ಅಂಕಣಗಳು

Subscribe


 

ಭರತನಾಟ್ಯದಲ್ಲಿ ಪುರುಷ – ಸ್ತ್ರೀಯರ ಅಸಮತೆ: ಒಂದು ವಿಮರ್ಶೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಪದ್ಮಜಾ ಸುರೇಶ್

ಪ್ರಥಮ ಸಂಚಿಕೆಯಲ್ಲಿ ಚರ್ಚಿಸಲಾದ ರಂಗ ಪ್ರವೇಶಲೇಖನದ ಕುರಿತಾಗಿ ಎರಡನೇ ಸಂಚಿಕೆಯ ಅಂಗಳದ ಮಾತು, ತಿಂಗಳ ಚರ್ಚೆ ಅಂಕಣದಲ್ಲಿ ಶತಾವಧಾನಿ ಡಾ| ಗಣೇಶ್, ನಾಟ್ಯಾಚಾರ್ಯ ಮುರಳೀಧರ ರಾವ್, ಕಲಾ ವಿಮರ್ಶಕ ಬಿ‌ಎಸ್‌ಎಸ್ ರಾವ್ ಅವರ ಅಭಿಪ್ರಾಯಗಳನ್ನು ಪ್ರಕಟಿಸಲಾಗಿತ್ತು.

ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ. ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಅದರಂತೆಯೇ ಕಳೆದ ಬಾರಿ ದರ್ಶನ ಭ್ರಮರಿಯಲ್ಲಿ ನಾಟ್ಯಾಚಾರ್ಯ ಮುರಳೀಧರ ರಾವ್ ಅವರಲ್ಲಿ ಕೇಳಲಾದ ಪ್ರಶ್ನೆ ‘ಭರತನಾಟ್ಯವನ್ನು ಕಲಿಯುವ ಹುಡುಗರ ಕಲಿಕಾ ಪ್ರಕ್ರಿಯೆ ಹೇಗಿರಬೇಕು? ಎಂದು. ಅವರು ಕೊಟ್ಟ ಉತ್ತರ ಬಹಳ ಸಮರ್ಪಕವೂ ಕೂಡ.

ಅದಕ್ಕೆ ಪೂರಕವಾಗಿಯೋ ಎಂಬಂತೆ ಕಲ್ಪತರು ಕಲಾವಿಹಾರ ನೃತ್ಯ ಸಂಸ್ಥೆಯ ಗುರು, ನಿರ್ದೇಶಕಿ ಪದ್ಮಜಾ ಸುರೇಶ್ ತಮ್ಮ ಅಭಿಪ್ರಾಯವನ್ನು ಲೇಖನದ ಮೂಲಕ ಬಿಂಬಿಸಿದ್ದಾರೆ. ಕನ್ನಡದಲ್ಲಿ ಓದಲು ಅನುಕೂಲವಾಗುವಂತೆ ಭಾವಾನುವಾದವನ್ನು ಇಲ್ಲಿ ಕೊಡಲಾಗಿದೆ.

ಸ್ತ್ರೀಯರು ನರ್ತನದಲ್ಲಿ ಸ್ತ್ರೀ ಹಾಗೂ ಪುರುಷ ಪಾತ್ರಗಳೆರಡಕ್ಕೂ ಹೊಂದಿಕೊಳ್ಳಬಲ್ಲರು. ಇದನ್ನೇ ಗಂಡಸರಿಗೂ ಅನ್ವಯಿಸಬಹುದೇ? ಸ್ತ್ರೀಯೊಳಗೂ ಒಬ್ಬ ಪುರುಷನಿದ್ದಾನೆಂದು ಭಾವಿಸಿ ಈ ಹೇಳಿಕೆಯನ್ನು ಪರಿಗಣಿಸಬಹುದು. ಅದನ್ನೇ ಪುರುಷರ ಕುರಿತಾಗಿ ಹೇಳಿದರೆ? ಹಾಗಾಗಿ ಪುರುಷ ಹಾಗೂ ಸ್ತ್ರೀಯರ ನಡುವಿನ ಈ ಬಗೆಯ ಭಿನ್ನತೆ ಹಾಗೂ ಸಾಮರಸ್ಯಗಳ ಒಳ ಹೊರಗನ್ನು ವಿಶ್ಲೇಷಿಸೋಣ.

ಇಂದು ಗಂಡಸರ ಉಡುಗೆಗೆ ಕೊಂಚವೂ ವ್ಯತ್ಯಾಸವಿರದ ಹಾಗೆ, ಸ್ಟೈಲ್‌ಗೆ ತಕ್ಕಂತೆ ಶರ್ಟ್ ಅಥವಾ ಟ್ರೌಶರ್‌ಗಳನ್ನು ಧರಿಸುವುದು ಹೆಂಗಸರಿಗೆ ಖುಷಿಯ, ಉತ್ಸಾಹದ ಹಾಗೂ ಪ್ರತಿಷ್ಟೆಯ ವಿಷಯ. ಆದರೆ ಗಂಡಸರನ್ನು ಇಂಥದ್ದೇ ಸ್ತ್ರೀಯರದ್ದಷ್ಟೇ ಅನ್ನಿಸುವ (ಟಿಪಿಕಲ್ ಫಿಮೇಲ್) ಸೀರೆ ಮೊದಲಾದ ದಿರಿಸಿನಲ್ಲಿ ಕಲ್ಪಿಸಿಕೊಂಡರೆ? ಅವಮಾನ ಅನ್ನಿಸುತ್ತದೆಯಲ್ಲವೇ? ಹಾಗೆಂದು ಸ್ತ್ರೀ ಗುಣಲಕ್ಷಣಗಳು, ಫ್ಯಾಷನ್‌ಗಳು ಕೆಲಬಾರಿ ಪುರುಷರಿಂದ ಅನುಕರಿಸಲ್ಪಡುತ್ತದೆಯಾದರೂ, ಅದು ಪ್ರತಿಷ್ಟಾಪಿತ ನಿಯಮಗಳಿಗೆ ಅನುಸಾರವಾಗಿ ಮಾತ್ರ!

ಒಬ್ಬ ಮಹಿಳೆ ಸೌಂದರ್ಯವತಿ ಹಾಗೂ ಸುಸಂಸ್ಕೃತಳಾಗಿದ್ದರೆ, ಸೊಬಗಿನಿಂದಲೂ ಕೂಡಿದ್ದರೆ ಆಕೆ ನಿಜವಾದ ರೂಪಸಿ ಎನಿಸಿಕೊಳ್ಳುತ್ತಾಳೆ! ಯುದ್ಧ ಮಾಡಲು ಗೊತ್ತಿದ್ದು ಗಾಯಗೊಂಡವರನ್ನು ಸೇವೆ ಮಾಡಲು ಸಿದ್ಧಳಿದ್ದರೆ, ದಂತಕಥೆ ಎನಿಸಿಕೊಳ್ಳುತ್ತಾಳೆ. ಆದರೆ ದುರದೃಷ್ಟವೆಂಬಂತೆ ಪುರುಷನೊಬ್ಬ ದುಃಖಿಸುತ್ತಿದ್ದರೆ, ರೋದಿಸುತ್ತಿದ್ದರೆ ಅದನ್ನು ಆತನ ಪುರುಷತ್ವದ ಗುಣಗಳಿಗೆ ಹೊಂದಿಕೆಯಾಗದ್ದು, ಆತನ ಒಟ್ಟಾರೆ ಚಹರೆಗೆ ಒಗ್ಗದಂತದ್ದು ಎನಿಸಿಕೊಳ್ಳುತ್ತದೆ. ದಯೆ ಕರುಣೆ ಮುಂತಾದ ಗುಣಗಳು ಪುರುಷರಿಗೆ ಸಂಬಂಧಿಸಿದಂತೆ ಹೊಗಳಲ್ಪಟ್ಟರೂ ಅವು ಆತನ ಸ್ವಾಭಾವಿಕ ರೂಢ ಒರಟುತನದ ಮರೆಯಲ್ಲಿ ಮಾತ್ರ ಆಕರ್ಷಕ ಎನಿಸಿಕೊಳ್ಳುತ್ತದೆ. ಇಲ್ಲದಿದ್ದಲ್ಲಿ ಆತನನ್ನು ಹೆಣ್ಣಿಗ ಎಂ ಶಬ್ದ ಅಂಟಿಸಿ ಕಡೆಗಣಿಸಲಾಗುತ್ತದೆ.

ಈ ಮೇಲಿನ ಅಂಶವನ್ನು ಭರತನಾಟ್ಯ ಪ್ರಪಂಚದಲ್ಲಿಯೂ ಗುರುತಿಸಬಹುದು. ಸಾಮಾನ್ಯವಾಗಿ ನಟರಾಜ ನೃತ್ಯ ಮತ್ತು ಭಂಗಿಗಳಿಗೆ ಅತ್ಯಂತ ಹೆಚ್ಚಿನ ಚಾತುರ್ಯ, ಶುದ್ಧಸ್ಫುರಿತ ತಾಳಗತಿ ಮತ್ತು ಶಕ್ತಿಯುತ ಪದ ಸಂಗ್ರಹ (ವಿಸ್ತಾರವಾದ ನಾಟ್ಯ ಜ್ಞಾನ) ಅವಶ್ಯಕ. ಇದೆಲ್ಲವನ್ನೂ ನರ್ತಕ/ಕಿ ಪ್ರದರ್ಶಿಸಲು ಯೋಗ್ಯನಾ/ಳಾಗಿದ್ದರೆ ಈ ಕಾಸ್ಮಿಕ್ ಡ್ಯಾನ್ಸ್‌ನ ಒಂದೆರಡು ಬಿಂಬಗಳು ನೃತ್ಯಗಾರನ/ಳಲ್ಲಿ ಒಡಮೂಡುತ್ತವೆ. ಸ್ತ್ರೀ ಪುರುಷರಿಬ್ಬರ ತಾಂಡವ-ನೃತ್ಯಗಳಲ್ಲೂ ನೃತ್ಯಕ್ಕೆ ಅಗತ್ಯವಾದ ಆತ್ಮವಿಶ್ವಾಸ ಪ್ರತಿಭೆ ಹಾಗೂ ಅತ್ಯಾನಂದ ಭಾವಗಳು ಪ್ರದರ್ಶನಗೊಳ್ಳುತ್ತವೆ.

ನೃತ್ಯದ ಇನ್ನೊಂದು ಮನೋಹರವಾದ ಅಂಶವೆನಿಸುವ ಲಾಸ್ಯ ಕೂಡ ಅಷ್ಟೇ ಮಾಧುರ್ಯವುಳ್ಳದ್ದಾಗಿದೆ. ಆದರೆ ಲಾಸ್ಯವು ಪುರುಷ ಕಲಾವಿದರಿಂದ ಪ್ರದರ್ಶಿಸಲ್ಪಡುವಾಗ ಲಾಸ್ಯ ಭಾವದಲ್ಲಿ ರಂಗನಿಯಮಗಳು ಮಿತಿ ದಾಟದಂತೆ ಮತ್ತು ಅದು ಆತನ ಆಂತರಿಕ ವ್ಯಕ್ತಿತ್ವ (ಠಿeಡಿಚಿsoಟಿಚಿ) ದ ಒಳಗೆ ಇಳಿಯದಂತೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಭರತನಾಟ್ಯದಲ್ಲಿ ಪುರುಷ ಕಲಾವಿದರು ತಮಗೆ ಅರಿವಿಲ್ಲದಂತೆಯೇ ಅಥವಾ ಅನಿವಾರ್ಯವಾಗಿ ಪುರುಷ ಸಹಜ ಬಿರುಸು-ನಡವಳಿಕೆ ಹಾಗೂಮ್ಯಾಚೋ ಇಮೇಜ್‌ಗಳನ್ನು ತ್ಯಾಗ ಮಾಡುವಂತಾಗುತ್ತದೆ. ಬದಲಾಗಿ ಸ್ತ್ರೀಗೆ ಸಂಬಂಧಿಸಿದ ನೃತ್ಯ ಶೈಲಿ ಹೆಚ್ಚಾಗಿ ಅಭಿವ್ಯಕ್ತಗೊಳ್ಳುತ್ತದೆ ಎಂದು ಹಲವರು ಟೀಕಿಸುತ್ತಾರೆ. ಈ ಪರಿಸ್ಥಿತಿಯನ್ನು ಎದುರಿಸಲು ವಾಸ್ತವಿಕವಾದ ಪ್ರಯೊಗಶೀಲ ಹಾಗೂ ಅರ್ಥಪೂರ್ಣ ಪ್ರತಿಕ್ರಿಯೆಯ (ಭಾವನಾತ್ಮಕ ಪೂರ್ವಾಗ್ರಹಗಳಿಗೆ ಹೊರತಾದ ಪ್ರತಿಕ್ರಿಯೆ) ಅಗತ್ಯವಿದೆ.

ಇಲ್ಲಿ ಇನ್ನೊಂದು ವಿಷಯವನ್ನು ಉಲ್ಲೇಖಿಸಬಹುದು. ಹಿಂದಿನ ದಿನಗಳಲ್ಲಿ ನರ್ತಕರು ಅಪರೂಪವೆಂಬಂತೆ ಪ್ರದರ್ಶನ ಕೊಡುತ್ತಿದ್ದು, ‘ನಟ್ಟುವನ್ನಾರ್ ಆಗಿ ತರಬೇತಿ ಪಡೆಯುತ್ತಿದ್ದುದೇ ಹೆಚ್ಚಾಗಿತ್ತು. ಇದು ಮಾನವ ಸ್ವಭಾವದ ದ್ವಂದ್ವಗಳಲ್ಲಿ ಒಂದಾದ ಪುರುಷ-ಪ್ರಕೃತಿ ದ್ವಂದ್ವಕ್ಕೆ ಸಂಬಂಧಿಸಿದುದು. ಪುರುಷ (ಮ್ಯಾಕ್ರೋಕಾಸಂ) ನಿಶ್ಚಲವಾಗಿದ್ದರೆ ಪ್ರಕೃತಿ (ಪುರುಷ ಅಣುವನ್ನು ಅಥವಾ ಬೀಜವನ್ನು ಮೈಕ್ರೋಕಾಸ್ಮಿಕ್ ರೂಪದಲ್ಲಿ ಹೊಂದಿರುವಂತದ್ದು) ಸಂಚಾರೀ ಗುಣವುಳ್ಳದ್ದಾಗಿದೆ. ಅಂದು ಸ್ತ್ರೀಯರ ಶರೀರ ಭರತನಾಟ್ಯದ ಪ್ರದರ್ಶನಕ್ಕೆ ಸೂಕ್ತವಾದದ್ದಾದರೆ ಪುರುಷನ ಬುದ್ಧಿ ಈ ನೃತ್ಯವನ್ನು ವಿಶ್ಲೇಷಿಸುವುದಕ್ಕೆ, ಕಲಿಸುವುದಕ್ಕೆ ಸೂಕ್ತವಾದ ಎಂದು ನಂಬಲಾಗುತ್ತಿತ್ತು. ಪಾರಂಪರಿಕವಾಗಿ ಪುರುಷಗುಣಗಳಿಂದ ಈ ಫಲವಾಗಿ ಈ ದ್ವಂದ್ವಗಳ ಸೂಕ್ತ ಮಿಶ್ರಣ ಸಾಧ್ಯವಾಯಿತು, ನರ್ತಕಿಯರಿಗೆ ಅತ್ಯುತ್ತಮ ನೃತ್ಯ ತರಬೇತಿಯೂ ದೊರಕುತ್ತಿತ್ತು.

ಚಾರಿತ್ರಿಕ ಹಾಗೂ ಪೌರಾಣಿಕ ಆದರ್ಶಗಳಿಂದ ಬಲಪಡಿಸಲ್ಪಟ್ಟ ಮನುಷ್ಯನ ಸೌಂದರ್ಯ ಮೀಮಾಂಸೆಯ ತತ್ವಗಳ ಪುರಾತನ ಗ್ರಹಿಕೆಯು ಎಲ್ಲಿಯವರೆಗೆ ಹೀಗೆ ಉಳಿಯುತ್ತದೋ ಅಲ್ಲಿಯವರೆಗೂ ಪುರುಷ ಕಲಾವಿದರ ಕುರಿತಾದ ಈ ಅಸಮತೆಯ ಕುಹಕ ಉಳಿದೇ ಇರುತ್ತದೆ.

Leave a Reply

*

code