ಅಂಕಣಗಳು

Subscribe


 

ನೂಪುರ ಭ್ರಮರಿ ಕಲಾವಿದರ ಬೆನ್ನೆಲುಬು.

Posted On: Saturday, August 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ವಾಣಿಶ್ರೀ ರವಿಶಂಕರ್,ಸಂಜಯ್ ಭಟ್ ಬೆಣ್ಣೆ, ಕೀರಿಕ್ಕಾಡು ವನಮಾಲಾ ಕೇಶವ ಭಟ್, ವಸಂತ ಪ್ರಕಾಶ್

ತುಂಬಾ ಮಾಹಿತಿಪ್ರದವಾದ ಜರ್ನಲ್. ಚೆನ್ನೈಯಲ್ಲಿ ಇಂತಹ ನಿಯತಕಾಲಿಕೆಗಳು ಸಾಕಷ್ಟು ದೊರೆಯುತ್ತವೆ. ಆದರೆ ತವರುನಾಡು ಕರ್ನಾಟಕದಲ್ಲಿ ಸಂಗೀತ-ನೃತ್ಯಕ್ಕೆ ಸಂಬಂಧಿಸಿದಂತೆ ಕಲಾವಿದರನ್ನು ಉತ್ತೇಜಿಸುವ ಪತ್ರಿಕೆಗಳು ತೀರಾ ವಿರಳ. ಈ ನಿಟ್ಟಿನಲ್ಲಿ ನೂಪುರ ಭ್ರಮರಿ ನಿಜಕ್ಕೂ ಕಲಾವಿದರ ಬೆನ್ನೆಲುಬು.

-ವಾಣಿಶ್ರೀ ರವಿಶಂಕರ್, ಚೆನ್ನೈ.


ಸ್ತ್ರೀಯರು ಯಕ್ಷಗಾನ ಹಿಮ್ಮೇಳದಲ್ಲಿ ಅಭಿವೃದ್ಧಿ, ಯಶಸ್ಸು ಕಾಣುತ್ತಿರುವ ಕುರಿತು ಕಳೆದೆರಡು ಸಂಚಿಕೆಗಳಲ್ಲಿ ಓದಿ ತುಂಬಾ ಖುಷಿಯಾಯಿತು. ಬದಲಾಗುವ ತಾಂತ್ರಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನದ ಉಳಿಯುವಿಕೆಗೆ ತಮ್ಮ ಈ ಸೇವೆ ನಿರಂತರವಾಗಿ ಅರ್ಪಣೆಯಾಗಲಿ.

-ವಸಂತ ಪ್ರಕಾಶ್, ಪಣಜಿ, ಗೋವಾ.

ನೂಪುರ ಭ್ರಮರಿಯ ಕಳೆದ ಸಂಚಿಕೆ ವಿಷಯ-ವೈವಿಧ್ಯತೆಗಳಿಂದ ಕೂಡಿ ಮನ ಹರುಷಗೊಳಿಸಿತು. ಇದೇ ರೀತಿಯ ಚಿಂತನಶೀಲ ಬರಹಗಳಿಂದ ಭ್ರಮರಿಯು ಮನೆ-ಮನೆಗಳಲ್ಲಿ, ಜನಮನಗಳಲ್ಲಿ ವಿರಾಜಿಸುವಂತಾಗಲಿ.

-ಕೀರಿಕ್ಕಾಡು ವನಮಾಲಾ ಕೇಶವ ಭಟ್, ಕಾಸರಗೋಡು.


ಬರಹಗಾರನಾಗಿರುವ ನನ್ನ ಸಾಂಸ್ಕೃತಿಕ ಜ್ಞಾನ ಮತ್ತು ದೃಷ್ಟಿಕೋನದ ಬೆಳವಣಿಗೆಗೆ ಭ್ರಮರಿಯಿಂದಾಗಿ ತುಂಬಾ ಸಹಕಾರಿಯಾಗುತ್ತಿದೆ. ಭ್ರಮರಿಯ ಓದಿನಿಂದ ವಿಸ್ತರಿಸುತ್ತಿರುವ ನನ್ನ ಭಾರತೀಯ ಕಲೆಗಳ ಬಗೆಗಿನ ವಿಚಾರ ನನ್ನನ್ನು ಶಿರಸಿಯ ಶಾಸ್ತ್ರೀಯ ಮತ್ತು ಜನಪದ ನೃತ್ಯ ಸ್ಪರ್ಧೆಗಳಲ್ಲಿ ನಿರ್ಣಾಯಕನಾಗಿ ಜವಾಬ್ದಾರಿ ನಿರ್ವಹಿಸಲು ಸಹಾಯಕವಾಯಿತು. ತಿಳುವಳಿಕೆ ಹೆಚ್ಚಿಸಿದ ಭ್ರಮರಿಗೂ, ಭ್ರಮರಿಯ ಬಳಗಕ್ಕೂ ಚಿರರುಣಿ.

ಸಂಜಯ್ ಭಟ್ ಬೆಣ್ಣೆ, ಶಿರಸಿ.

Leave a Reply

*

code