ಅಂಕಣಗಳು

Subscribe


 

’ನೃತ್ಯಕಾಳಿ’

Posted On: Monday, October 20th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಈ ಮಾಸ ವಿಜಯದಶಮಿಯ ಪರ್ವಕಾಲ. ಹತ್ತು ದಿನಗಳ ಪರ್ಯಂತ ದುರ್ಗೆಯ ನಾನಾ ರೂಪಗಳನ್ನು ಪೂಜಿಸಿ, ವಿದ್ಯೆಯಲ್ಲಿ ಯಶಸ್ಸು, ವಿದ್ವತ್ತನ್ನು ದಯಪಾಲಿಸಬೇಕೆಂದು ಬೇಡುವ ಕಾಲ. ನಾಡಹಬ್ಬದ ಈ ಸಂದರ್ಭ…, ನಮ್ಮ ನಮ್ಮಲ್ಲಿನ ಬೇಧಗಳನ್ನು ಮರೆತು, ಐಕ್ಯತೆಯನ್ನು ಮೆರೆದು, ಸಂಗೀತ-ನೃತ್ಯ-ನಾಟಕ ಮುಂತಾದ ಲಲಿತಕಲೆಗಳತ್ತ, ಸಾಹಿತ್ಯ-ಸಂಸ್ಕೃತಿಗಳತ್ತ ನೋಟ ಬೀರುವ, ಹಂತದಲ್ಲಿ ಈ ಸಂಚಿಕೆಯನ್ನು ಗೋಪಾಲಕೃಷ್ಣರಾಯರ ಕುಮಾರ ಕೃಪ- ಕವನ ಸಂಕಲನದಿಂದಾಯ್ದ ’ನೃತ್ಯಕಾಳಿ’ ಕವನದ ಮೂಲಕ ಓದೋಣವೇ?

ನೃತ್ಯಕಾಳಿ, ಗೋಪಾಲಕೃಷ್ಣರಾಯರ ಕುಮಾರ ಕೃಪ

-ಶ್ರೀ ಗೋಪಸಹಜೆ ಕಾಯೆ

ನರ್ತಿಸಿದಳು ಕಾಳಿ,

ರೌ-ದ್ರಾವತಾರ ತಾಳಿ

ಕಾಳಿಯ ಲಯಲೀಲೆಗೆ ಈ

ಸೃಷ್ಟಿ ನೃತ್ಯಶಾಲೆ

ಶಿವನ ದೇಹ ಮೆಟ್ಟಿ, ಭು-

ವ್ಯೋಮವನ್ನೆ ಮುಟ್ಟಿ

ಕಾರ ಮುಗಿಲ ಕುರುಳ, ತ-

ನೆಲ್ಲ ದೆಸೆಗು ಕವಿಸಿ

ಕಾಲಗೆಜ್ಜೆ ದನಿಗೆ, ಬಿರು-

ಗಾಳಿ ಸಿಡಿಲು ಗುಡುಗೆ

ಕಣ್ಣನೋಟ ಸುಳಿಸಿ, ಸುಳಿ

ಮಿಂಚಿನೆಳೆಯ ಹರಿಸಿ

ಖಡ್ಗ ಕೈಯೊಳಿರಿಸ್, ತಾ

ರುಂಡಮಾಲೆ ಧರಿಸಿ

ನರ್ತಿಸುತ್ತಲಿರಲು, ಇದೊ

ತತ್ತರಿಸಿತು ಜಗವು

ನೃತ್ಯವಿದನು ನಿಲಿಸೆ, ನೀ

ಸೌಮ್ಯರೂಪ ಸರಿಸೆ

ಮೊಗಕೆ ನಗೆಯ ತಾರೆ, ಸಂ-

ಮೋದವಿಳೆಗೆ ಬೀರೆ

ಜಗನ್ಮಾತೆ ಲಲಿತೆ, ಸತ್

ಚಿದಾನಂದ ಭರಿತೆ

ಕೃಪಾರಸವ ಸುರಿಸೆ, ನೀ-

ನಿಳೆಗೆ ಶಾಂತಿ ಸಲಿಸೆ

ದೇವಿ ಆದಿ ಶಕ್ತಿ ನಾ

ನಿನ್ನೊಳಿರಿಸಿ ಭಕ್ತಿ

ಮಣಿಯುತಿರುವೆ ತಾಯೆ,

Leave a Reply

*

code