ಅಂಕಣಗಳು

Subscribe


 

ಮೇಘವರ್ಷಿಣಿ

Posted On: Wednesday, June 14th, 2017
1 Star2 Stars3 Stars4 Stars5 Stars (No Ratings Yet)
Loading...

Author: ಮಹೇಶ ಭಟ್ಟ ಆರ್. ಹಾರ್ಯಾಡಿ.

ರಾಗ-ಅಮೃತವರ್ಷಿಣಿ

ಏಹಿ ಜಲಧರ ಏಹಿ ಜಲಧರ

ನೀರಧಾರಾಂ ವರ್ಷಯ

ಗ್ರೀಷ್ಮಕಾಲಿಕತಾಪಜನಿತಾಂ

ವೇದನಾಂ ದೂರೀಕುರು ||

ಮಾರ್ಗಗಮನಾಯಾಸಖೇದಂ

ಬರ್ಹಚಾಮರವೀಜನೈಃ

ನೋದಯಂತೋ ಮೋದಯಂತೇ

ಕೇಕಿನಃ ಸಕಲೇ ಗಿರೌ ||

ತ್ವಯಿ ವಿಮುಂಚತಿ ವಾರಿಬಿಂದೂನ್

ಮಲ್ಲಿಕಾಕುಸುಮೋಪಮಾನ್

ಊರ್ಧ್ವವದನಂ ಬಾಲವೃಂದಂ

ನರ್ತನಂ ಕುರುತೇ ಮುದಾ ||

ರುಚಿರಚಪಲಾದೀಪಿಕಾಯುತ-

ಗಗನನರ್ತನಮಂಡಪೇ

ಅನುಸರನ್ ಗರ್ಜಿತಮೃದಂಗಂ

ತ್ವಮಪಿ ನೃತ್ಯ ಪದೇ ಪದೇ ||

ತಾತ್ಪರ್ಯ : ಮೋಡವೇ, ಬಾ ; ಮೋಡವೇ ಬಾ.

ನೀರಿನ ಧಾರೆಯನ್ನು ಸುರಿಸು.

ಬೇಸಿಗೆಗಾಲದ ಉರಿಯಿಂದ ಉಂಟಾದ ಬಳಲಿಕೆಯನ್ನು ದೂರಮಾಡು.

ಎಲ್ಲ ಬೆಟ್ಟಗಳಲ್ಲೂ ನವಿಲುಗಳು ತಮ್ಮ ಗರಿಗಳೆನ್ನುವ ಚಾಮರವನ್ನು ಬೀಸುವ ಮೂಲಕ ನಿನಗೆ ದಾರಿಯಲ್ಲಿ ತಿರುಗಾಡಿ ಉಂಟಾದ ಆಯಾಸವನ್ನು ನೀಗಿಸುತ್ತಾ , ನಿನ್ನನ್ನು ಸಂತೋಷಪಡಿಸುತ್ತವೆ.

ನೀನು ಮಲ್ಲಿಗೆಯ ಹೂವಿನಂತಿರುವ ನೀರಿನ ಹನಿಗಳನ್ನು ಸುರಿಸುವಾಗ ಮಕ್ಕಳೆಲ್ಲರೂ ಮುಖವನ್ನು ಮೇಲೆ ಮಾಡಿ ಅಂದರೆ ಮುಖವನ್ನು ಮಳೆಗೊಡ್ಡುತ್ತಾ ಸಂತಸದಿಂದ ಕುಣಿಯುತ್ತಾರೆ.

ಆಗ ನೀನೂ ಕೂಡ ಮನೋಹರವಾದ ಮಿಂಚೆನ್ನುವ ದೀಪಗಳಿಂದ ಕೂಡಿದ ಆಕಾಶವೆನ್ನುವ ರಂಗಸ್ಥಳದಲ್ಲಿ ಗುಡುಗೆನ್ನುವ ಮೃದಂಗವನ್ನು ಅನುಸರಿಸುತ್ತಾ ಹೆಜ್ಜೆ ಹೆಜ್ಜೆಗೆ/ಮತ್ತೆ ಮತ್ತೆ ನರ್ತನವನ್ನು ಮಾಡು.

 

Leave a Reply

*

code