ಅಂಕಣಗಳು

Subscribe


 

ನೃತ್ತೋನ್ಮತ್ತೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಡಿ.ವಿ.ಜಿ

ಶುಭಾಂಗಿ ಲೋಲಲೋಚನೆ |

ತ್ರಿಭಂಗಿ ಬಂಧುರಾಂಗನೇ ||

ಸ್ವಭಾವ ಕೋಮಲೇಂಗನೇ |

ಅಭೀಷ್ಟನಾರೆ ಲಾಸನೇ ||

ನೃತ್ತದ ರಭಸವಿದೇನೇ ಎಲೆ

ಮತ್ತೇರಿ ಮೈಯ್ಯ ನೀ ಮರೆತಿಹೆಯೇನೆ ||

ಚಿತ್ತಜನಾವೇಶವೇನೆ – ನಿನ್ನ

ಪುತ್ತಳಿಯೊಡಲೇನು ಬಳಲದೇ ಬಾಲೆ ||

ತದ್ಧಿಮಿ ತಕಧಿಮಿ ಥೈಯಾ ತಾ

ತಜ್ಝಣು ತೋಂ ಝಣು ಝಣುರೆನುತಾ ||

ವಿದ್ಯಾಧರಾನಂದ ಭರಿತಾ ಇದು

ಮುದ್ದು ಮೋಹನೆ ನಿನ್ನ ಬೆಡಗಿನ ಕುಣಿತಾ ||

ಗೆಜ್ಜೆಯೆ ಘಲಿಘಲಿ ಘಲಿರೂ – ನಿನ್ನ

ಹೆಜ್ಜೆಯ ತಾಳದ ಥೈಥಕ್ಕರೆಗರೂ ||

ಕಜ್ಜಲ ನಯನದ ಪೊಗರೂ – ನೋಡೆ

ಹೃದ್ಯವೆ ಚನ್ನಕೇಶವನಿಗೆ ಮಿಗಿಲು ||

Leave a Reply

*

code