ಅಂಕಣಗಳು

Subscribe


 

ಶ್ರೀರಾಮದಶರಾಗಮಾಲಿಕಾ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಮಹೇಶ ಭಟ್ ಹಾರ್ಯಾಡಿ

ಇದು ಶ್ರೀರಾಮನ ಕುರಿತು ಮಾಡಿದ ದಶರಾಗಮಾಲಿಕೆ. ಹತ್ತು ರಾಗಗಳ ಮುದ್ರೆ ಬರುವಂತೆ ರಚಿಸಲಾಗಿದೆ. ಇದನ್ನು “ಭಾವಯಾಮಿ ರಘುರಾಮಮ್…” ಎಂಬ ಕೃತಿಯಂತೆ ಆಯಾ ರಾಗದ ಸ್ವರಗಳೊಂದಿಗೆ ಹಾಡಿದರೆ ಕೇಳಲು ಚೆನ್ನಾಗಿರುತ್ತದೆ.

 

(ರಾಗ : ಮೋಹನ)

ಸೀತಾಮೋಹನ ದಶರಥನಂದನ

(ಸೀತಾ-ಮೋಹನ ದಶರಥ-ನಂದನ)

ಜಗತೀಪಾವನ ದೀನಜನಾವನ ||

(ಜಗತೀ-ಪಾವನ ದೀನ-ಜನ-ಅವನ)

 

(ರಾಗ : ಧನ್ಯಾಸಿ)

ಧನ್ಯಾಸಿತಕುವಲಯಸಮಲೋಚನ

(ಧನ್ಯ-ಅಸಿತ-ಕುವಲಯ-ಸಮ-ಲೋಚನ)

ಗೌತಮದಯಿತಾಶಾಪವಿಮೋಚನ ||

(ಗೌತಮ-ದಯಿತಾ-ಶಾಪ-ವಿಮೋಚನ)

 

(ರಾಗ : ಸಾರಂಗ)

ಮಾಯಾಸ್ವರೂಪಸಾರಂಗದಮನ

(ಮಾಯಾ-ಸ್ವರೂಪ-ಸಾರಂಗ-ದಮನ)

ಶಬರೀಸೇವನತೋಷಿತಚೇತನ ||

(ಶಬರೀ-ಸೇವನ-ತೋಷಿತ-ಚೇತನ)

 

(ರಾಗ : ಷಹಾನ)

ದೋಷಹಾನಗುಣಾದಾನ-

(ದೋಷ-ಹಾನ-ಗುಣ-ಆದಾನ)

ನಿಪುಣ ಪೂರ್ಣಿಮೇಂದುವದನ ||

(ನಿಪುಣ ಪೂರ್ಣಿಮಾ-ಇಂದು-ವದನ)

 

(ರಾಗ : ಲಲಿತ)

ಲಲಿತಗಮನ ಕುಂದರದನ

(ಲಲಿತ-ಗಮನ ಕುಂದ-ರದನ)

ಆಂಜನೇಯಹೃದಯಸದನ ||

(ಆಂಜನೇಯ-ಹೃದಯ-ಸದನ)

 

(ರಾಗ : ಮುಖಾರಿ)

ಶರಮುಖಾರಿದೇಹದಲನ

(ಶರ-ಮುಖ-ಅರಿ-ದೇಹ-ದಲನ)

ರಾಮ ಹೇಮವರ್ಣವಸನ ||

(ರಾಮ ಹೇಮ-ವರ್ಣ-ವಸನ)

 

(ರಾಗ : ಸಾಮ)

ಸಾಮವಾದಲಸಿತರಸನ

(ಸಾಮ-ವಾದ-ಲಸಿತ-ರಸನ)

ಲಕ್ಷ್ಮಣಾದಿಸೇವ್ಯಮಾನ ||

(ಲಕ್ಷ್ಮಣ-ಆದಿ-ಸೇವ್ಯಮಾನ)

 

(ರಾಗ : ಹಂಸನಾದ)

ಪರಮಹಂಸನಾದಯೋಗಿ-

(ಪರಮ-ಹಂಸ-ನಾದ-ಯೋಗಿ)

ತ್ಯಾಗರಾಜವಿನುತಚರಣ ||

(ತ್ಯಾಗರಾಜ-ವಿನುತ-ಚರಣ)

 

(ರಾಗ : ಖರಹರಪ್ರಿಯ)

ಖರಹರ ಪ್ರಿಯಭರತಲಾಲನ

(ಖರ-ಹರ ಪ್ರಿಯ-ಭರತ-ಲಾಲನ)

ದಿನಕರಾನ್ವಯಕೀರ್ತಿವರ್ಧನ ||

(ದಿನಕರ-ಅನ್ವಯ-ಕೀರ್ತಿ-ವರ್ಧನ)

 

(ರಾಗ : ತೋಡಿ)

ಕರುಣಾಸಾಗರ ಭವತೋ ಡಿಂಭಂ

(ಕರುಣಾ-ಸಾಗರ ಭವತೋ ಡಿಂಭಂ)

ವಾಣೀವತ್ಸಲಮೇನಂ ಪಾಲಯ ||

(ವಾಣೀ-ವತ್ಸಲಮ್ ಏನಂ ಪಾಲಯ)

 

ಪ್ರತಿಪದಾರ್ಥ : ಸೀತಾಮೋಹನ – ಸೀತೆಯನ್ನು ಸೆಳೆದವನೇ; ದಶರಥನಂದನ – ದಶರಥನ ಮಗನೇ; ಜಗತೀಪಾವನ – ಜಗತ್ತನ್ನು ಪವಿತ್ರಗೊಳಿಸಿದವನೇ; ದೀನಜನಾವನ – ದೀನರಾದ ಜನರನ್ನು ರಕ್ಷಿಸುವವನೇ ; ಧನ್ಯ – ಧನ್ಯನೇ ; ಅಸಿತಕುವಲಯಸಮಲೋಚನ – ಕಪ್ಪಾದ ನೈದಿಲೆಯನ್ನು ಹೋಲುವ ಕಣ್ಣುಗಳನ್ನುಳ್ಳವನೇ; ಗೌತಮದಯಿತಾಶಾಪವಿಮೋಚನ – ಗೌತಮರ ಸತಿಯಾದ ಅಹಲ್ಯೆಯನ್ನು ಶಾಪದಿಂದ ಬಿಡಿಸಿದವನೇ; ಮಾಯಾಸ್ವರೂಪಸಾರಂಗದಮನ – ಮಾಯಾಸ್ವರೂಪದಲ್ಲಿದ್ದ ಜಿಂಕೆಯನ್ನು ಹತ್ತಿಕ್ಕಿದವನೇ; ಶಬರೀಸೇವನತೋಷಿತಚೇತನ – ಶಬರಿ ಮಾಡಿದ ಉಪಚಾರದಿಂದ ಮುದಗೊಂಡ ಮನಸ್ಸನ್ನುಳ್ಳವನೇ; ದೋಷಹಾನಗುಣಾದಾನನಿಪುಣ – ದೋಷವನ್ನು ಬಿಡುವುದು ಮತ್ತು ಗುಣವನ್ನು ಸ್ವೀಕರಿಸುವುದು ಇವುಗಳಲ್ಲಿ ಚತುರನಾದವನೇ; ಪೂರ್ಣಿಮೇಂದುವದನ – ಹುಣ್ಣಿಮೆಯ ಚಂದ್ರನಂತಿರುವ ಮುಖವನ್ನುಳ್ಳವನ್ನೇ; ಲಲಿತಗಮನ – ಸುಂದರವಾದ ನಡಿಗೆಯನ್ನುಳ್ಳವನೇ; ಕುಂದರದನ – ಮಲ್ಲಿಗೆಯಂತಹ ಹಲ್ಲುಗಳನ್ನುಳ್ಳವನೇ; ಆಂಜನೇಯಹೃದಯಸದನ – ಹನುಮಂತನ ಮನಸ್ಸನ್ನೇ ಮನೆಯಾಗಿಸಿಕೊಂಡವನೇ; ಶರಮುಖಾರಿದೇಹದಲನ – ಬಾಣದ ತುದಿಯಿಂದ ಶತ್ರುಗಳ ದೇಹವನ್ನು ಸೀಳಿದವನೇ; ಹೇಮವರ್ಣವಸನ – ಚಿನ್ನದ ಬಣ್ಣದ ಬಟ್ಟೆಯನ್ನುಳ್ಳವನೇ; ಸಾಮವಾದಲಸಿತರಸನ – ಸಾಮರೂಪವಾದ ಮಾತುಗಳಿಂದ ಶೋಭಿಸುವ ನಾಲಿಗೆಯನ್ನುಳ್ಳವನೇ; ಲಕ್ಷ್ಮಣಾದಿಸೇವ್ಯಮಾನ – ಲಕ್ಷ್ಮಣನೇ ಮೊದಲಾದವರಿಂದ ಸೇವಿಸಲ್ಪಡುವವನೇ; ಪರಮಹಂಸನಾದಯೋಗಿತ್ಯಾಗರಾಜವಿನುತಚರಣ – ಪರಮಹಂಸರೂ ನಾದಯೋಗಿಗಳೂ ಆದ ತ್ಯಾಗರಾಜರಿಂದ ಸ್ತುತಿಸಲ್ಪಟ್ಟ ಪಾದಗಳನ್ನುಳ್ಳವನೇ; ಖರಹರ – ಖರನನ್ನು ಸಂಹರಿಸಿದವನೇ; ಪ್ರಿಯಭರತಲಾಲನ – ಪ್ರೀತಿಪಾತ್ರನಾದ ಭರತನನ್ನು ಲಾಲಿಸಿದವನೇ; ದಿನಕರಾನ್ವಯಕೀರ್ತಿವರ್ಧನ – ಸೂರ್ಯವಂಶದ ಕೀರ್ತಿಯನ್ನು ಹೆಚ್ಚಿಸಿದವನೇ; ಕರುಣಾಸಾಗರ – ದಯೆಯ ಸಮುದ್ರವೇ ಆಗಿರುವವನೇ; ಭವತಃ – ನಿನ್ನ; ಡಿಂಭಂ – ಮಗುವಾದ; ವಾಣೀವತ್ಸಲಂ – ವಾಣೀವತ್ಸಲನೆಂಬ; ಏನಂ – ಈತನನ್ನು; ಪಾಲಯ – ರಕ್ಷಿಸು

Leave a Reply

*

code