ಅಂಕಣಗಳು

Subscribe


 

ಶ್ರೀಕೃಷ್ಣರಸಗೀತಿಕಾ (ನವರಸಕೃಷ್ಣ)

Posted On: Tuesday, April 14th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 8ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ನವರಸಗಳನ್ನೂ ಲೀಲಾಮಾನುಷವಿಗ್ರಹನಾದ ಕೃಷ್ಣನಿಗೆ ಆಶ್ರಯಿಸಿ ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ’ಶ್ರೀಕೃಷ್ಣರಸಗೀತಿಕಾ (ನವರಸಕೃಷ್ಣ)’ವನ್ನು ಪ್ರಕಟಿಸಲಾಗಿದೆ. ಈ ರಚನೆಯಲ್ಲಿ ಒಂಭತ್ತು ರಸಪ್ರಕಾರಗಳಷ್ಟೇ ಅಲ್ಲದೆ, ಧೀರ ಮತ್ತು ವಾತ್ಸಲ್ಯ ಎಂಬುದಾಗಿ ಸ್ವತಃ ಶತಾವಧಾನಿ ಗಣೇಶರೇ ಶ್ರೇಣೀಕರಿಸಿದ ಮತ್ತೆರಡು ರಸವಿವೇಚನೆಗೆ ಸಂಬಂಧಿಸಿದ ಸನ್ನಿವೇಶ- ಸಾಲುಗಳನ್ನು ಕಾಣಬಹುದು. ಜೊತೆಗೆ ರಸವಿವೇಚನೆಗೆ ಒಳಪಡುವ ಸಂಬಂಧ ಶತಮಾನಗಳಿಂದಲೂ ಬಹುಚರ್ಚಿತವೆನಿಸಿರುವ ಲೋಕಪ್ರಸಿದ್ಧವೆನಿಸಿದ ಭಾವ- ಭಕ್ತಿಗೂ ಸಾಲುಗಳನ್ನು ಮುಡಿಪಿರಿಸಲಾಗಿದೆ. ಈ ಅನ್ಯರಸಗಳ ವಿವೇಚನೆಯನ್ನು ಡಾ.ಗಣೇಶರ ಅಲಂಕಾರಶಾಸ್ತ್ರ ಪುಸ್ತಿಕೆಯೊಂದಿಗೆ ಇನ್ನೂ ಹಲವು ಬಿಡಿ ಪ್ರಬಂಧಗಳಲ್ಲಿ ಕಾಣಬಹುದಾಗಿದೆ.

ಈ ರಚನೆಗೆ ವಿಸ್ತಾರವಾದ ನೃತ್ಯರೂಪಕವನ್ನು ಮೊದಲ ಬಾರಿಗೆ 2010 ರಲ್ಲಿ ಭರತನೃತ್ಯ ಶೈಲಿಯಲ್ಲಿ ಸಂಯೋಜನೆ ಮಾಡಿ ತಮ್ಮ ಪಿಎಚ್ ಡಿ ಸಂದರ್ಭ ಪ್ರಯೋಗಿಸಿದ್ದಷ್ಟೇ ಅಲ್ಲದೆ; ನೂಪುರ ಭ್ರಮರಿಯ ರಾಷ್ಟ್ರೀಯ ನೃತ್ಯಸಂಶೋಧನ ವಿಚಾರಸಂಕಿರಣದಲ್ಲಿಯೂ (2013) ರಲ್ಲಿ ನರ್ತಿಸಿದವರು ಪ್ರಖ್ಯಾತ ನೃತ್ಯ ಕಲಾವಿದೆ ಡಾ. ಶೋಭಾ ಶಶಿಕುಮಾರ್. 

 

(ರಾಗಮಾಲಿಕಾ : ಆದಿತಾಳ)

ಹಂಸಧ್ವನಿ 

ನವರಸರಸರಂಜನಂ ನಿರಂಜನಮ್

ಭುವನಾವನಂ ತಂ ಭಜೇ ಯದುನಂದನಮ್ || ಪ||

 

ಕಾಪಿ (ಶೃಂಗಾರ)

ತ್ರಿಗುಣಾಯಿತರಾಧಾವೈಧರ್ಭೀ-

ಸತ್ತ್ರಾಜಿತ್ತನಯಾಪ್ರಣಯೇ |

ಮಧುರಭಾವಪರಮೈಕಪೂರುಷಂ

ರಸರಾಜನಿದರ್ಶನರಸಿಕಮ್ ||೧ ||

 

ಅಠಾಣ (ವೀರ)

ಕಂಸಮುಖಾಸುರಕಾಲವತಂಸಂ

ಕುರುಕ್ಷೇತ್ರಸವನಾಗ್ನಿಮುಖಮ್ |

ಧರ್ಮ-ದಾನ-ಪಾಂಡಿತ್ಯ-ದಯಾನಯ-

-ವೀರತರಂಗತುರಂಗಮಗಮ್ || ೨|||

 

ಜೋನ್ಪುರಿ (ಕರುಣ)

ಕಾರಾಗಾರೇ ಕಂಪಿತಪಿತರೌ

ಕಿತವಸಭಾಯಾಂ ಕ್ಲಿಷ್ಟಾಂ ಕೃಷ್ಣಾಮ್ |

ಭವಭಗ್ನಾಪ್ತಾನ್ ವೀಕ್ಷ್ಯ ವಿದ್ರುತಂ

ಕರುಣಾರುಣವದನಂ ಕೃಪಾಬ್ಧಿಮ್ || ೩||

 

ದೇಶ್ (ಅದ್ಭುತ)

ವದನೇ ಜನನ್ಯೇ ಪ್ರದರ್ಶ ಜಗತೀಂ

ಸಮರೇ ಸುಹೃದೇ ಚ ವಿಶ್ವರೂಪಮ್ |

ವಿಸ್ಮಯಸೀಮೋಲ್ಲಂಘನಚಿದ್ಘನ-

ದಿವ್ಯಾದ್ಭುತಮಹಿಮಾಕರಮ್ || ೪||

 

ಆನಂದಭೈರವೀ (ಹಾಸ್ಯ)

ಭೀಮವಿಡಂಬನಡಂಬರನಿಪುಣಂ

ವಲ್ಲವಪಲ್ಲೀಜನಹಸನಪರಮ್ |

ಮಂದಸ್ಮಿತರದಚಂದ್ರಚಂದ್ರಿಕಾ-

-ಪ್ಲಾವಿತಪಾವನಜೀವನಮ್ || ೫||

 

ಶಾಹನ (ಭಯಾನಕ)

ಗೋಪಘೋಷನವನೀತವಿನೀತಂ

ಕ್ಷೀರಸಾರಹರಣಾಚರಣರಣಮ್ |

ದಂಡನಸಮಯೇ ನಂದನಂದಿನೀ-

ಭೀತಿಘಾತಗಲಿತಂ-ಪಂಥಮ್ ||೬ ||

 

ನಾದನಾಮಕ್ರಿಯಾ (ಬೀಭತ್ಸ)

ಮದಿರಾ-ಮದಿರಾಕ್ಷೀಮದಮತ್ತಂ

ಸ್ವೈರತರಾಂತಃಕಲಹೋದ್ವೃತ್ತಮ್ |

ಯಾದವಯೂನಾಂ ನಿವಹಂ ವೀಕ್ಷ್ಯ ಜು-

-ಗುಪ್ಸಿತಚೇತೋಯುತಮ್ ||೭ ||

 

ಕೇದಾರ (ರೌದ್ರ)

ಭೀಷ್ಮಭೀಷ್ಮ ಶಪಥಾಘಟನಾರ್ಥಂ

ಪಾರ್ಥಸಾರ್ಥಸುಪಥೀಕರಣಾರ್ಥಮ್ |

ಚಂಡಚಕ್ರಕರಮವಕ್ರವಿಕ್ರಮ-

ರೌದ್ರಮುದ್ರಮುದ್ಯತ್ಸಮುದ್ರಮ್ || ೮||

 

ಅಭೇರಿ (ವಾತ್ಸಲ್ಯ)

ಜಗತೀಸ್ನಿಗ್ಧಂ ಕುಚೇಲಮಿತ್ರಂ

ಮಮತಾವಿರಹಿತಸಮತಾಸತ್ರಮ್

ವಿಜಯ-ಸುಭದ್ರಾಪರಿಣಯಚೈತ್ರಂ

ವತ್ಸಲತಾಚಿತ್ಸ್ಥಲಂ ಸಲೀಲಮ್ || ೯||

 

ಆರಭಿ (ಧೀರ)

ಚತುರುಪಾಯಚಾತುರೀಚತುರಾಸ್ಯಂ

ಪಂಚತಂತ್ರತಂತ್ರೀಕ್ವಣನಿಪುಣಮ್ |

ಸಂಧಿವಿಗ್ರಹದ್ವಂದ್ವಕೌತುಕಂ

ಕ್ರಾಂತಿ-ಶಾಂತಿಚಟುಲಂ ಸುಧೀರಮ್ ||೧೦ ||

 

ಹಿಂದೋಳ (ಭಕ್ತಿ)

ಸಾಂದೀಪನಿ ಗುರುಚರಣ ಸುಮಾಲಿಂ

ರಾಜಸೂಯಮುನಿಸೇವನಶೀಲಮ್ |

ಹರಚೇತೋಹರಚಾರುವರ್ತನಂ

ಭಕ್ತಶಿಕ್ಷಣಗುಣಂ- ವಿರಕ್ತಮ್ || ೧೧||

 

ಸಾಮ (ಶಾಂತ)

ತ್ರಿಪುಟೀಘಟವಿಘಟನಪಟುತತ್ತ್ವಂ

ಬೋಧಿತಸಾಧಿತಗೀತಾಸತ್ತ್ವಮ್ |

ಸಚ್ಚಿತ್ಸುಂದರನಿಷ್ಕಲಬಂಧುಂ

ಶಾಂತ-ದಾಂತಹೃದಯಂ ರಸೈಕಮ್ ||೧೨ ||

Leave a Reply

*

code