ಅಂಕಣಗಳು

Subscribe


 

ಆಶೀರ್ವಾದ -ಅಭಿವಂದನೆ

Posted On: Thursday, June 25th, 2009
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ಇಂದಿನ ದಿನಗಳಲ್ಲಿ ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ ಎಂದಾದಲ್ಲಿ ಅದರ ಹಿಂದಿನ ಸವಾಲುಗಳು ನಿಮಗರಿವಿರಬಹುದು. ಪುಟ್ಟ ಪುಟ್ಟ ಅಡಿಯಿಡುತ್ತಿರುವ ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು , ಓದುಗ ಸಹೃದಯರ ಉದಾರತೆಯನ್ನು, ಕೊಡುಗೆಗಳನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ. ಏಕೆಂದರೆ ನೂಪುರ ಭ್ರಮರಿಯು ನಮ್ಮೆಲ್ಲರ ಪತ್ರಿಕೆ, ಕಣ್ಬಿಡುತ್ತಿರುವ ಪುಟ್ಟ ಕೂಸು. ಇದರ ಬೆಳವಣಿಗೆಯಲ್ಲಿ ಪತ್ರಿಕೆಯ ಬಳಗದವರಷ್ಟೇ ಅಲ್ಲ; ಓದುಗ, ಕಲಾವಿದರ ಪಾತ್ರವೂ ಇದೆಯಲ್ಲವೇ?
ಪತ್ರಿಕೆಗೆ ಭಾರೀ ಆರ್ಥಿಕ ಹಿನ್ನಲೆಯೂ ಇರದಿರುವುದರಿಂದ, ಸ್ವಂತ ಖರ್ಚು-ಉಳಿತಾಯದಲ್ಲಿ ರೂಪುಗೊಳ್ಳುತ್ತಿರುವುದರಿಂದ ಲೇಖನ ಬರೆಯುವವರಿಗೂ ಉಚಿತವಾಗಿ, ನಿಯಮಿತವಾಗಿ ಪತ್ರಿಕೆ ತಲುಪಿಸುವುದೊಂದೇ ಸದ್ಯದ ಮಟ್ಟಿಗೆ ಸಂಭಾವನೆಯ ಬದಲಾಗಿ ಅರ್ಪಿಸುವ ಧನ್ಯವಾದ. ಈ ಬಗ್ಗೆ ಬೇಸರವಿಲ್ಲ ತಾನೇ?
ನೂಪುರ ಭ್ರಮರಿಯ ಜೊತೆ ನೀವೂ ಕೈಗೂಡಿಸುತ್ತೀರಾ ? ಸಂಚಿಕೆಯ ಜವಾಬ್ದಾರಿಯುತ ಪ್ರಾಯೋಜಕತ್ವಕ್ಕೆ ಅವಕಾಶವಿದೆ. ಜೊತೆಗೆ ವಿಶೇಷ ಸಂಚಿಕೆಗಳನ್ನು ರೂಪಿಸುವಲ್ಲೂ ತಾವು ನೆರವನ್ನೀಯಬಹುದು. ಸಂಚಿಕೆಗಳಿಗೆ ಪ್ರಾಯೋಜಕತ್ವ ನೀಡುವವರನ್ನು ಗೌರವದಿಂದ ಸ್ಮರಿಸಲಾಗುತ್ತದೆ. ಅವರು ಪತ್ರಿಕೆಯ ಆಜೀವ ಸದಸ್ಯರು ಮತ್ತು ಬಳಗದವರಾಗಿರುತ್ತಾರೆ. ಈಗಾಗಲೇ ಸಾಕಷ್ಟು ಮಂದಿ ಸಹಕಾರವನ್ನಿತ್ತಿದ್ದಾರೆ ಮತ್ತು ನೀಡುತ್ತಿದ್ದಾರೆ ಕೂಡಾ ! ಇದು ಕಲೆಗೆ, ಸಾಂಸ್ಖೃತಿಕ ಪತ್ರಿಕಾ ಮಾಧ್ಯಮಕ್ಕೆ ತಾವು ನೀಡುತ್ತಿರುವ ಕೊಡುಗೆ.

Leave a Reply

*

code