Author: ವಿದ್ವಾನ್ ಮಹೇಶ ಭಟ್ ಹಾರ್ಯಾಡಿ, ಉಡುಪಿ
ಷಣ್ಮುಖಪ್ರಿಯರಾಗ (ಮೊದಲನೆಯ ಚರಣದ ಎರಡನೆಯ ಸಾಲಿನಲ್ಲಿ “ಷಣ್ಮುಖಪ್ರಿಯ” ಎಂದು ರಾಗಮುದ್ರೆ ಇದೆ.)
ಸೇವೇ ತವ ಚರಣೌ ಲಂಬೋದರ
ಬಹುಜನ್ಮಾರ್ಜಿತಕರ್ಮಚಯಂ ಹರ ||ಪ||
(ಬಹು-ಜನ್ಮ-ಅರ್ಜಿತ-ಕರ್ಮ-ಚಯಂ ಹರ)
ಸಕಲಸುರಾಸುರಪ್ರಥಮಪೂಜಿತ
(ಸಕಲ-ಸುರ-ಅಸುರ-ಪ್ರಥಮ-ಪೂಜಿತ)
ಷಣ್ಮುಖಪ್ರಿಯ ಗಿರಿಜಾಜಾತ
(ಷಣ್ಮುಖ-ಪ್ರಿಯ ಗಿರಿಜಾ-ಜಾತ)
ಅಜ್ಞಾನತಮೋಭೇದನಭಾಸ್ಕರ
(ಅಜ್ಞಾನ-ತಮೋ-ಭೇದನ-ಭಾಸ್ಕರ)
ಪಾತ್ರಸ್ಥಿತರಸಮಯಮೋದಕಧರ ||
(ಪಾತ್ರ-ಸ್ಥಿತ-ರಸಮಯ-ಮೋದಕ-ಧರ)
ಜಗತೀಸೃಷ್ಟಿಸ್ಥಿತಿಲಯಕಾರಣ
(ಜಗತೀ-ಸೃಷ್ಟಿ-ಸ್ಥಿತಿ-ಲಯ-ಕಾರಣ)
ವಾರಣಮುಖ ನತದುರಿತನಿವಾರಣ
(ವಾರಣ-ಮುಖ ನತ-ದುರಿತ-ನಿವಾರಣ)
ಯೋಗಿಮನೋನೀರಜಮಕರಂದ
(ಯೋಗಿ-ಮನೋ-ನೀರಜ-ಮಕರಂದ)
ಶಿವತಾಂಡವಸಮವಾಪ್ತಾನಂದ ||
(ಶಿವ-ತಾಂಡವ-ಸಮವಾಪ್ತ-ಆನಂದ)
ರಕ್ತಸುಮಾರ್ಚಿತಪಾದ ವಿರಕ್ತ
(ರಕ್ತ-ಸುಮ-ಅರ್ಚಿತ-ಪಾದ ವಿರಕ್ತ)
ಸತತಂ ಭಕ್ತೋದ್ಧರಣೋದ್ಯುಕ್ತ
(ಸತತಂ ಭಕ್ತ-ಉದ್ಧರಣ-ಉದ್ಯುಕ್ತ)
ವಾಣೀವತ್ಸಲಹೃದಯಾರಾಧಿತ
(ವಾಣೀ-ವತ್ಸಲ-ಹೃದಯ-ಆರಾಧಿತ)
ಸಂಸಾರಾಂಬುಧಿತಾರಣಪೋತ ||
(ಸಂಸಾರ-ಅಂಬುಧಿ-ತಾರಣ-ಪೋತ)
ಪ್ರತಿಪದಾರ್ಥ : ಸೇವೇ – ಸೇವಿಸುವೆನು ; ತವ – ನಿನ್ನ ; ಚರಣೌ – ಪಾದಗಳನ್ನು ; ಲಂಬೋದರ – ಗಣಪತಿಯೇ ; ಬಹುಜನ್ಮಾರ್ಜಿತಕರ್ಮಚಯಂ – ಹಲವಾರು ಜನ್ಮಗಳಲ್ಲಿ ಸಂಪಾದಿಸಲ್ಪಟ್ಟ ಕರ್ಮಗಳ ರಾಶಿಯನ್ನು ; ಹರ – ನಿವಾರಿಸು ; ಸಕಲಸುರಾಸುರಪ್ರಥಮಪೂಜಿತ – ಎಲ್ಲ ದೇವತೆಗಳಿಂದ ಮತ್ತು ರಾಕ್ಷಸರಿಂದ ಮೊದಲಿಗೆ ಆರಾಧಿತನಾದವನೇ; ಷಣ್ಮುಖಪ್ರಿಯ – ಸ್ಕಂದನಿಗೆ ಪ್ರಿಯನಾದವನೇ; ಗಿರಿಜಾಜಾತ – ಪಾರ್ವತೀಪುತ್ರನೇ; ಅಜ್ಞಾನತಮೋಭೇದನಭಾಸ್ಕರ – ಅಜ್ಞಾನವೆಂಬ ಕತ್ತಲನ್ನು ಸೀಳುವ ಸೂರ್ಯನೇ; ಪಾತ್ರಸ್ಥಿತರಸಮಯಮೋದಕಧರ – ಪಾತ್ರೆಯಲ್ಲಿರುವ ರಸಭರಿತವಾದ ಮೋದಕಗಳನ್ನು ಹಿಡಿದಿರುವವನೇ; ಜಗತೀಸೃಷ್ಟಿಸ್ಥಿತಿಲಯಕಾರಣ – ಜಗತ್ತಿನ ಹುಟ್ಟು-ಇರವು-ಅಳಿವುಗಳಿಗೆ ಕಾರಣನಾದವನೇ; ವಾರಣಮುಖ – ಆನೆಯ ಮೊಗದವನೇ; ನತದುರಿತನಿವಾರಣ – ನಮಸ್ಕರಿಸಿದವರ ದುರಿತಗಳನ್ನು ದೂರಮಾಡುವವನೇ; ಯೋಗಿಮನೋನೀರಜಮಕರಂದ – ಯೋಗಿಗಳ ಮನಸ್ಸೆಂಬ ಕಮಲದ ಮಕರಂದವಾಗಿರುವವನೇ; ಶಿವತಾಂಡವಸಮವಾಪ್ತಾನಂದ – ನಟರಾಜನ ತಾಂಡವದಿಂದ ಹೊಂದಲ್ಪಟ್ಟ ಆನಂದವನ್ನುಳ್ಳವನೇ; ರಕ್ತಸುಮಾರ್ಚಿತಪಾದ – ಕೆಂಪು ಹೂಗಳಿಂದ ಅರ್ಚಿಸಲ್ಪಟ್ಟ ಪಾದಗಳನ್ನುಳ್ಳವನೇ; ವಿರಕ್ತ – ವೈರಾಗ್ಯಶಾಲಿಯೇ; ಸತತಂ – ಯಾವಾಗಲೂ; ಭಕ್ತೋದ್ಧರಣೋದ್ಯುಕ್ತ – ಭಕ್ತರನ್ನು ಉದ್ಧರಿಸಲು ಪ್ರವೃತ್ತನಾಗುವವನೇ; ವಾಣೀವತ್ಸಲಹೃದಯಾರಾಧಿತ – ವಾಣೀವತ್ಸಲನ ಮನಸ್ಸಿನಿಂದ ಪೂಜಿಸಲ್ಪಟ್ಟವನೇ; ಸಂಸಾರಾಂಬುಧಿತಾರಣಪೋತ – ಸಂಸಾರ ಎಂಬ ಸಾಗರದಿಂದ ದಾಟಿಸುವ ನೌಕೆಯಾಗಿರುವವನೇ.