ಅಂಕಣಗಳು

Subscribe


 

ನಾಟ್ಯಮಯೂರಿ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


(ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರೂ ಪ್ರವೃತ್ತಿಯಲ್ಲಿ ಕಲಾಸಕ್ತರೂ, ಕರಕುಶಲಗಾರರೂ, ಕವಿಗಳೂ ಆದ ವಿಟ್ಲದ ಗೋಪಾಲಕೃಷ್ಣ ಭಟ್ ಅವರ ರಚನೆ. )

ನರ್ತನ ಮಾಡುತ ನಾಟ್ಯಮಯೂರಿ

ನರ್ತಿಸಿ ಬಂದಳು ರಂಗಸ್ಥಳಕೆ

ಕರದಲಿ ಜ್ಯೋತಿ ಬೆಳಗುತ ಬಂದಳು

ಬಾಗುತ ಬಳುಕುತ ನೃತ್ಯವ ಮಾಡಿ

ಕೊರಳಲಿ ಭಾರ ಮುತ್ತಿನ ಹಾರ

ಕಾಲಿನ ಗೆಜ್ಜೆಯ ಝಣಝಣ ನಾದ

ಕೈಯಲಿ ಉಂಗುರ ಪಟ್ಟೆ ಪೀತಾಂಬರ

ಥಕಧಿಮಿ ಮೃದಂಗದ ನಾದದ ಮೇಳ

ತಾಳಕೆ ಹೆಜ್ಜೆ ನಟನೆಯ ಲಜ್ಜೆ

ವಂದಿಸಿ ರಂಗಕೆ ಮಂಗಳ ಹಾಡುತ

ನರ್ತನ ಮಾಡುತ ನಾಟ್ಯಮಯೂರಿ

Leave a Reply

*

code