ಅಂಕಣಗಳು

Subscribe


 

ಕಲೆಯದೀವಿಗೆ –ಈ ನೂಪುರ ಭ್ರಮರಿ

Posted On: Wednesday, July 30th, 2014
1 Star2 Stars3 Stars4 Stars5 Stars (No Ratings Yet)
Loading...

Author: ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಅನಂತರಾಂ, ಡಾ.ಶೋಭಾ,ಮಾಸ್ಟರ್ ವಿಠಲ್

ಹಳಿಯದೆಯೇ ಆರನ್ನೂ
ಕಲಿತ ಕಲೆಗಳನಾಂತು
ಬೆಳಕ ಒಡಮೂಡಿಸುವ
ಛಲಕೆ ಮನಮಾಡು

ಭಾರತೀಯಪರಂಪರೆಗೆ ಒತ್ತುನೀಡಿದ, ಅಳಿದುಹೋಗುವ ಮಹತ್ತರ ವಿಷಯಗಳಲ್ಲಿ ಬರೋಬ್ಬರಿ ಅರುವತ್ತು ಮಹಾಮಹಿಮರನ್ನು ಆಯ್ಕೆಮಾಡಿ ಸಾರಸ್ವತಲೋಕಕ್ಕೆ ಅರ್ಪಣೆಗೊಳಿಸಿದ ವಿಶೇಷತೆಗಳನ್ನು ಸಾದರಪಡಿಸಿದ ಭ್ರಮರಿಯ ಸಂಚಿಕೆ 3-4 ಅಭಿನಂದನೀಯ. ಪತ್ರಿಕೆಯ ಒಳಗಡೆ ನಿರೀಕ್ಷಿಸಹೊರಟರೆ ಸರ್ವಂ ನೃತ್ಯಮಯಂ ಎಂದುಲಿಯುತ್ತಿತ್ತು.
ಹಟವನ್ನು ಬಿಡಬೇಡ ಹಠಯೋಗಿಯಂತೆ
ಹಟವಿಲ್ಲದಿರೆ ನಿನಗೆ ಇರದು ನಿಶ್ಚಿಂತೆ
ಹಟವೆಂದರೇನೆಂದು ಹಟದೊಳಗೆ ಇಳಿ, ನೋಡು
ಹಟ ತಳೆದ ನಿನ್ನಂತೆ ಅಲ್ಲಿಪ್ಪರೊಡಗೂಡು
ಹಟವೆ ಬದುಕಿನ ಸಾರ್ಥಕತೆಗಿಪ್ಪ ತಂತ
ದಿಟವಾಗಿ ನಂಬಿದರೆ ಅದು ದಿವ್ಯಮಂತ್ರ
ಹೌದು, ನೃತ್ಯಸಮಾರಂಭವಾಗಲೀ, ಯಕ್ಷಗಾನ ಲಲಿತಕಲೆ ಆವುದೇ ಕಲಾಚಟುವಟಿಕೆ ಕೃತಿಸಮೀಕ್ಷೆಯಾಗಲೀ ಜರುಗುತ್ತದೆಂಬ ಸುಳಿವು ಆವುದೇ ಕಲಾಪೂರ್ವವಾಸನೆಯಿದ್ದವರಲ್ಲಿ ಒದಗಿಬಂದರೆ ಮುಗಿಯಿತು; ನೂಪುರ ಭ್ರಮರಿಯ ಬಳಗ ಬಂದೇ ಬರುತ್ತಾರೆ ಎಂದೇ ನಾವು ತಿಳಿದುಕೊಳ್ಳಬಹುದಾದಷ್ಟು ಆಸ್ಥೆ ನಿಮ್ಮದು. ನೂಪುರದ ಧ್ವನಿ ಎರಲಿ. ಕೊಡಗಿನೆಡೆಯಿಂದೇರಿ ಡಿಲ್ಲಿಯ ತುತ್ತತುದಿಯತನಕ- ‘ನಮೋ ನಮಃ’ದ ವರೆಗೆ.

– ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಕಾಸರಗೋಡು.

ಸಂಚಿಕೆ ಆಪ್ತವಾಗಿತ್ತು. ಲೇಖನಗಳು ಸೊಗಸಾಗಿದ್ದವು. ಎಲ್ಲಕ್ಕಿಂತಲೂ ಹೆಚ್ಚಾಗಿ ಹಿನ್ನೆಲೆಯ ನೃತ್ಯರೇಖಾಚಿತ್ರಗಳು ಆಕರ್ಷಿಸಿದವು. ಮುದ್ರಣದ ಗುಣಮಟ್ಟ ಇನ್ನೂ ಎತ್ತರಕ್ಕೇರಿದರೆ ಮತ್ತಷ್ಟು ಆನಂದವಾಗುತ್ತದೆ.

– ಅನಂತರಾಂ, ಹಿರಿಯ ಕಲಾಸಂಘಟಕರು, ಬಿಟಿಎಂ ಕಲ್ಚರಲ್ ಅಕಾಡೆಮಿ, ಬೆಂಗಳೂರು.

ವಾತ್ಸಾಯನನ ಕಾಮಸೂತ್ರದ ಕಲಾದೃಶ್ಯವನ್ನು ಬಹುಸೊಗಸಾಗಿ, ಸರಳವಾಗಿ ಮಹಾಬಲೇಶ್ವರ ಭಟ್ ಅವರು ಅನಾವರಣ ಮಾಡಿದ್ದಾರೆ. ಸಹಜ ಓದಿಗೆ ದಕ್ಕದ ವಿಷಯಗಳನ್ನು ಸರಳವಾಗಿ ಸಮಗ್ರವಾಗಿ ಒಂದೇ ಕಡೆ ಕೊಟ್ಟಿದ್ದಾರೆ. ವಾತ್ಸಾಯನನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅವಕಾಶವಾಗಿದೆ. ಲೇಖನ ಓದಿಸಿಕೊಂಡು ಹೋಗುತ್ತದೆ ಮಾತ್ರವಲ್ಲ ಸಂಗ್ರಹಯೋಗ್ಯ. ಅಭಿನಂದನೆಗಳು.

– ಡಾ.ಶೋಭಾ ಶಶಿಕುಮಾರ್, ನೃತ್ಯಸಂಶೋಧಕರು-ಉಪನ್ಯಾಸಕರು,ಬೆಂಗಳೂರು.

ಸರಸ್ವತೀ ಸಮಾನರು ತಾವು. ನೃತ್ಯದ ಬಗ್ಗೆ ಅಪಾರ ಅರಿವನ್ನು ಮೂಡಿಸುವ ನಿಮ್ಮ ಈ ಯತ್ನ ಶ್ರೀ ಶಾರದಾಮಾತೆಯ ಕರುಣಕಟಾಕ್ಷದಿಂದಲೇ ಸೃಷ್ಟಿಗೊಂಡಿದೆ. ನೃತ್ಯದಿಂದಲೇ ಒಂದು ಪತ್ರಿಕೆಯನ್ನು ಓದುವಂತೆ ಮಾಡಬಹುದು ಎಂಬ ನಿದರ್ಶನವಿದು. ನೃತ್ಯಕಲಾವಿದರಿಗೆ ತುಂಬುಹೃದಯದ ಕಾಣಿಕೆಯಾಗಿ ನಿಡುತ್ತಿರುವ ನಿಮ್ಮ ಪತ್ರಿಕಾಸೆವೆ ಒಂದು ಉತ್ತಮದಾನವೇ ಸರಿ.

– ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರು, ಮಂಗಳೂರು.

****************

Leave a Reply

*

code