ಅಂಕಣಗಳು

Subscribe


 

ನೃತ್ಯ ಮತ್ತು ದಲಿತರು: ಒಂದಷ್ಟು ಸಂದೇಹಗಳು

Posted On: Tuesday, August 16th, 2011
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ಜ್ಯೇಷ್ಟ-ಆಷಾಢ ಸಂಚಿಕೆಯಲ್ಲಿನ ನೃತ್ಯ ಮತ್ತು ದಲಿತರು: ಒಂದು ವಿಶ್ಲೇಷಣೆ ಎಂಬ ಲೇಖನಕ್ಕೆ ಪ್ರತಿಕ್ರಿಯೆ.

ಲೇಖಕಿ, ವ್ರಾತ್ಯರು ಸಂಗೀತ ಮತ್ತು ನೃತ್ಯಗಳನ್ನು ಕೆಟ್ಟ ರೀತಿಯಲ್ಲಿ ಪ್ರಯೋಗಿಸುತ್ತಿದ್ದರು ಎಂದಿದ್ದಾರೆ. ಹೀಗಿರುವಾಗ ಅವಹೇಳನದಿಂದ ಯಾವ ಕಲೆ ಉದ್ದಾರವಾಗಿದೆ? ವ್ರಾತ್ಯರು ಇಂದಿನ ದಲಿತರೇ ಆಗಿದ್ದಾರೆ ಎಂದು ಲೇಖಕಿ ಹೇಳಬಯಸುವುದಾದರೆ ವ್ರಾತ್ಯರು ಬಳಸುತ್ತಿದ್ದ ಕಲೆ ಉನ್ನತ ಮಟ್ಟಕ್ಕೆ ಏರುವಲ್ಲಿ ಹೇಗೆ ಸಹಕಾರಿ ಎಂದು ಹೇಳಲು ಸಾಧ್ಯವಿದೆಯೇ? ಮುಂದೆ ಹೇಳಲಾದ ಭರತನ ಮಕ್ಕಳು ಶಾಪಕ್ಕೆ ಗುರಿಯಾಗುವುದು, ಕಳಂಕಿತರಾಗುವುದು ಸಹ ಇದೇ ರೀತಿಯ ಸಂದೇಹಗಳನ್ನು ಹುಟ್ಟುಹಾಕುತ್ತದೆ. ಹಾಗಾದರೆ ಆ ಶಾಪಗ್ರಸ್ಥ ಮಕ್ಕಳು ಮತ್ತು ಅಥರ್ವವೇದ ಉಲ್ಲೇಖಿಸುವ ವ್ರಾತ್ಯರು ಇಂದಿನ ದಲಿತರೇ? ಅಲ್ಲವೆ? ಅವರ ಕೊಡುಗೆಯನ್ನು ವಿವರಿಸಿದರೆ ಸೂಕ್ತ. ಅಂತೆಯೇ ಭರತ ಮತ್ತು ಅವನ ಮಕ್ಕಳು ಬ್ರಾಹ್ಮಣರಾಗಿ ಹುಟ್ಟಿ ಬಂದವರು ಎಂಬುದನ್ನು ಪ್ರಸ್ತಾಪಿಸಿದ್ದೀರಿ. ಮತ್ತೊಂದೆಡೆ ಭರತ ಎಂಬುದಕ್ಕೆ ಶಬರ ಅರ್ಥವಿದೆಯೆಂಬುದನ್ನು ಹೇಳಿದ್ದೀರಿ. ಇದರಿಂದ ಏನನ್ನು ಹೇಳಲು ಬಯಸುತ್ತಿರುವಿರಿ?

ಕಲೆ ಉಳಿದು ಬೆಳೆಯಲು ಅದಕ್ಕಾಗಿ ಶ್ರಮಿಸುವವರು ಬೇಕು. ಕಲೆಯನ್ನು ರಸಾಸ್ವಾದನೆಗೆ ಒಯ್ಯುವ ಗುರಿ ಹೊಂದಿರಬೇಕು. ಇಲ್ಲದಿದ್ದರೆ ನೃತ್ಯಕ್ಷೇತ್ರಕ್ಕೆ ಕೊಡುಗೆ ಎಂದು ಪರಿಗಣಿಸಲು ಹೇಗೆ ಸಾಧ್ಯ? ಹಾಗಾಗಿ ಅವರ ಶ್ರಮವನ್ನು ಉದಾಹರಿಸುವುದಿದ್ದರೆ ಒಳಿತೇ ವಿನಾ; ಅನೌಚಿತ್ಯ ಬೆಳವಣಿಗೆಯನ್ನು ದಾಖಲಿಸುವುದರಿಂದಲ್ಲ. ಅಷ್ಟಕ್ಕೂ ಪ್ರತೀ ಜಾನಪದ ಮತ್ತು ಶಾಸ್ತ್ರೀಯವೆನಿಸಿಕೊಂಡ ನೃತ್ಯಗಳಿಗೆ ಅದರದ್ದೇ ಆದ ಹಿನ್ನಲೆಯಿದೆ. ಲೋಕದಲ್ಲಿರುವ ಪ್ರತೀ ಬುಡಕಟ್ಟುಗಳು ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಬೆಳವಣಿಗೆಯಲ್ಲಿ ಪಾತ್ರ ವಹಿಸಿದುದೂ ಇದೆ. ಈ ಹಿನ್ನಲೆಯಲ್ಲಿ ಎಲ್ಲಾ ಬುಡಕಟ್ಟುಗಳನ್ನು ದಲಿತರು ಎಂದು ನಂಬಿ, ಹೋಲಿಸಿ; ಅವರ ನೃತ್ಯಗಳು ಅವರ ಜೀವನ ಹಿನ್ನಲೆಯ ಪ್ರಮುಖ ಭಾಗ ಎಂದು ಹೇಳಿದರೆ; ಉಳಿದ ವರ್ಗಗಳಿಗೂ ನಾವಿದನ್ನು ಅನ್ವಯಿಸಿ ಮಾತಾಡಬಹುದಲ್ಲವೇ? ಸೂಕ್ತ ಆಧಾರಗಳ ಸಹಿತ ಸಂದೇಹಗಳಿಗೆ ಉತ್ತರಿಸಿ.

Leave a Reply

*

code