ಅಂಕಣಗಳು

Subscribe


 

ಒಳನೋಟ : ಜನವರಿ-ಫೆಬ್ರವರಿ 2009

Posted On: Monday, February 16th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಜನವರಿ-ಫೆಬ್ರವರಿ

 • * ದಿನಾಂಕ ೨೯ ಡಿಸೆಂಬರ್- ದರ್ಶಿನಿ ಮಂಜುನಾಥ್ ಅವರ `ನೃತ್ಯದಿಶಾ’ ಸಂಸ್ಥೆಯ ಉದ್ಘಾಟನೆ ಮತ್ತು ಸಂಸ್ಥೆಯ ವಿದ್ಯಾರ್ಥಿ ಗಳಿಂದ ‘ನೃತ್ಯ ವಂದನ’ ಕಾರ್ಯಕ್ರಮ ಗುರು ಪದ್ಮಿನಿ ರಾವ್ ಅವರಿಗೆ ಅರ್ಪಣೆ- ಬೆಂಗಳೂರಿನ ನಯನಾ ಸಭಾಂಗಣದಲ್ಲಿ.
 • * ೭ ಜನವರಿ- ಚೆನ್ನೈಯ ಸಂಗೀತ ಅಕಾಡೆಮಿಯಲ್ಲಿ,  ೧೫ ಜನವರಿಯಂದು ಬೆಂಗಳೂರಿನ ಕಿಂಕಿಣಿ ನೃತ್ಯೋತ್ಸವದಲ್ಲಿ, ೩೧ ಜನವರಿಯಂದು ಬೆಂಗಳೂರಿನ ದೇವಗಿರಿ ಶ್ರೀನಿವಾಸ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಚೆನ್ನೈಯ ಶ್ರೀಕೃಷ್ಣ ಗಾನಸಭಾದ ನೃತ್ಯೋತ್ಸವದಲ್ಲಿ ಪುರಸ್ಕೃತ ರಾದ ಖ್ಯಾತ ನೃತ್ಯ ದಂಪತಿ ಶ್ರೀಧರ್ ಮತ್ತು ಅನುರಾಧಾ ಶ್ರೀಧರ್ ಅವರಿಂದ ಮಹಾಭಾರತ ನೃತ್ಯ ಪ್ರಸ್ತುತಿ.
 • * ಜನವರಿ ೪ರಿಂದ ಫೆಬ್ರವರಿ ೪ರವರೆಗೆ ಮಂಗಳೂರಿನಲ್ಲಿ ಕರಾವಳಿ ಉತ್ಸವ. ಮೂರು ಪ್ರತಿಷ್ಠಿತ ವೇದಿಕೆಗಳಲ್ಲಿ ದಿನಂಪ್ರತಿ ಜರುಗುವ ವಿವಿಧ ಬಗೆಯ ಕಾರ್ಯಕ್ರಮಗಳ ಸಾಂಸ್ಕೃತಿಕ ಜಾತ್ರೆ.
 • * ೪ ಜನವರಿ- ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ಯಾದ ಕರಾವಳಿ ನೃತ್ಯಕಲಾ ಪರಿಷತ್ತಿನ ವತಿಯಿಂದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮ.
 • ಮೈಸೂರಿನ ನೃತ್ಯಾಲಯ ಟ್ರಸ್ಟ್ ನ ಡಾ.ತುಳಸಿ ರಾಮಚಂದ್ರ ಅವರಿಂದ ಭರತ ಮುನಿಗೆ ನುಡಿನಮನ, ಕಲೋಪಾಸಕರಿಂದ ಪುಷ್ಪಾರ್ಚನೆ-ನೃತ್ಯಾರ್ಪಣ.
 • ನಾಟ್ಯಾಚಾರ್ಯರುಗಳಾದ ಜಯಲಕ್ಷಿ ಆಳ್ವ, ಕೆ.ಬಿ. ಮಾಧವರಾವ್, ಉಳ್ಳಾಲ ಮೋಹನ್ ಕುಮಾರ್, ಕುದ್ಕಾಡಿ ವಿಶ್ವನಾಥ ರೈ, ಬಿ. ಪ್ರೇಮನಾಥ, ಮಾಸ್ಟರ್ ವಿಠಲ್ ಅವರಿಗೆ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಸನ್ಮಾನ; ನೃತ್ಯವಿದುಷಿಯರಿಂದ ನೃತ್ಯೋಪಾಸನೆ.
 • * ೭ ರಿಂದ ೧೨ ಜನವರಿ ವರೆಗೆ ಆಳ್ವಾಸ್ ವಿರಾಸತ್: ಖ್ಯಾತಿವೆತ್ತ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ; ಶೋಭಾವನ, ಮೂಡಬಿದಿರೆಯಲ್ಲಿ. ಈ ಬಾರಿಯ ಆಳ್ವಾಸ್ ಪ್ರಶಸ್ತಿ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರಿಗೆ.
 • * ೭ ಜನವರಿ- ನಾಗಪುರದ ಎನ್‌ಎಡಿಪಿ ಆಡಿಟೋರಿಯಂನಲ್ಲಿ ವೈಜಯಂತಿ ಕಾಶಿ ಮತ್ತು ತಂಡದ `ಜನನೀ ಜನ್ಮ ಭೂಮಿಶ್ಚ’ ನೃತ್ಯ ನುಡಿಚಿತ್ರ.
 • * ೧೦ ಜನವರಿ- ರವೀಂದ್ರ ಕಲಾಮಂಟಪ, ಎಂಜಿ‌ಎಂ ಕಾಲೇಜು ಉಡುಪಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ವಿರಚಿತ `ಅಂಬೆ’ ಏಕವ್ಯಕ್ತಿ ರಂಗ ಪ್ರಯೋಗ ಡಾ.ವಸುಂಧರಾ ದೊರೈಸ್ವಾಮಿ ಅವರಿಂದ.
 • * ೧೧ ಜನವರಿ- ಪುತ್ತೂರಿನ ಮೂಕಾಂಬಿಕಾ ನೃತ್ಯ ಕಲಾಶಾಲೆಯ ನೃತ್ಯೋತ್ಸವ.
 • * ೧೦ ಮತ್ತು ೧೧ ರಂದು ಬೆಂಗಳೂರಿನ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ರಂಗ ತರಂಗದ ಸಹಭಾಗಿತ್ವದಲ್ಲಿ ಕೆಂಗೇರಿಯ ಶಾಂಭವಿ ಡ್ಯಾನ್ಸ್ ಥಿಯೇಟರ್ ನಲ್ಲಿ ಸಂಕ್ರಾಂತಿ ಪ್ರತಿಭಾ ಸಮಾರಂಭದ ಪ್ರಯುಕ್ತ ಎರಡು ವಿಭಾಗಗಳಲ್ಲಿ ಶಾಸ್ತ್ರೀಯ, ಜಾನಪದ, ಸುಗಮ ಸಂಗೀತ ಸ್ಪರ್ಧೆ ಮತ್ತು ಶಾಸ್ತ್ರೀಯ, ಸಮಕಾಲೀನ ಅಥವಾ ಸೃಜನಶೀಲ, ಜಾನಪದ ನೃತ್ಯ ಸ್ಪರ್ಧೆ.
 • * ೧೧ ಜನವರಿ- ಕಿಂಕಿಣಿ ಉತ್ಸವದ ಅಂಗವಾಗಿ ಬೆಂಗಳೂರಿನ ಎಚ್‌ಎನ್ ಕಲಾಕ್ಷೇತ್ರದಲ್ಲಿ ವೈಜಯಂತಿ ಕಾಶಿ ಅವರಿಂದ `ಕೂಚುಪುಡಿ ವೈಭವಂ’ ಏಕವ್ಯಕ್ತಿ ಪ್ರಯೋಗ.
 • * ೧೪ ಜನವರಿ- ಮಂಗಳೂರಿನ ಸನಾತನ ನಾಟ್ಯಾಲಯದಿಂದ ಸನಾತನ ನೃತ್ಯೋತ್ಸವ.
 • * ೧೬ ಜನವರಿ- ಗುಜರಾತ್‌ನ ಅಹಮದಾಬಾದ್‌ನ ಮೊದೇರಾ ಉತ್ಸವದಲ್ಲಿ ವೈಜಯಂತಿ ಕಾಶಿ ಅವರಿಂದ ಸಾಂಪ್ರದಾಯಿಕ ಕೂಚುಪುಡಿ ಪ್ರದರ್ಶನ.
 • * ೧೬ ಜನವರಿ- ಮೈಸೂರಿನ ಭೂಷಣ್ ಅಕಾಡೆಮಿಯಿಂದ ‘ಉದ್ಭವ ಭೂಷಣ’ ಪ್ರಶಸ್ತಿ ಸನ್ಮಾನಿತ ಮಂಗಳೂರಿನ ಕು. ಸೌಂದರ್ಯ ಅವರಿಂದ ನೃತ್ಯ ಪ್ರಸ್ತುತಿ, ಜಗನ್ಮೋಹನ ಅರಮನೆಯಲ್ಲಿ.
 • * ೧೭ ಜನವರಿ- ದೃಷ್ಟಿ ನೃತ್ಯೋತ್ಸವದ ಅಂಗವಾಗಿ ವಿವಿಧ ಕಲಾವಿದರಿಂದ ಭರತನಾಟ್ಯ, ಕಥಕ್, ಏಕವ್ಯಕ್ತಿ ಯಕ್ಷಗಾನ, ಸಮಕಾಲೀನ ನೃತ್ಯ ಮತ್ತು ಕಳರಿಯಪಟ್ಟು ನೃತ್ಯ ಪ್ರದರ್ಶನ ಹಾಗೂ ಕಲಾವಿದರಾದ ಮೈಸೂರು ವಿ.ಸುಬ್ರಮಣ್ಯ ಮತ್ತು ವೈಜಯಂತಿ ಕಾಶಿ ಅವರಿಗೆ ಸನ್ಮಾನ-ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ.
 • * ೧೮ ಜನವರಿ- ಅನನ್ಯ ಸಂಸ್ಥೆಯ ವತಿಯಿಂದ ಭಾವ ಸಂಕ್ರಮಣ ಕಾರ್ಯಕ್ರಮ.
 • * ಬೆಂಗಳೂರಿನ ಸೇವಾಸದನದಲ್ಲಿ ಭರತನಾಟ್ಯ ಗುರು ಮತ್ತು ಕಲಾವಿದರಾದ ಪ್ರೊ.ಎಂ. ಆರ್ ಕೃಷ್ಣಮೂರ್ತಿ ಅವರಿಂದ ಉಪನ್ಯಾಸ ಮತ್ತು ಅನುಭವ ಸಮಾಲೋಚನೆ.
 • * ೨೫ ಮತ್ತು ೨೬ ಜನವರಿ – ಶಾಂಭವಿ ಡ್ಯಾನ್ಸ್ ಥಿಯೇಟರ್‌ನಲ್ಲಿ ಬೆಲ್ಲಿ ಅಥವಾ ಓರಿಯಂಟಲ್ ಡ್ಯಾನ್ಸ್ ಕುರಿತಾಗಿ ಸ್ಪೇಯ್ನ್‌ನ ಅಮೋರ್ ಅವರಿಂದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ.
 • * ೨೯ ಜನವರಿ-ಮಹಾರಾಷ್ಟ್ರ ಸರ್ಕಾರ, ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಸಪ್ತ ರಂಗ ಉತ್ಸವದ ಅಂಗವಾಗಿ ಮುಂಬೈನ ರವೀಂದ್ರ ನಾಟ್ಯ ಮಂಚ್‌ನಲ್ಲಿ ಶಾಂಭವಿ ಡ್ಯಾನ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ಗುರು ವೈಜಯಂತಿ ಕಾಶಿ ನಿರ್ದೇಶನದ `ವೀರಭಾರತಿ’ ಕೂಚುಪುಡಿ ರಂಗ ಪ್ರಸ್ತುತಿ.
 • * ಫೆಬ್ರವರಿ ೯ ರಿಂದ ನಾಲ್ಕು ದಿನಗಳ ಪರ್ಯಂತ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ನಾಟಕೋತ್ಸವ-‘ರಂಗರಂಗೋತ್ಸವ’
 • * ೧೩, ೧೪, ೧೫ ಫೆಬ್ರವರಿ- ಮಂಗಳೂರಿನ ಬಳ್ಳಾಲ್‌ಬಾಗ್‌ನ ಸನಾತನ ನಾಟ್ಯಾಲಯದಲ್ಲಿ ಭರತಮಣಿಸಭಾದ ವತಿಯಿಂದ ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ.
 • * ಫೆಬ್ರವರಿ ೧೩ರಿಂದ ಮೂರು ದಿನದ ಪರ್ಯಂತ ಸುಳ್ಯದ ಖ್ಯಾತ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರ ಮಾರ್ಗದರ್ಶನದಲ್ಲಿ ರಂಗಮನೆಯಲ್ಲಿ ಮಕ್ಕಳ ನಾಟಕೋತ್ಸವ

* ಫೆಬ್ರವರಿ ೨೦ -ಬೆಂಗಳೂರಿನ ವೈಜಯಂತಿ ಕಾಶಿ ಅವರ ಪುತ್ರಿ, ಶಿಷ್ಯೆ ಪ್ರತೀಕ್ಷಾ ಕಾಶಿ ಅವರ ಕೂಚುಪುಡಿ ರಂಗಪೂಜಾ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ.
* ಫೆಬ್ರವರಿ ೨೧- ಬೆಂಗಳೂರಿನ ಯವನಿಕಾದಲ್ಲಿ ಸಂಜೆ ೬ ಗಂಟೆಗೆ  ಕಲ್ಪತರು ಕಲಾವಿಹಾರ ಸಂಸ್ಥೆಯ ವಿದುಷಿ ಪದ್ಮಜ ಸುರೇಶ್ ಅವರ ಶಿಷ್ಯೆ,ಕು. ತಾರಿಣಿ ಅವರ ಅರಂಗೇಟ್ರಂ.
* ಕರ್ನಾಟಕ ವಿಶ್ವವಿದ್ಯಾಲಯದ ೫೯ನೇ ಘಟಿಕೋತ್ಸವದ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶ್ರೀ ಮಹಾಬಲ ಹೆಗಡೆ, ಕೆರೆಮನೆ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ, ಕುಲಾಧಿಪತಿ ಶ್ರೀ ರಾಮೇಶ್ವರ್ ಠಾಕೂರ್ ಅವರು ನೀಡಿ ಸನ್ಮಾನಿಸಿದರು.
* ಪಂಡಿತ್ ರಾಜಶೇಖರ ಮನ್ಸೂರ್, ನೃತ್ಯ ಕಲಾವಿದೆ ಮಂಜು ಭಾರ್ಗವಿ, ವಸಂತ ಮಾಧವಿ, ಎಸ್.ಶಂಕರ್, ಟಿ. ಆರ್. ರಂಗಸ್ವಾಮಿ, ಶುಭಾ ಹುಯಿಲಗೋಳ, ಸಂಜೀವ ಪೋತದಾರ್, ಕೆ. ಹರಿದಾಸ್, ಭದ್ರಗಿರಿ ಸರ್ವೋತ್ತಮ ದಾಸ್, ಜಯಶ್ರೀ ಅರವಿಂದ್, ಎನ್. ಎಸ್. ಪ್ರಸಾದ್ ಅವರಿಗೆ ಈ ಸಾಲಿನ ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

Leave a Reply

*

code