ಅಂಕಣಗಳು

Subscribe


 

ಪ್ರಳಯ ತಾಂಡವ

Posted On: Wednesday, April 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ವಿ.ಸೀತಾರಾಮಯ್ಯ

ನಾಟ್ಯದ ಅಧಿದೇವನಾದ ನಟರಾಜ ವಿವಿಧ ಕಾಲಘಟ್ಟಗಳಲ್ಲಿ ಏಳು ತಾಂಡವಗಳನ್ನು ಮಾಡಿದನೆಂಬ ಪ್ರತೀತಿಯಿದೆ. ಅದರಲ್ಲಿ ಕೊನೆಯದೇ ಪ್ರಳಯ ತಾಂಡವ ಅಥವಾ ಸಂಹಾರ ತಾಂಡವ. ಸರ್ವಸಂಹಾರ ಕಾಲದಲ್ಲಿ ಬ್ರಹ್ಮಾಂಡಕಾಂಡ ವಿಸ್ಫೋಟದ ಸಂದರ್ಭದಲ್ಲಿ ಆಡಿದ ತಾಂಡವವೇ ಇದು. ಈ ಪ್ರಳಯ ತಾಂಡವದ ಲೀಲಾ ಪ್ರಸಂಗವನ್ನು ತಮ್ಮ ಕಲ್ಪನೆಯಲ್ಲಿ ಹಿರಿಯ ಕವಿ ವಿ.ಸೀತಾರಾಮಯ್ಯ ಅವರು ಕಂಡುಕೊಂಡದ್ದು ಹೀಗೆ.. ಅವರ ‘ಗೀತಗಳು’ ಕವನ ಸಂಕಲನದಿಂದ ಅರಿಸಲಾದ ಪ್ರಳಯ ತಾಂಡವ ಇದೋ ನಿಮ್ಮ ಲಲಿತ ಲಹರಿಯಲ್ಲಿ.

ಭೈರವ ಲೀಲಾ ಪ್ರಸಂಗವಿದು !

ಪ್ರಳಯದಬ್ಬರದೊಳಪ್ಪಳಿಪ ಭಂಗ ತರಂಗ !

ಝಣಝಣರೆಂದು ಕುಣಿವ ಕಾಲ್ ಕಿಂ
ಕಿಣಿಗಳ ಘನ ನಿನದ ! ಇಳಿದುಯ್ಯಲಾಡುವ
ಫಣಿ ಗಡಣಗಳ ಸೀಳುಸಿರಾವರಣ !

ಆಣುಬಿಡದೆಲ್ಲ ಲೋಕಗಳಂತ್ಯದಂತಕನ ನರ್ತನದಂದ !
ಸೃಷ್ಟಿಯ ನಿಮಿರೊಳು ಹುಟ್ಟಿ ಚಂದದೊಳಿದ್ದ !
ದಿಟ್ಟ ಜೀವಿಗಳ ಭಂಗದ ಬರಿಯಂತರಂಗ !
ಕಟ್ಟಕಡೆಯ ಹೊಂದನೀಕ್ಷಿಸುತಲಿ ತಾ !
ನಟ್ಟ ನಡುವಿನೊಳಡಿಯಿಟ್ಟು ಆಡುವ ತಾಂಡವದಾನಂದ !

ಗಗನದಿ ಸೂರ್ಯ ತಾರೆಗಳಿಲ್ಲ !
ಗಗನ ಭೂಮಿಗಳೆ ತಾವ್ ಮೊದಲಿಲ್ಲ !
ಹಗರಣ ಸಂತಸಗಳ ಸುಳಿವಿಲ್ಲ !

ಬಗೆ ಭಾವಗಳ ಮೇರೆಯ ಮೀರಿ ತೋರುವೀ ಉನ್ಮಾದದಾನಂದ !

ಕೊನೆಮೊದಲಿಲ್ಲವು ತಮತೆಂದು ಮೆರೆದಿರ್ದ
ಅನಿಮಿಷರ್ಗುಳಿವಾಶ್ರಯಗಳಿಲ್ಲ !

ಅನವರತವು ಹರಿವವಸರ ರೋರುವ ಕಲಿಕಾಲನಿಗೂ ಬದುಕಿಲ್ಲ !
ಅನಲ ಮಾರುತರಳಿವಿನೊಳು ಒಡ್ಡಿದ ಭಾವದೊಳಾಳುವ ಆನಂದ !
ವಿಶ್ವವ ಹೊರೆಯುವ ಚಿಂತೆಯ ತೊರೆದು,
ಸುಸ್ಮಿತ ವದನದೊಳೆಲ್ಲವನಗಿದು,
ಸುಸ್ವರ ಲಯ ತಾನಗಳನುವಿಡಿದು
ಭಸ್ಮ ಲೇಪದ ಮೈಸಿರಿಯನು ಬೆಳಗುವ ಅಚ್ಚರಿಯಾನಂದ !

Leave a Reply

*

code