ಅಂಕಣಗಳು

Subscribe


 

ರಾಮಪರಿವಾರ ಗುಣಕಥನ ಮತ್ತು ಸೀತಾಕಥನ

Posted On: Tuesday, April 7th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ ೪ಮತ್ತು ೫ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ( ಹನುಮಜ್ಜಯಂತಿಯ ಸುಸಂದರ್ಭವಾಗಿರುವ ಹಿನ್ನೆಲೆಯಲ್ಲಿ) ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ಸೀತಾ ಕಥನ ಮತ್ತು ಕನ್ನಡ ಭಾಷೆಯ ಸುಮನೋಹರ ರಚನೆ ರಾಮ ಪರಿವಾರ ಗುಣಕಥನವಿದೆ. ರಾಮ ಪರಿವಾರವು ಎಷ್ಟೊಂದು ಅನನ್ಯವೆಂದು ಸಾರುವ ಈ ರಚನೆಯನ್ನು ಸಂಗೀತದಲ್ಲಿ ಕಾಂಚನ ಸಹೋದರಿಯರು ಸಂಯೋಜನೆ ಮಾಡಿ ಹಾಡಿ ಮತ್ತು ಭರತನೃತ್ಯದಲ್ಲಿ ಡಾ. ಶೋಭಾ ಶಶಿಕುಮಾರ್ ಅವರು ಭಾವಕೋಶವನ್ನು ಮುಟ್ಟುವಂತೆ ನರ್ತಿಸಿ ಜನಪ್ರಿಯಗೊಳಿಸಿದ್ದಾರೆ. ಈ ಕೃತಿ ಕಾವ್ಯಕ್ಕೆ ಮಾತ್ರವಲ್ಲದೆ ಸಂಗೀತ-ನೃತ್ಯ ಕ್ಷೇತ್ರಕ್ಕೆ ಗುಣಮಟ್ಟದ ಸೇರ್ಪಡೆ. ಕಲಾವಿದರು ಸದ್ವಿನಿಯೋಗಪಡಿಸಿಕೊಳ್ಳಬಹುದು.

ಕಾಂಚನ ಸಹೋದರಿಯರು ಸಂಗೀತ ಸಂಯೋಜಿಸಿ ಹಾಡಿದ ಲಿಂಕ್

ರಾಮಪರಿವಾರ ಗುಣಕಥನ

ರಾಗ : ಕಾಪಿ ; ತಾಳ : ಆದಿ

ರಾಮನ ಪರಿವಾರ ಸಕಲ ಗುಣಾಧಾರ

ಸ್ವಾಮಿಯ ಪರಿವಾರ ರಸನೇಮಿಯ ಸಂಸಾರ || ಪ||

 

ಸೀತೆಯಂಥ ಸತಿ ಮತ್ತೆಲ್ಲಿ? ದಾಂ-ಪತ್ಯ ಪಥ್ಯ ಪಥವಿನ್ನೆಲ್ಲಿ? |

ಲವ ಕುಶರಂತಹ ಸುತರೆಲ್ಲಿ ಶಿವ-ಕುಶಲತೆಗಳಿಗೆಣೆ ಇನ್ನೆಲ್ಲಿ? || ಅ.ಪ||

 

ಭರತ ಲಕ್ಷ್ಮಣ ಶತ್ರುಘ್ನರ ಪರಿ

ಇರುವರೇ ಸಹಜರಿಳೆಯಲ್ಲಿ? |

ಗುಹ ಸುಗ್ರೀವ ವಿಭೀಷಣರಂಥ

ಗೆಳೆಯರಿರುವರೇ ಧರೆಯಲ್ಲಿ? ||೧ ||

 

ಎಲ್ಲಕೂ ಮಿಗಿಲು ಹನುಮನ ಹಾಗೆ

ಸಲ್ಲುವರೇ ಸೇವಕರು?

ನಿಲ್ಲುವರೇ ಭಾವಕರು ?

ಗೆಲ್ಲುವರೇ ಜೀವಕರು? ||೨ ||

**********

ಸೀತಾಕಥನ

ರಾಗ : ದರ್ಬಾರೀಕಾನಡಾ ; ತಾಳ : ಆದಿ

ಶ್ರೀಮತಿ ಜನಕಜಾತೇ

ರಾಮಾಯಣ ಗುಣಭೂತೇ ಸೀತೇ ||ಪ||

 

ಸೀಮಾತೀತ ಮಹೋನ್ನತಚರಿತೇ

ಪ್ರೇಮಾಭಿರಾಮೇ ರಾಮೇ ರಾಮೇ ||ಅ.ಪ||

 

ಸವನಾವನಿಸಂಭವೇ ಶಿವೇ

ಭುವನೇಶ್ವರಭಾವಿತೇ |

ಪತಿಪದಪಥಿಕೇ ವಿಪಿನಯೂಥಿಕೇ

ಸತತದಯಾದೀಕ್ಷಿತೇ ||೧ ||

 

ದಶಮುಖಲೋಭವಿಲಂಭನಶೋಭೇ

ವಶಿಜನವಂದನಚಂದನಕಾಭೇ |

ಅನಲಪಾವನಿ ವಿಮಲತಾಧುನಿ

ಜನನಿ ಪಾಹಿ ವಿನತಮೇಹಿ || ೨||

 

Leave a Reply

*

code