ಅಂಕಣಗಳು

Subscribe


 

ಕಾಂಗೂಲ ಹಸ್ತ

Posted On: Monday, February 15th, 2010
1 Star2 Stars3 Stars4 Stars5 Stars (No Ratings Yet)
Loading...

Author: 'ಮನೂ' ಬನ

Copyrights reserved. No use Without prior permission.

ಹರನು ವಿಷವನ್ನು ಘಟಿಕೆಯನ್ನಾಗಿ ಮಾಡಿದಾಗ ಜನಿಸಿದ ಹಸ್ತ. ಸಿದ್ಧವರ್ಣ, ಬಂಗಾರಬಣ್ಣ, ಋಷಿ: ಕ್ರೌಂಚ ವಿಧಾರಣ (ಸುಬ್ರಹ್ಮಣ್ಯ), ಅಧಿದೇವತೆ : ಪದ್ಮ (ಲಕ್ಷ್ಮೀ).

ವಿನಿಯೋಗ: ಗಜನಿಂಬೆ ಹಣ್ಣು, ಬಾಲಕುಚಗಳು, ಕಲ್ಹಾರ ಪುಷ್ಪ, ಚಕೋರ ಪಕ್ಷಿ, ಅಡಿಕೆಮರ, ಕಿರುಗೆಜ್ಜೆಗಳು, ಗುಳಿಗೆ, ಚಾತಕ ಪಕ್ಷಿ, ತೆಂಗಿನಕಾಯಿ.

ಇತರೇ ವಿನಿಯೋಗ : ಸಣ್ಣ ಹಣ್ಣು, ಅಲ್ಪಗ್ರಾಸ, ಬೆಕ್ಕು ಮೊದಲಾದ ಪ್ರಾಣಿಗಳ ಪಂಜ, ಮಕ್ಕಳ ಗಲ್ಲ ಹಿಡಿಯುವುದು, ಸ್ತನ ತೊಟ್ಟು, ಹೊಗೆಸೊಪ್ಪು, ಗಂಟೆಗಳು, ನೀಲ ತಾವರೆ, ಸಣ್ಣ ಉಂಡೆಗಳು, ಅಹಾರದ ಮುದ್ದೆಗಳು, ನಕ್ಷತ್ರ, ಬದರೀ ಹಣ್ಣು, ವೃತ್ತ, ಮಲ್ಲಿಗೆ ಹೂವು, ಮಂಜಿನಗಡ್ಡೆಗಳು, ಸಿದ್ಧ ಜಾತಿ, ಬಂಗಾರ, ಕಾರ್ಕಾಯ ಹಣ್ಣು, ಚಿಕ್ಕದು ಎಂಬ ಸೂಚನೆಗೆ, ಚೇಳು, ಕೋಪದಿಂದ ಸ್ತ್ರೀಯರು ಮಾತುಗಳನ್ನಾಡುವುದು, ನೇರಳೆಹಣ್ಣು, ದ್ರಾಕ್ಷಿಹಣ್ಣು, ತೊಂಡೆಹಣ್ಣು, ಬಿಂಬಾಫಲ, ತೆನೆ, ಅರೆನರೆತ ಹಣ್ಣು ಇತ್ಯಾದಿ.

ಕಾಮದೇವ, ಮುತ್ತು, ರತ್ನ, ಪಚ್ಚೆರತ್ನ, ಮಣಿ, ಕೆಂಪು ರತ್ನ, ಚಂದ್ರನೀಲ, ಸ್ಪಟಿಕ, ಮುದ್ರಿಕೆಗಳು, ಸ್ತ್ರೀ ಆವೇಶ, ಸಣ್ಣ ವಿಷಯ, ಪೂರ್ಣ ಫಲ, ಚಂದ್ರಕಾಂತ ರತ್ನ, ಸೂರ್ಯಕಾಂತ ಮಣಿ, ವಜ್ರ, ಹವಳ, ನಿಂಬೆ-ಕಿತ್ತಳೆ ಹಣ್ಣುಗಳು, ಅಡಕೆ, ಮುತ್ತು ಕೊಡುವುದು, ಕ್ಷಿರಿಕ-ಕರಮರ್ದವೆಂಬ ಹಣ್ಣುಗಳು, ಹೊಗೆಸೊಪ್ಪು ಇತ್ಯಾದಿಗಳನ್ನು ಸೇರಿಸಿ ವೀಳ್ಯ ತಯಾರು ಮಾಡುವುದು, ತಿನ್ನುವುದು, ನವವಧು ಸಮಾಗಮ, ಯುವತಿಯ ಸ್ತನಗಳು, ನಕ್ಷತ್ರ, ಗ್ರಹಗಳ ಮಿಲನ, ಮೃದು, ನವಿಲಿನ ವೇಗಚಲನೆ, ಬೆಕ್ಕಿನ ಪಾದ, ಮಲ್ಲಿಕಾ-ಬಕುಳ-ನಾಗಕೇಸರ ಪುಷ್ಪಗಳು, ಮಾಂಸದುಂಡೆ, ರೋಮಕೂಪ, ಕಣ್ಣು, ಮೂಗು, ಗಲ್ಲದ ಅಡಿಭಾಗ, ಹುಬ್ಬು, ಉಗುರು, ಹೆಬ್ಬೆರಳು, ಕಿರುಬೆರಳು, ‘ಮುಂದೆ’ ಎನ್ನಲು, ಪಶ್ಚಾತ್ತಾಪ, ಕಾರುಣ್ಯ, ಅಕ್ಕರೆ, ದಯೆ, ಸೌಂದರ್ಯ, ಹೃದಯ ಸಂತೋಷ, ವಿಲಾಪ, ಅರ್ಥವಿಲ್ಲದಿರುವಿಕೆ, ಮೈದಡವುವುದು, ನಿರರ್ಥಕ, ನಿಷ್ಫಲ, ನಿಷೇಧ, ಶೂನ್ಯ, ಹೂವುಗಳು, ಗಲ್ಲವನ್ನು ಹಿಡಿಯುವುದು, ಕರ್ಣಕುಂಡಲ, ಚಿಟ್ಟೆ, ಕಾಡುನೊಣ, ಗೆಜ್ಜೆನಾದ ಇತ್ಯಾದಿಗಳ ಸೂಚನೆಗೆ ಬಳಸಬಹುದು.

ಸಂಕರ ಹಸ್ತ ವಿಭಾಗದಲ್ಲಿ ಕಾಂಗೂಲ ಹಸ್ತವನ್ನು ಅಧೋಮುಖವಾಗಿ ಹಿಡಿದರೆ ಗೋಸ್ತನಗಳೆಂದೂ, ಒಂದು ಬಗೆಯ ಹಾರವೆಂದೂ, ದ್ರಾಕ್ಷಾಫಲವೆಂದು, ಮೇಲ್ಮುಖವಾಗಿ ಹಿಡಿದರೆ ಶಾಂತರಸವೆಂದೂ, ಮೂಗಿನ ಬಳಿ ಹಿಡಿದರೆ ಮೂಗುತಿಯೆಂದೂ, ಕಿವಿಯ ಬಳಿ ಹಿಡಿದರೆ ಕರ್ಣಾಭರಣವೆಂದೂ ಅರ್ಥ.

ನಾನಾರ್ಥ ಹಸ್ತ ವಿಭಾಗದಲ್ಲಿ ಕಾಂಗೂಲ ಹಸ್ತವನ್ನು ಮೇಲ್ಮುಲವಾಗಿ ಹಿಡಿದರೆ ಕನ್ನೈದಿಲೆಯೆಂದೂ, ಸಂಪಿಗೆ ಹೂ, ತಾವರೆ, ಹೊಂಗೆ ಹೂಗೊಂಚಲು, ನೀರುಗುಳ್ಳೆ ಎಂದು ಅರ್ಥ.

ಇಂದೀವರ (ನೀಲಿಕಮಲ), ಕಲ್ಹಾರ (ಜಲಪುಷ್ಪ), ಚಂಪಕ, ತಾಪಿಂಚ, ಕೋರಕಾಣಾ, ವರಾಟಿಕಾ, ಬುದ್ಬುದಾ ಮುಂತಾದ ಹೂವುಗಳಿಗೆ ಕಾಂಗೂಲಹಸ್ತವನ್ನು ಬಳಸಲಾಗುತ್ತದೆ. ಇವುಗಳನ್ನು ಪುಷ್ಪ ಹಸ್ತಗಳು ಎಂದು ಭರತಾರ್ಣವ ಸಂಬೋಧಿಸಿದೆ.

ಈ ಹಸ್ತವನ್ನು ಅಗ್ನಿಹಸ್ತದಲ್ಲಿ, ನಾಲ್ಕು ಸಂಖ್ಯೆ ತೋರಿಸುವಲ್ಲಿ, ಚಂಪಕ, ತಿಂತ್ರಿಣಿ(ಹುಣಸೆ ಹುಳಿ) ವೃಕ್ಷಗಳನ್ನು, ಮೃಗಶೀರ್ಷ ನಕ್ಷತ್ರ, ಮೇಷ ರಾಶಿ ಎನ್ನಲು ಬಳಸಬಹುದೆನ್ನಲಾಗಿದೆ. ಕಾಂಗೂಲ ಹಸ್ತದ ಬೆರಳುಗಳನ್ನು ಬಿಡಿಸುತ್ತಾ ಹೋಗುವುದು ಮಘಾ ನಕ್ಷತ್ರವನ್ನು ತೋರಿಸುತ್ತದೆ. ಆಮ್ಲರುಚಿಯನ್ನು ಹೇಳಲು ಮೇಲೆತ್ತಿದ ಕಾಂಗೂಲ ಹಸ್ತಗಳನ್ನು ಬಳಸಲಾಗುತ್ತದೆ. ಚಾತಕಪಕ್ಷಿಯನ್ನು ಕಾಂಗೂಲಹಸ್ತವನ್ನು ಅಲ್ಲಾಡಿಸುವುದರಿಂದ ಸಂವಹಿಸಬಹುದು.

ಕಾಂಗೂಲದ ಕಿರು ಬೆರಳನ್ನು ಒಳಬಗ್ಗಿಸುವುದರಿಂದ ಅರ್ಧ-ಮುಕುಳಹಸ್ತ ಎಂಬ ಹಸ್ತವೇರ್ಪಡುತ್ತದೆ ಎನ್ನಲಾಗಿದೆ. ಈ ಅರ್ಧಮುಕುಳ ಹಸ್ತದ ಲಕ್ಷಣದ ಕುರಿತು ವಿವಿಧ ಅಭಿಪ್ರಾಯಗಳೂ ಇವೆ. ಕಥಕಳಿಯಲ್ಲಿ ಕಾಂಗೂಲಹಸ್ತವನ್ನು ಮದ್ಯದ ಪಾತ್ರೆಯೆನ್ನುವುದಕ್ಕೆ ಬಳಸುತ್ತಾರೆ.

ಸಾಮಾನ್ಯ ಜೀವನದಲ್ಲಿ ಈ ಹಸ್ತವನ್ನು ಬಳಕೆ ಮಾಡುವುದು ತೀರಾ ಕಡಿಮೆ. ಆದರೂ ಕೊಕ್ಕು, ಕವುಚಿ ಬೀಳುವುದು, ಚೆಂಡು ಎನ್ನಲು, ಊಟ ಮಾಡುವಲ್ಲಿ ಇದರ ರೂಪಾಂತರವು ಕಂಡುಬರುತ್ತದೆ.

* ( ಇಂತಹ ಸಾವಿರಾರು ಹಸ್ತ-ಮುದ್ರೆಗಳ ವಿಭಿನ್ನ ಆಯಾಮಗಳು ‘ ಮುದ್ರಾರ್ಣವ’ ಕೃತಿಯಲ್ಲಿ ಸಂಶೋಧನಾ ಸಹಿತ ಲಭ್ಯವಿದೆ.)

Leave a Reply

*

code