Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ ೨ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ಪ್ರಕೃತ ಕಂತಿನಲ್ಲಿ ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ಮಹಾವಿಷ್ಣುವಿನ ದಶಾವತಾರ ಸ್ತುತಿಯನ್ನು ಕಾಣಬಹುದಾಗಿದೆ. ಕಲಾವಿದರಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವುದು ಜಯದೇವನ ಗೀತಗೋವಿಂದದ ಪ್ರಥಮಾಶ್ವಾಸದ ದಶಾವತಾರ ಸ್ತುತಿ -ಪ್ರಲಯಪಯೋಧಿಜಲೇ. ಆ ಕೃತಿಯನ್ನು ಗಮನಿಸಿಕೊಂಡು ಹಲವು ಸ್ತುತಿಗಳು ನಂತರದ ಕಾಲಮಾನಗಳಲ್ಲಿ ರಚಿಸಲ್ಪಟ್ಟಿವೆ. ಜಯದೇವ ರಚಿತ ಸ್ತುತಿಯಲ್ಲಿ ಬಲರಾಮಾವತಾರವನ್ನು ಉಲ್ಲೇಖಿಸಲಾಗಿದ್ದರೆ, ಪ್ರಕೃತ ಕವಿ ಗಣೇಶರು ಅಭಿನಯ ಬಾಹುಳ್ಯವಿರುವ ಕೃಷ್ಣಾವತಾರವನ್ನು ಕೊಂಡಾಡಿದ್ದಾರೆ. ಈ ಕೃತಿ ಕಾವ್ಯಕ್ಕೆ ಮಾತ್ರವಲ್ಲದೆ ಸಂಗೀತ-ನೃತ್ಯ ಕ್ಷೇತ್ರಕ್ಕೆ ಗುಣಮಟ್ಟದ ಸೇರ್ಪಡೆ. ಕಲಾವಿದರು ಸದ್ವಿನಿಯೋಗಪಡಿಸಿಕೊಳ್ಳಬಹುದು.
ರಾಗಮಾಲಿಕ ಆದಿತಾಳ
ಜಲಧಿಮಜ್ಜಿತವೇದಸಮುದ್ಧರ !
ಮನುಮಹರ್ಷಿವಹಿತ್ರಸುರಕ್ಷಕ !
ಘನಮಹೋನ್ನತಮೀನಶರೀರ ಹೇ !
ಜಯಜನಾರ್ದನ ! ಜೀವನಪಾವನ !
ಅಮೃತಮಂಥಮಹಾಚಲವಾಹಕ !
ಅಮರಪಕ್ಷಸುಧಾರಸತರ್ಪಕ !
ಘನಮಹೋನ್ನತ ಕೂರ್ಮಶರೀರ ಹೇ ! ಜಯ…
ಪ್ರಲಯಸಾಗರಮಜ್ಜಿತಭೂಧರ !
ಕುಟಿಲರಾಕ್ಷಸಕಾಯನಿಷೂದನ !
ಘನಮಹೋನ್ನತ ಕೋಲಶರೀರ ಹೇ ! ಜಯ…
ವಿಮಲಕೋಮಲಬಾಲಕಪಾಲಕ !
ಪ್ರಕಟದಾರುಣದಾನವದಾರಕ !
ಮಹಿತಮಾನವ ಸಿಂಹಶರೀರ ಹೇ ! ಜಯ…
ಬಲಿಬಲಾಂತಕ ! ಭಾವುಕಬಾಲಕ !
ತ್ರಿಭುವನಕ್ರಮವಿಕ್ರಮಸಕ್ರಮ !
ವಿಹಿತವಾಮನ ಚಾರುಶರೀರ ಹೇ ! ಜಯ…
ನೃಪಕುಲಾಟವಿಕಾಪ್ರಲಯಾನಲ !
ಜನಕತರ್ಪಕಶೋಣಿತತರ್ಪಣ !
ಮಹಿತಭಾರ್ಗವ ರಾಮಶರೀರ ಹೇ ! ಜಯ…
ರವಿಕುಲಾಂಬುಧಿಸೋಮ ! ಸುಮೋಹನ !
ದಶಮುಖಾಂತಕ ! ಮಂಗಲಮಾನುಷ !
ಘನಮಹೋನ್ನತ ರಾಮಶರೀರ ಹೇ ! ಜಯ…
ಯದುಕುಲಾಂಬರಸೂರ್ಯ ! ಪರಾತ್ಪರ !
ಭುವನಭಾಗ್ಯವಿಧಾಯಕನಾಯಕ
ಘನಮಹೋನ್ನತ ಕೃಷ್ಣಶರೀರ ಹೇ ! ಜಯ…
ಚಿರವಿರಾಗವಿವೇಕರಸಾತ್ಮಕ !
ಪರಮಕಾರುಣಿಕ ! ಪ್ರಶಮಾತ್ಮಕ !
ಘನಮಹೋನ್ನತ ಬುದ್ಧಶರೀರ ಹೇ ! ಜಯ…
ವಸುಮತೀಜನವಂಚನಲುಂಛನ !
ಸಿತತುರಂಗತರಂಗಿತವಲ್ಗನ !
ಘನಮಹೋನ್ನತ ಕಲ್ಕಿಶರೀರ ಹೇ ! ಜಯ…
ಸುಕವಿಕಾಶ್ಯಪಕಲ್ಪಿತಕೂಜನೈ-
ರ್ಲಲಿತಮಂಗಲ ಸಂಸ್ತವಗಾಯನೈಃ
ದಶವಿಧಾಕೃತಿಕ್ಲಪ್ತಜನಾರ್ದನೋ
ಜಗದಿದಂ ಪರಿಪಾತು ನಿರಂತರಮ್ ||
ಆಮ್ನಾಯಾಂಬುಧಿ ಮೀನ ! ಶೈಲವಹನೇ ಕೂರ್ಮ ! ಕ್ಷಮಾರಕ್ಷಣೇ
ಕೋಲಾರ್ತಾವನ ಸಿಂಹಮಾನುಷ ! ಬಲಿಶ್ರೀಲುಂಠನೇ ವಾಮನ !
ಕ್ಷುದ್ರಕ್ಷತ್ತ್ರವಿನಾಶಭಾರ್ಗವ ! ಯಶಃಶ್ರೀರಾಮ ! ರಕ್ಷೋ ಲಯೇ
ಗೀತಾಕೃಷ್ಣ ! ಕೃಪಾಬ್ಧಿಬುದ್ಧ ! ಸಮರೇ ಕಲ್ಕಿನ್ ! ಜಯಸ್ತೇ ಜಯ !!