ಅಂಕಣಗಳು

Subscribe


 

ನೃತ್ಯ ಕ್ಷೇತ್ರದ ಪ್ರಗತಿಯ ಬಗ್ಗೆ ಪ್ರಾಮಾಣಿಕ ಕಾಳಜಿ ಹಾಗೂ ಬದ್ಧತೆ ಉಳ್ಳ ಪತ್ರಿಕೆ

Posted On: Tuesday, March 10th, 2009
1 Star2 Stars3 Stars4 Stars5 Stars (No Ratings Yet)
Loading...

Author: ಕೆ. ರಾಮಮೂರ್ತಿ ರಾವ್, ಗಣಪತಿ ಹಾಸ್ಪುರ, ಪ್ರವೀಣ್ ಕುಮಾರ್

ಬೆಂಗಳೂರು ಗಾನಕಲಾ ಪರಿಷತ್ತಿನ ಪತ್ರಿಕೆ ಗಾನಕಲಾಸಿರಿಯ ಸಂಪಾದಕಿ ಅರ್ಚನಾ ಭಟ್, ಪುತ್ತೂರಿನ ಮೂಕಾಂಬಿಕ ನೃತ್ಯಶಾಲೆಯ ಗುರು ದೀಪಕ್ ಕುಮಾರ್, ಉಡುಪಿಯ ನೃತ್ಯ ವಿದುಷಿ ಪಾವನಾ, ವಿಜಯಕರ್ನಾಟಕ ಪತ್ರಿಕೆಯ ಕಾಸರಗೋಡು ವಿಭಾಗೀಯ ಮುಖ್ಯಸ್ಥ ವಿ. ಜಿ. ಕಾಸರಗೋಡು, ಬೆಂಗಳೂರಿನ ಸರಿತಾ ಶೆಟ್ಟಿ, ಕೃಷ್ಣಕುಮಾರ್, ಮಂಗಳೂರಿನ ಪತ್ರಕರ್ತ ಸುಚಿತ್ ಮುಂತಾದವರು ಪತ್ರಿಕೆಯ ಪ್ರಯತ್ನಗಳಿಗೆ ಪ್ರಶಂಸೆ ತೋರಿ ಶುಭ ಹಾರೈಸಿದ್ದಾರೆ.

ನೃತ್ಯ ಕ್ಷೇತ್ರದ ಪ್ರಗತಿಯ ಬಗ್ಗೆ ಪ್ರಾಮಾಣಿಕ ಕಾಳಜಿ ಹಾಗೂ ಬದ್ಧತೆ ಉಳ್ಳ ಪತ್ರಿಕೆಯ ಕಾರ್ಯ ಶ್ಲಾಘನೀಯ. ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಲೇಖನಗಳ ಶೈಲಿ ಸರಳವಾಗಿ ಸೊಗಸಾಗಿದೆ. ಈ ಕ್ಷೇತ್ರದ ಹಲವು ತೊಡಕು-ಒಡಕು, ಕಲೆಯ ಕಲಿಕೆಯಲ್ಲಿರುವ ವಿದ್ಯಾರ್ಥಿಗಳ-ಪಾಲಕರ-ಗುರುಗಳ ಇಷ್ಟ-ಕಷ್ಟ-ನಷ್ಟಗಳ ಬಗ್ಗೆ ಬೆಳಕು ಚೆಲ್ಲಬೇಕೆಂಬ ಹಂಬಲ ಹೊಂದಿರುವ ಪತ್ರಿಕೆಯ ಗೊತ್ತುಗುರಿಗಳಲ್ಲಿ ಸ್ಪಷ್ಟತೆ ಇದೆ. ಆರೋಗ್ಯಕರ ಚರ್ಚೆಗೆ ನಿಜಕ್ಕೂ ಇದೊಂದು ಅತ್ಯುತ್ತಮ ವೇದಿಕೆ. ಹಿರಿ-ಕಿರಿಯ ಕಲಾವಿದರ, ಅಭ್ಯಾಸಿಗಳ, ಕಲಾಪ್ರೇಮಿಗಳ ಮತ್ತು ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಪತ್ರಿಕೆ ಬೇಗನೆ ಪ್ರಗತಿ ಹೊಂದಲಿ. ನೃತ್ಯಕ್ಷೇತ್ರಕ್ಕೆ ಇದರಿಂದ ಹೆಚ್ಚು ಲಾಭ ದೊರೆಯುವಂತಾಗಲಿ.

-ಕೆ. ರಾಮಮೂರ್ತಿ ರಾವ್,  ಗೌರವ ಕಾರ್ಯದರ್ಶಿ,
ಭಾರತೀಯ ನೃತ್ಯಕಲಾ ಪರಿಷತ್, ಮೈಸೂರು.

ನೂಪುರ ಭ್ರಮರಿಯು ತಮ್ಮ ಸಾರಥ್ಯದಲ್ಲಿ ಚೆನ್ನಾಗಿ ಮೂಡಿಬರುತ್ತಿದೆ. ಈ ಪತ್ರಿಕೆಯ ಕುರಿತಾಗಿ ಸಾಕಷ್ಟು ಸಧಬಿರುಚಿಯ ಚರ್ಚೆಗಳು, ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕಲಾಪ್ರೇಮಿಗಳನ್ನು ಸೆಳೆಯುತ್ತ ಒಳ್ಳೆಯ ಮಾಹಿತಿ ನೀಡುತ್ತಿರುವ ಪತ್ರಿಕೆ ನಿರಂತರ ಸಾಗಲಿ, ಅಭಿಮಾನಿ ಬಳಗವನ್ನು ಸಾಗರದಂತೆ ವಿಶಾಲವಾಗಿ ಹಬ್ಬಿಸಿಕೊಳ್ಳಲಿ. ಇನ್ನಷ್ಟು ಕನ್ನಡಿಗರ ಮನೆ ತಲುಪುವಂತಾಗಲಿ. ಯಶಸ್ಸು ಸಿಗಲಿ.

-ಗಣಪತಿ ಹಾಸ್ಪುರ, ಪತ್ರಕರ್ತರು, ಚವತ್ತಿ, ಯಲ್ಲಾಪುರ, ಉತ್ತರಕನ್ನಡ.
ಪ್ರವೀಣ್ ಕುಮಾರ್, ನೃತ್ಯ ಗುರು, ಬೆಂಗಳೂರು.
ಪ್ರಸರಣಾಧಿಕಾರಿ, ಆವಿ ಪುಸ್ತಕ ಮನೆ, ಬೆಂಗಳೂರು.

Leave a Reply

*

code