂಬ ಅಡವು ಚಲನೆಯಲ್ಲಿ ಈ ಹಸ್ತದ ಬಳಕೆಯಿದೆ.

ವಿನಿಯೋಗ : ಶೃಂಗಾರ, ರತಿಭಾವ ತೋರಿಸುವುದು, ಚೆಂಡುಗಳನ್ನು ಹಿಡಿಯುವುದು, ಸ್ತನಗಳು, ಆಟ, ಸಲ್ಲಾಪ.

ಇತರೇ ವಿನಿಯೋಗ : ದೌರ್ಬಲ್ಯ, ನಿಶ್ವಾಸ, ಮೈ ಬಡಕಲಾಗಿದೆಯೆಂದು ನೋಡಿಕೊಳ್ಳುವುದು, ಚಿಂತೆ-ಯೋಚನೆ, ಶೃಂಗಾರ ನಾಟ್ಯ, ಹಸ್ತಚಾರಿಯೆಂಬ ನಾಟ್ಯ, ಕೃಶತ್ವ, ಹೆದರಿದ ಸ್ತ್ರೀ, ಮುಚ್ಚಿಟ್ಟ ವಸ್ತು, ಆತಂಕ, ತೆಳುದೇಹ, ಲೋಕೋಪಚಾರಗಳೀಂದ ನಿರುತ್ಸಾಹಿತನಾದವನು, ಕಷ್ಟಕರವಾದ ವಿಷಯ, ಹರಿಯುವುದು, ಕೆಳಗೆ ಬೀಳುವುದು, ರೋಗ, ಉತ್ಕರ್ಷ, ನಿರುತ್ಸಾಹ, ಅತೀ ಆಸಕ್ತಿ.

ನಿತ್ಯಜೀವನದಲ್ಲಿ ಈ ಹಸ್ತವನ್ನು ‘ಆಹಾ…ಇವರ ಭಾವವೇ’ ಎಂಬ ವ್ಯಂಗ್ಯ ಭಾವದ ಸಂವಹನಕ್ಕೆ ಬಳಸುತ್ತಾರೆ. ಅವಹಿತ್ಥದಿಂದ ಹೆಬ್ಬೆರಳ ತುದಿಯನ್ನು ಮಧ್ಯಬೆರಳಿನ ತುದಿಗೆ ಸೇರಿಸುವುದರಿಂದ ಮುಖಹಂಸ ಎಂಬ ಇನ್ನೊಂದು ಹಸ್ತಪ್ರಕಾರ ಏರ್ಪಡುತ್ತದೆ. ಇದರ ವಿನಿಯೋಗ : ಮಿಣುಕು ಹುಳ.

(ಇಲ್ಲಿಗೆ ನೂಪುರ ಭ್ರಮರಿಯ ಪ್ರಥಮ ಸಂಚಿಕೆಯಿಂದಲೇ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿದ್ದ ೨೮ ಅಸಂಯುತ ಮತ್ತು ೨೪ ಸಂಯುತ ಹಸ್ತಗಳ ವಿವರಣೆ ಮುಕ್ತಾಯವಾಗುತ್ತದೆ. ಮುಂದಿನ ಸಂಚಿಕೆಯಿಂದ ಹಸ್ತಗಳ ಕುರಿತ ಅನೇಕ ಶೋಧಗಳ ಕುರಿತ ಲೇಖನ ನಿಮ್ಮ ಮುಂದೆ.)

Leave a Reply

*

code