ಅಂಕಣಗಳು

Subscribe


 

ಭರತ ಮಣಿ ರಾಷ್ಟ್ರೀಯ ಸಂಗೀತ- ನೃತ್ಯೋತ್ಸವ

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ವೈಷ್ಣವೀ ಮಂಗಳೂರು

ಮಂಗಳೂರಿನಲ್ಲಿ ನಡೆದ ಭರತ ನೃತ್ಯ ಕಲಾಸಭಾ ಮತ್ತು ಮಣಿಕೃಷ್ಣ ಸ್ವಾಮಿ ಅಕಾಡೆಮಿ ಅವರ ಸಹಯೋಗದಲ್ಲಿ ಮೊದಲ ಪ್ರಯತ್ನವಾದ ೫ ದಿನಗಳ ಭರತಮಣಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ನೃತ್ಯವಿದುಷಿ ವಾಣಿ ರಾಜಗೋಪಾಲ್ ಮತ್ತು ಮೃದಂಗ ವಿದ್ವಾನ್ ಜಯಚಂದ್ರ ಅವರಿಗೆ ಈ ಸಾಲಿನ ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭ ಅಭಿನಂದನಾ ಭಾಷಣ ಮಾಡಿದ ಕಲಾ ವಿಮರ್ಶಕ, ಉದಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಅವರ ಮಾತುಗಳು ಸಕಾಲಿಕ.

ಸಂಗೀತದ ಕಲಿಕೆಯಷ್ಟೇ ಹೆಚ್ಚುತ್ತಾ, ತಾಳ ವಾದ್ಯಗಳ ಕಲಿಕೆ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ಕಲೆಯ ಕ್ಷೇತ್ರದ ಅಸಮತೋಲನ ಬೆಳವಣಿಗೆ. ಇದರಿಂದ ಸಮನ್ವಯ, ಸಮತೋಲನ ಸಾಧಿಸಲು ಸಾಧ್ಯವಿಲ್ಲ. ಸಂಗೀತ-ನೃತ್ಯ ಕಲಾವಿದರಷ್ಟೇ ತಾಳವಾದ್ಯ ಕಲಾವಿದರು ಹೊರಬಂದರೆ ಸರ್ವತೋಮುಖ ಪ್ರಗತಿ ಕಾಣಬಹುದು.

– ವೈಷ್ಣವಿ, ಮಂಗಳೂರು.

(ನೂಪುರ ಭ್ರಮರಿ ಪತ್ರಿಕೆಯ ಅಂಕಣಕಾರರು.)

Leave a Reply

*

code