Author: ಮನೋರಮಾ. ಬಿ.ಎನ್
ಯಕ್ಷಗಾನದ ದಂತಕತೆಯಾಗಿ ಬಾಳಿ ಬೆಳಗಿದ, ತಮ್ಮ ಶೈಲಿಯ ಅನನ್ಯತೆಯಿಂದ ಕಂಗೊಳಿಸಿ ಚಿಟ್ಟಾಣಿ ಶೈಲಿಯ ಜನಕನಾದ, ಯಕ್ಷಗಾನಪ್ರಿಯರೆಲ್ಲರಿಗೂ ಸರ್ವಥಾ ಆದರಣೀಯರಾದ, ಜನರಿಂದ ಪ್ರೀತಿಸಿ ಗೌರವಿಸಲ್ಪಟ್ಟ ಯಕ್ಷಗಾನದ ಮೊದಲ ಪದ್ಮಶ್ರೀ ಪ್ರಶಸ್ತಿ ವಿಜೇತ, ನಾಡುಕಂಡ ಅತ್ಯದ್ಭುತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ದಿವ್ಯಾತ್ಮಕ್ಕೆ ಸದ್ಗತಿಯನ್ನು ಕೋರಿ ಮರೆಯಾದ ಕಲಾವಿದನ ಭೌತಿಕ ಶರೀರಕ್ಕೆ ನೂಪುರ ಭ್ರಮರಿ ಆತ್ಯಂತಿಕ ಪ್ರೀತಿಯಿಂದ ನುಡಿನಮನ ಅಂಜಲಿಯನ್ನು ಅರ್ಪಿಸುತ್ತಿದೆ.
ಅಂತೆಯೇ ಕಲಾಲೋಕವನ್ನು ಬೆಳಗಿ ಕಳೆಯೇರಿಸಿ ಮರೆಯಾದ ಅನೇಕ ಕಲಾಧುರೀಣರಿಗೂ, ಕಲಾರತ್ನಗಳಿಗೂ ಭಕ್ತಿಪೂರ್ವಕವಾದ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದೆ.