ಅಂಕಣಗಳು

Subscribe


 

ಕಟಕಾವರ್ಧನ ಹಸ್ತ

Posted On: Friday, February 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಅಭಿನಯದರ್ಪಣದ ಪ್ರಕಾರ ಕಟಕಾಮುಖ ಹಸ್ತಗಳನ್ನು ಮಣಿಬಂಧದ ಬಳಿ ಸ್ವಸ್ತಿಕಾಕಾರವಾಗಿ ಇಡುವುದೇ ಕಟಕಾವರ್ಧನ. ಇದನ್ನು ನೃತ್ತಹಸವಾಗಿಯೂ ಪರಿಗಣಿಸುತ್ತಾನೆ ನಂದಿಕೇಶ್ವರ. ನಾಟ್ಯಶಾಸ್ತ್ರದಲ್ಲಿ ಅರ್ಧ ಮುಚ್ಚಿದ ಮುಷ್ಟಿಯನ್ನು ಇನ್ನೊಂದು ಮುಷ್ಟಿಯ ಮೇಲಿಟ್ಟರೆ ಕಟಕಾವರ್ಧಮಾನಕವೆನ್ನುತ್ತಾರೆ. ಬಾಲರಾಮಭರತದಲ್ಲಿ ಕಟಕಾವರ್ತ ಎಂಬ ಹೆಸರೂ ಇದೆ. ಹಸ್ತಮುಕ್ತಾವಳಿಯಲ್ಲೂ ಈ ಹಸ್ತವನ್ನು ಉಲ್ಲೇಖಿಸಲಾಗಿದೆ. ಭರತನಾಟ್ಯದ ನಾಟಡವು, ಹಾರಡವು (ಕುದಿತ್ತಮೆಟ್ಟು) ಮುಂತಾದ ಅಡವುಗಳಲ್ಲಿ ಈ ಹಸ್ತದ ಬಳಕೆ ಇದೆ. ಇದರ ಅಧಿದೇವತೆ : ಯಕ್ಷರಾಜ.

ವಿನಿಯೋಗ : ಪಟ್ಟಾಭಿಷೇಕ, ಪೂಜೆ, ಮದುವೆ ಮುಂತಾದವುಗಳಲ್ಲಿ ಉಪಯೋಗ, ಕಿರೀಟಧಾರಣೆ.

    ಇತರೇ ವಿನಿಯೋಗ : ಶೃಂಗಾರ, ಮನ್ನಣೆ, ವಿವಾಹ, ಆಶೀರ್ವಾದ, ಲಕ್ಷ್ಮಿ-ಗಣಪತಿ-ಸರಸ್ವತಿ-ದುರ್ಗಾದೇವಿಯರ ವಂದನೆ, ಸ್ತ್ರೀಯೋನಿ, ಖಡ್ಗ, ರೆಂಬೆಕೊಂಬೆಗಳು, ಸಮ್ಮಾನಿಸುವುದು, ಚಿನ್ನ-ಬೆಳ್ಳಿ-ತಾಮ್ರದ ತಂಬಿಗೆಗಳು, ಕುಂದವೆನ್ನುವ ಹೂವು, ಕುಮುದ ಪುಷ್ಪಗಳು, ಕೋಪವನ್ನು ಹತ್ತಿಕ್ಕುವುದು, ನಿರ್ಧಾರ ತೆಗೆದುಕೊಳ್ಳುವುದು, ಜಕ್ಕಿನಿ ನಟನ, ದಂಡ ಲಾಸ್ಯ, ಛತ್ರಿಯನ್ನು ಹಿಡಿದುಕೊಳ್ಳುವುದು, ಶಂಖ, ಬಾಳೆಹೂವು, ನಮಸ್ಕಾರ, ಚಿನ್ನ-ಬೆಳ್ಳಿ-ಮಿಶ್ರ ಲೋಹ ಮತ್ತು ಇನ್ನಿತರ ಪಾತ್ರೆಗಳು, ಗಡಿಗೆಯನ್ನು ತೆಗೆದುಕೊಂಡು ಹೋಗುವ ಹಾಲು ಮಾರುವವ, ಹೃದಯ, ಒಗ್ಗಟ್ಟು, ಛತ್ರಿಯನ್ನು ಹಿಡಿಯುವುದು, ಪ್ರಣಯಿಗಳ ತಾಂಬೂಲಗ್ರಹಣಾದಿಗಳನ್ನು ತೋರಿಸುವಾಗ ಬಳಸುತ್ತಾರೆ.

 

 

Leave a Reply

*

code