ಅಂಕಣಗಳು

Subscribe


 

ನೃತ್ತಹಾಸಿನಿ

Posted On: Monday, February 16th, 2009
1 Star2 Stars3 Stars4 Stars5 Stars (No Ratings Yet)
Loading...

Author: ಡಿ.ವಿ.ಜಿ. ಲಲಿತ ಲಹರಿ

ನೃತ್ತಹಾಸಿನೀ-ಮತ್ತಕಾಶಿನೀ |
ಚಿತ್ತಜ್ಯೋತ್ಸವ-ಪ್ರತ್ಯವೇಕ್ಷಿಣೀ ||

ರನ್ನದಿಂಬಿನಾ-ಕೆನ್ನೆಗೆಂಪನು |
ಹೊನ್ನಿನೆಸಕದಾ-ನುಣ್ಣಮೆಯ್ಯನು ||
ಕನ್ನೆ ನನ್ನಿಯಾ-ಕಣ್ಣ ಸನ್ನೆಯಂ |
ಬಲ್ಲನೇನವಂ- ಚೆನ್ನಕೇಶವಂ ||

ಕನ್ಯಕಾಮಿಣೀ-ಪುಣ್ಯಕಾಮಿನೀ |
ಸ್ವರ್ಣಕಿಂಕಿಣೀ- ಶಿಂಜಿತಸ್ವನೀ ||
ಪೂರ್ಣಸುಖಮಯಂ- ತೂರ್ಣಕರುಣೆಯಿಂ |
ನಿನ್ನ ವರಿಸುವಂ-ಚೆನ್ನಕೇಶವಂ ||
(ಅನ್ತಃಪುರ ಗೀತೆಗಳು)

Leave a Reply

*

code