ಅಂಕಣಗಳು

Subscribe


 

ಸಂಸ್ಕೃತ ನಾಯಕ ಪದಗಳು- ಪಾಂಥ

Posted On: Thursday, December 31st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 134ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ ಸಂಸ್ಕೃತ ಭಾಷೆಯಲ್ಲಿ ರಚಿತವಾದ ಅಷ್ಟನಾಯಕ ಪದಗಳನ್ನು ಪ್ರಕಟಿಸಲಾಗುತ್ತಿದೆ.  ಇದು ಲಕ್ಷಣಸಮೇತವಾಗಿದ್ದು ; ಅಭಿನಯಸಂವಿಧಾನವೇ ಇದರಲ್ಲಿ ಅಡಗಿದೆ. 

ಈ ಸಂಚಿಕೆಯ ನಾಯಕ : ಪ್ರವಾಸದಲ್ಲಿರುವ ಈ ನಾಯಕನು ತನ್ನ ಕಾರ್ಯಭಾರಗಳ ನಡುವೆ ತನ್ನ ಪ್ರಿಯ ಕಾಂತೆಯನ್ನು ಅಗಲಿರಬೇಕಾದದ್ದನ್ನು ನೆನೆಯುತ್ತಾ ಖಿನ್ನನಾಗಿದ್ದಾನೆ. ಸುಮಧುರ ವಾತಾವರಣದ ಪ್ರಕೃತಿಯಿದ್ದೂ ನಲ್ಲೆಯ ಸಾಮೀಪ್ಯ ಸಿಗದ ಕರ್ತವ್ಯದ ನಿಷ್ಠುರತೆಯನ್ನು ನೆನೆದು ವಿಷಣ್ಣನಾಗಿದ್ದಾನೆ. ಈತನು ಪ್ರೋಷಿತಭರ್ತೃಕಾ ನಾಯಿಕಾವಸ್ಥೆಗೆ ಸಂವಾದಿ.

ಪಾಂಥ

ರಾಗ : ಶುಭಪಂತುವರಾಳಿ ; ತಾಳ : ಆದಿ

ಲಕ್ಷಣಶ್ಲೋಕ : ಕಾಂತಾವಿಯೋಜಿತಃ ಪಾಂಥಃ

ಪ್ರವಾಸೀ ಪ್ರಣಯಾತುರಃ |

ಪ್ರತಿಕೂಲಸ್ಥಿತೌ ತಾಂತಃ

ಸ್ಮರತಿ ಪ್ರಿಯಕಾಮಿನೀಮ್ ||

 

ದಯಿತಾನಿಹಿತಾ ಮತಿರಿಯಮಚಲಾ ಕಲಿತಾ ಕಿಲರಸರಾಗೇ |

ನಯತಾರಹಿತಾ ಹತತನುರಯತೇ ಭರುತಾ ಭೂರಿವಿಯೋಗೇ ||ಪ||

 

ನಿರ್ಘೃಣಜೀವನನಿಕಷವಿಶೀರ್ಣಾ ಕೋಮಲತಾರತಿಲೀಲಾ |

ಪರವಶಕಾಯಕಠಿನತಾದೀರ್ಣಾ ಭಾವುಕಚಿತ್ತಜಹೇಲಾ || ೧||

 

ಮಮವಿರಹೇ ಕಿಂ ಕುರುತೇ ಬಾಲಾ ವಿಸ್ಮೃತಸಕಲವಿಲಾಸಾ |

ಮತ್ಪುನರಾಗತಿಚಿಂತನಶೀಲಾ ದೂರೀಕೃತರಸಹಾಸಾ ||೨ ||

 

ಹೇ ! ಮಧುಮಾಸವಿಧೋ ! ವಿಧಿಮೇವಮಹಂ ತು ಸಹೇ ವಿಷಯಾತ್ರಾ |

ಹಾ ! ಮೃದುಲಾ ಮಧುರಾ ಶ್ವಸಿತಿ ಕಥಂ ಶೂನ್ಯಮನೋರಥಮಾತ್ರಾ || ೩||

 

ಹರ ! ಸಂದೇಶನಿದೆಶವಿಶೇಷಮಶೇಷಮಹೋ ಸಂತೋಷೇ |

ಪ್ರಕೃತಿವರೇ ! ಮಮವನಿತಾಸವಿಧೇ ಸಮುಚಿತನರ್ಮಿಲವೇಷೇ || ೪||

 

ಅಂಬರಗುಂಭಿತಡಂಬರಲಂಭಿತರಂಗದುದಂಬುದರಾವಮ್ |

ಸಾ ಶ್ರುಣುಯಾನ್ನ ಚ ಸಾಶ್ರುಮುಖೀತಿ ಭಜಾಮಿ ಚಿರಂ ಗೃಹದೇವಮ್ ||೫ ||

 

ನಂದಾತ್ಮಜನಿಜವಚನವಿವೇಚಿತಪಾಂಥಮನೋಗತಿಗೀತಮ್ |

ನಂದಾತ್ಮಜಕರುಣಾರುಣಕಿರಣಸುಖಾಯ ಭವೇದನುಭೂತಮ್ || ೬||

Leave a Reply

*

code