ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು (ಭಾಗ ೯)

Posted On: Tuesday, February 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ಮ್ಮ ಮನಸ್ಸಿನಲ್ಲೆದ್ದ ಸಾಮಾಜಿಕ ಬದಲಾವಣೆಗಳು ಕಲೆಯ ಸಾಮ್ರಾಜ್ಯದಲ್ಲಿ ಬದಲಾವಣೆ ಹೊಂದಿದ್ದಾವೆ. ಕಳೆದ ೫೦ ವರ್ಷಗಳಲ್ಲಿ ಭರತನಾಟ್ಯದ ಮೇಲೆ ಬೆಳಕು ಚೆಲ್ಲುವವರು ಇಂದು ಕಾಣೆಯಾಗಿದ್ದಾರೆ. ಹಿಂದಿನ ನಟ್ಟುವನ್ನಾರುಗಳೂ, ಅಂದಿನ ಭರತನಾಟ್ಯದ ಕುಲಾಚಾರರೂ ಇಂದಿಲ್ಲ. ಅವುಗಳ ಜಾಗವನ್ನು ತುಂಬಲು ಇಂದು ಅಲ್ಲಿ ಇಲ್ಲಿ ಕಲಾಕ್ಷೇತ್ರಕ್ಕೆ ಸಮಾನವಾದ ಸಂಸ್ಥೆಗಳು ಹುಟ್ಟಿಕೊಂಡಿವೆ.

ಬದಲಾದ ಈ ಕಾಲದಲ್ಲಿಯೇ ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾದ ಮಂದಿ ಮುಂದೆ ಬಂದಿದ್ದಾರೆ. ಹೊಸಮಾರ್ಗ ದರ್ಶನವೂ ಇದೆ. ಅವರು ತಿಳಿದುಕೊಂಡಿರುವುದು ಅಪಾರ ಹಾಗೂ ಸಮೃದ್ಧ ಎಂಬ ನಂಬಿಕೆ ಬಹಳ ಜನರದ್ದು ! ಇಂತಹ ಹೊಸಬರು ಆಗಾಗ ಬದಲಾಯಿಸುವ ಗುಣ ಭರತನಾಟ್ಯಕ್ಕೆ ಬಂದಿರುವುದನ್ನು ನೋಡಿದ್ದಾರೆ. ಅಲ್ಲಿ ನಡೆಯಬೇಕಾಗಿದ್ದ ವಿವಿಧ ರೀತಿಯ ಅಲೋಚನೆ, ಅದಕ್ಕೆ ಪೂರಕವಾಗಿ ಸಾಂಸ್ಕೃತಿಕ ಹೆಚ್ಚು ಕಡಿಮೆಗಳು ಹಾಗೂ ತಾವು ಕಂಡಂತೆ ಈಗಿನ ಬದಲಾವಣೆಗಳೆಲ್ಲಾ ಒಟ್ಟುಸೇರಿ ಭರತನಾಟ್ಯದ ಒಳಗಿನ ಭಾವನೆಗಳನ್ನು ಮೆಟ್ಟಿ ನಿಲ್ಲುತ್ತದೆ.

ಮಾನುಷ ಪ್ರಕೃತಿಗೆ ಸಂಬಂಧಿಸಿದ ವಸ್ತು ಲೋಕದ ಹಲ ರೀತಿಯ ಕ್ರಮಗಳಿಗೆ ಸಂಬಂಧಿಸಿದುದು. ನಾಟ್ಯಶಾಸ್ತ್ರದಲ್ಲಿ ಇದನ್ನೇ ಹೇಳಿದೆ. ಅದರ ಕುರಿತು ಯೋಚನೆಗಳು ಬರುತ್ತಿರುತ್ತವೆ. ಯೋಗ್ಯ ಶಾಸ್ತ್ರ ಅಥವಾ ಯುದ್ಧೋನ್ಮುಖವಾದ ಹಲವು ಪರಿಚ್ಛೇದಗಳಿವೆ. ಇದರಲ್ಲಿರುವ ಕೆಲವು ವಿಷಯಗಳ ವಿವೇಚನೆಯಿಂದ ನಾಟ್ಯಕ್ಕೆ ಹೊಸ ರೂಪ ಕೊಡುವುದು ಸಾಧ್ಯವಿಲ್ಲವೇ? ಈಗೀಗ ಕೆಲವು ನರ್ತಕರು ತಮ್ಮ ಯೋಚನೆಗಳನ್ನು ನಾಟ್ಯರಂಗದಲ್ಲಿ ತರಲು ಯೋಚಿಸಿದ್ದುಂಟು. ಇತರ ರೀತಿಯ ಕಲೆಗಳು ಬಾಂಧವ್ಯ ಪಡೆದು ಅದಕ್ಕೆ ಸರಿಯಾದ ಸಂಗೀತವನ್ನು ಪ್ರಯೋಗಿಸಿದದ್ದೂ ಇದೆ. ಈ ರೀತಿಯ ಬದಲಾವಣೆಗಳು ಈ ನಾಟ್ಯಕಲೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬಲ್ಲುದು.

ಭರತನಾಟ್ಯದಂತಹ ಕ್ರೋಢಿಕರಿಸಿದ ವಿದ್ಯೆ, ಸೃಷ್ಟ್ಯಾತ್ಮಕ ಕಲಾವಿದರಿಗೆ ಹಲವು ಅಧಿಕಾರವನ್ನು ನೀಡಿದೆ. ತಮ್ಮ ವಿದ್ಯೆಯಲ್ಲಿ ಬೇಕಾದಷ್ಟೂ ಪ್ರಯೋಗ ಪರೀಕ್ಷೆಯನ್ನು, ನವೀನತೆಯ ಕಲ್ಪನೆಯನ್ನೂ ಇತ್ತಿದೆ. ನಮ್ಮ ದೃಷ್ಟಿಗೆ ಅಂತಹ ಸಾಧನಾಕಾರ್ಯ ಕೆಲಬಾರಿ ಉತ್ತಮ ನಾಟ್ಯಾಂಶಗಳನ್ನು ಕೊಟ್ಟಿದುದೂ ಇದೆ. ಕೆಲವರಂತೂ ಕಳೆದುದನ್ನು ಮರೆತಾಗಲಿ ಅಥವಾ ಪ್ರಯೋಗಗಳನ್ನು ದೂರೀಕರಿಸಿದ್ದಾಗಲೀ ಇಲ್ಲ. ಬದಲಾಗಿ ಇರುವ ಸಂಪ್ರದಾಯದಲ್ಲಿ ಹೊಸದನ್ನು ಕಾಣಿಸುವ ಹದದಲ್ಲಿದ್ದಾರೆ.

ನಾವು ಹೊಸಶಕೆಯ ಆರಂಭದಲ್ಲಿದ್ದಂತೆ ತೋರುತ್ತಿದೆ. ಭರತನಾಟ್ಯದಲ್ಲಿ ಇರುವ ಸನ್ನಿವೇಶಗಳಲ್ಲದೆ ಬೇರಿತರ ರೀತಿಯಲ್ಲಿ ಕಲಾವಿದನು ಸಮಾಜಿಕರ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗುತ್ತಾನೆ. ಎಲ್ಲೆಲ್ಲೂ ನಮ್ಮ ಕಣ್ಣಿಗೆ ವಿರುದ್ಧ ದಿಕ್ಕಿನಲ್ಲಿ ಹರಿವುದು, ಕೆಲವೊಮ್ಮೆ ಅನುಕೂಲಸ್ಥಿತಿಗೂ ಬರುವಂತಹ ಕಾಲವಿದು. ಕೆಲಬಾರಿ ಕಾಣಿಸುವ ಹೀನಪ್ರದರ್ಶನಗಳು, ಅಪರೂಪವಾಗಿ ಪ್ರದರ್ಶಿಸುವ ಉತ್ತಮ ಸಾಹಸಕ್ರಿಯೆಗಳು ಮತ್ತು ಅರ್ಥದ ಪ್ರಶ್ನೆಗಳೂ ಇವೆ.

ಜನರಲ್ಲಿ ಹೊಸಪ್ರಪಂಚವನ್ನು ಕಾಣುವ ಲವಲವಿಕೆ ಇದೆ. ಹೀಗಾಗಿ ಹಿಂದಿನ ಶುದ್ಧತೆಯನ್ನು ಮರೆಯಬೇಕಾಗಿದೆ.

ಭರತನಾಟ್ಯದಲ್ಲಿ ಇರುವ ಮಾರ್ಗ ಪದ್ಧತಿಯನ್ನು ಫಕ್ಕನೆ ಬದಲಾಯಿಸುವುದು ಸಾಧ್ಯವೇ? ಆ ಮಾರ್ಗವನ್ನು ಕಂಡುಹಿಡಿದ ಹಿರಿಯರ ಬುದ್ದಿವಂತಿಕೆಯನ್ನು ಹೊಗಳದೇ ಇರಲು ಸಾಧ್ಯವಿಲ್ಲ. ಈಗ ಅವುಗಳನ್ನು ಬದಲಾಯಿಸುವ ಪ್ರಮೇಯ ಬಂದರೆ ಹಿಂದಿನವರಿಗಿಂತ ನಾವೆಷ್ಟೋ ಮುಂದಿರಬೇಕಲ್ಲವೇ? ಹಾಗಿದ್ದೇವೆಯೇ?

ನಮ್ಮಿದಿರಿಗೆ ಒಂದು ಪ್ರಶ್ನೆ ಬಂದು ನಿಂತಿದೆ- ನಾವು ಏನನ್ನು ಬದಲಾಯಿಸಬೇಕು? ಹಳೆಯ ಕಾಲದ್ದೇ ಅಥವಾ ನಮ್ಮ ಹೊಸ ಬದುಕಿನ ಆಯಾಮವನ್ನೇ? ಆದರೆ ಈ ಹಿಂದೆ ಅಥವಾ ಮುಂದು ಎಂಬುದು ಹೆಚ್ಚು ದೂರದಲ್ಲಿಲ್ಲ. ಅವುಗಳಲ್ಲಿ ಒಂದು ತರದ ಸಾಮರಸ್ಯ ಅಥವಾ ಸಂಬಂಧ ಇರಲೇಬೇಕು. ಈಗ ನಾವು ಮಾಡಿರುವ ಬದಲಾವಣೆ ಹಿಂದಿನದ್ದನ್ನು. ಇಂದು ಮುಂದಿನದು ಎನ್ನುವುದಕ್ಕೆ ನಾವೇನು ಹೊಸದನ್ನು ಮಾಡಿದ್ದೇವೆ? ಭವಿಷ್ಯತ್ತಿಗೆ ನಾವೇನನ್ನು ಮಾಡಿ ತೋರಿಸಿದ್ದೇವೆ? ನಾವೀಗ ಬದಲಾವಣೆ ಮಾಡಿದುದು ಮುಂದಿನವರಿಗೆ ಆ ಮಾರ್ಗಇನ್ನೂ ಸುಲಭವಾಗಲಿ ಎಂದಲ್ಲವೇ?

ಏನಿದ್ದರೂ ಇದೊಂದು ತರದ ಯುದ್ಧ ತಯಾರಿಯೇ ! ಆದರೆ ಇದಕ್ಕೂ ನಮ್ಮ ಎದೆ ಸ್ವಲ್ಪ ಗಟ್ಟಿಯಾಗಿರಬೇಕು.

ವಿಷಯ ಚರ್ಚಾಸ್ಪದ.

(ಮುಗಿಯಿತು.)

Leave a Reply

*

code