ಅಂಕಣಗಳು

Subscribe


 

ಕಾಲ-ನಾಟ್ಯ, ಪ್ರಕೃತಿದಿನ

Posted On: Saturday, February 27th, 2016
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಆಕಾಶಚಾರಿಯಲಿ ಕಾಲಪುರುಷ ಲಯಬದ್ಧವಾಗಿ ಸಾಗಿ

ಇನ್ನೊಂದು ಹಜ್ಜೆ ಎತ್ತಿಟ್ಟು ರಂಗಗೊಳಬಂದ ಕೊರಳು ತೂಗಿ

ಎದ್ದೆದ್ದು ಬಿದ್ದು ಬಿದ್ದೆದ್ದು ಎದ್ದು ಸದ್ದಿಸುವ ಹುಚ್ಚು ಹೊತ್ತ

ಪ್ರೇಕ್ಷಕರ ಕಾಣ ನಿರ್ಮೌನ ತಾಣ ಮುಂಪಯಣವೆತ್ತ ಗೊತ್ತಾ ??

***********

 

ಬಾಗಿ ಬಳುಕುವ ಲತೆಗಳಲಿ ಭೂವ್ಯೋಮಚಾರಿಯ ಸೂಚಿಸಿ

ವಿವಿಧ ಭಂಗಿಯ ವೃಕ್ಷಗಳ ಕೊಂಬೆಯಲಿ ಆಂಗಿಕ ರೇಖಿಸಿ

ಅರಳುಹೂಗಳ ದಳಗಳಂಗುಲಿಗಳಲಿ ಮುದ್ರೆಯ ತೋರ್ದುದು

ನಿತ್ಯಸಾತ್ತ್ವಿಕದಲ್ಲಿ ನರ್ತನದಿನವ ಮೆರೆದಿದೆ ಪ್ರಕೃತಿಯು

***********

Leave a Reply

*

code