ಅಂಕಣಗಳು

Subscribe


 

…ಬಂತು ತುಂಬಿ ಗಾನ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಚೆನ್ನವೀರ ಕಣವಿ

…ಬಂತು ತುಂಬಿ ಗಾನ ತುಳುಕಿ

ಬಂತು ಚಿಟ್ಟೆ ಬಣ್ಣ ಸೋಕಿ,

ಒಂದು ಜೇನ ಹನಿಯ ಹುಡುಕಿ

ಒಂದು ಬಣ್ಣಕಾಗಿ ಬೆದಕಿ

ಭೃಂಗ ಗುಂಗು ಹಿಡಿಸಿತೋ

ಚಿಟ್ಟೆ ನೃತ್ಯವಾಡಿತು…

ಎಲೆ ಮಲ್ಲಿಗೆ, ಚೆಲು ಗುಲಾಬಿ

ಬಾರ ಚಿಟ್ಟೆ, ಬಾರ ತುಂಬಿ

ಮನದ ತುಂಗ ಶೃಂಗದಲ್ಲಿ

ಎನ್ನ ಹೃದಯ ರಂಗದಲ್ಲಿ

ದ್ವೈತವಿರದ ಕೂಟದಲ್ಲಿ

ಆತ್ಮನಮರ ತೋಟದಲ್ಲಿ

ಸದಾನಂದದೂಟೆಯಲ್ಲಿ

ಹಾಡಿ ನೃತ್ಯವಾಡಿರೇ

ಚಿರಂಜೀವಿಯಾಗಿರೇ…

Leave a Reply

*

code