ಅಂಕಣಗಳು

Subscribe


 

ಕಲೆಗಳು ಮಾರಾಟದ ವಸ್ತುಗಳಾಗುತ್ತಿವೆಯೇ?

Posted On: Friday, August 15th, 2008
1 Star2 Stars3 Stars4 Stars5 Stars (No Ratings Yet)
Loading...

Author: -ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಗೀತಾ ಕೊಂಕೋಡಿ, ಮೋಹನ .ಗ. ಹೆಗಡೆ,

ಸಂಪಾದಕೀಯದಲ್ಲಿ ಪ್ರಸ್ತುತಪಡಿಸಿದ ನೃತ್ಯಾಭ್ಯಾಸ ಕಲೆಯ ಕಲಿಕಾಭ್ಯರ್ಥಿಗಳ ಹಾಗೂ ಪಾಲಕರ ಮನೋಸ್ಥಿತಿಯ ವಾಸ್ತವಿಕತೆಯ ಬಗ್ಗೆ ವ್ಯಕ್ತಪಡಿಸಿದ ಮುಕ್ತಕಗಳು ಇಂದಿನ ನವಕಲಾವಿದರ ನಿಜರೂಪವೇ ಆಗಿರುವುದು ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಖೇದಕರವೇ ಹೌದು. ಸದಾಚಾರಕ್ಕೆ ನಿಧಾನದಲ್ಲಾದರೂ ಪ್ರಾಧಾನ್ಯತೆ ದೊರೆಯಬಹುದೆಂಬ ಆಶಾವಾದದ ದೃಢ ನಿಶ್ಚಯ ಮನೋಭಾವವೇ ಪರಿಹಾರವಾಗಬಲ್ಲುದು ಎನ್ನಬಹುದಷ್ಟೇ !

-ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು.

ಖಂಡಿತಕ್ಕೂ ಕಲೆಗಳು ಮಾರಾಟದ ವಸ್ತುಗಳಾಗುತ್ತಿವೆ; ಪ್ರತಿಷ್ಟೆಯ ಪಣವಾಗುತ್ತಿವೆ. ಕೂಸು ಬಡವಾಯಿತು ಎನ್ನುವಂತೆ ಕಲಾರಾಧಕ ಪೋಷಕರು, ಕಲಾರಾಧಕರು, ವಿದ್ಯಾರ್ಥಿಗಳು ಬಸವಳಿಯುವಂತಾಗುತ್ತಿದೆ. ಸಂಪಾದಕೀಯದಲ್ಲಿ ಬಿಚ್ಚಿಟ್ಟ ನೇರ ಅನಿಸಿಕೆ, ಅದರೊಂದಿಗಿನ ಎದೆಗಾರಿಕೆಗೆ ಭಲೇ ಎನ್ನಲೇ ಬೇಕು! ಅರಿಯುವವರಿಗೆ ಈ ಲೇಖನದ ಪ್ರಹಾರ ಖಂಡಿತಕ್ಕೂ ಸಾಕು. ಎಮ್ಮೆ ಚರ್ಮದವರಾದರೆ ಇನ್ನೂ ಎಚ್ಚರಗೊಳ್ಳಲಾರರು ಅಥವಾ ನಮ್ಮೆದುರಿಗೆ ಸಾಟಿ ಯಾರು? ಎನ್ನುವ ದಾರ್ಷ್ಟ್ಯತೆಯೇನೋ ಇದ್ದೀತು! ಅಲ್ಲವೇ?

-ಗೀತಾ ಕೊಂಕೋಡಿ, ಬರಹಗಾರರು, ಮಂಗಳೂರು.

ನೀವು ಕಲಿತ, ಅಭ್ಯಸಿಸಿದ ನೃತ್ಯ ಪ್ರಕಾರಗಳು, ವಿಷಯ, ಶೈಲಿಗಳು ಶಾಸ್ತ್ರೀಯವಾದುದು., ಮೌಲಿಕವಾದುದು. ಇಂದಿನವರಿಗೆ ಅಂಥದ್ದು ಬೇಡ.ಇಂದು ಕಲಿತು ನಾಳೆ ಪ್ರದರ್ಶಿಸಿ, ನಾಡಿದ್ದು ಅದನ್ನು ವೃತ್ತ ಪತ್ರಿಕೆಯಲ್ಲಿ ಬರುವಂತೆ ಮಾಡಿ-ನೋಡಿ; ಬರೀ ನಾಡಮಟ್ಟವಲ್ಲ! ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ತಮ್ಮದಾಗಬೇಕೆಂಬ ಅಭಿಪ್ರಾಯ. ಇವೆಲ್ಲ ಶ್ರಮದಿಂದ ಸಾಧ್ಯ ಎಂಬುದನ್ನರಿಯರು. ಅವರದ್ದು ಹೆಚ್ಚಿನ ಶ್ರಮ ಹಾಕುವ ಪ್ರವೃತ್ತಿಯಲ್ಲ! ಅವರದ್ದು ನವ್ಯ ನವ್ಯ ನವ್ಯ!

-ಮೋಹನ .ಗ. ಹೆಗಡೆ, ಸಾಗರ.

Leave a Reply

*

code