ಅಂಕಣಗಳು

Subscribe


 

ನೂಫುರ ಭ್ಹ್ರಮರಿ ಪತ್ರಿಕೆ ಪ್ರಯೋಗಶೀಲ

Posted On: Monday, October 15th, 2007
1 Star2 Stars3 Stars4 Stars5 Stars (No Ratings Yet)
Loading...

Author: Multiple authors

ಸಂಚಿಕೆ ೨- ಸಂಪುಟ-೧

*ನೀವು ನೂಪುರ ಭ್ರಮರಿ ಎಂಬ ಸಾಂಸ್ಕೃತಿಕ ದ್ವೈಮಾಸಿಕವೊಂದನ್ನು
ತಂದಿರುವುದು ತುಂಬಾ ಸಂತಸ ತಂದಿದೆ. ಸಾಂಸ್ಕೃತಿಕ ವಿಭಾಗದ ಪತ್ರಿಕೆಯೊಂದನ್ನು
ನಡೆಸಲು ಹೊರಟಿರುವ ನಿಮ್ಮ ಸಾಹಸವು ಅಭಿನಂದನೀಯವಾದುದು. ನಿಮಗೆ ಭಗವಂತನು
ಎಲ್ಲ ರೀತಿಯ ಯಶಸ್ಸು ಕರುಣಿಸಲೆಂದು ಹಾರೈಸುತ್ತೇನೆ.
ಪತ್ರಿಕಾರಂಗವೇ ವೈಶಿಷ್ಟ್ಯಪೂರ್ಣ ಅನುಭವ ನೀಡುವಂತಹ ಸವಾಲಿನ ವಿಷಯ.
ಅದು ನಮ್ಮ ಅಂತರಂಗದ ಶಕ್ತಿಯನ್ನು ಮತ್ತು ಸಂವೇದನಾಶೀಲತೆಯನ್ನು ಪ್ರಶ್ನಿಸುವಂತಿರುತ್ತದೆ.
ಸಾಮಾನ್ಯ ಪತ್ರಿಕೆಯೊಂದನ್ನು ನಡೆಸುವುದೇ ಹರಸಾಹಸದ ವಿಷಯ. ಅಂತಹುದಲ್ಲಿ ನಿಮ್ಮ
ಪ್ರಯತ್ನವನ್ನು ಮೆಚ್ಚಲೇಬೇಕು. ಆದರೆ ಒಂದು ಮಾತು; ಮನುಷ್ಯನ ಪ್ರಯತ್ನ, ಸಾಧನೆ
ನಿಸ್ವಾರ್ಥವಾಗಿದ್ದಲ್ಲಿ ಫಲ ಸಿಗುತ್ತದೆಂಬ ನಂಬಿಕೆ ನಮ್ಮದು. ಲೇಖನಗಳು ಉತ್ತಮವಾಗಿ
ಮೂಡಿ ಬಂದಿವೆ.ನಿಮ್ಮ ಪ್ರಯತ್ನವು ಯಶಸ್ವಿಯಾಗಲೆಂದು ಹಾರೈಸುತ್ತೇನೆ.
-ಪ್ರೊ.ಎಸ್.ಪ್ರಭಾಕರ್
ಸಂಪಾದಕರು
ಮಂಜುವಾಣಿ ಮಾಸಪತ್ರಿಕೆ
ಧರ್ಮಸ್ಥಳ.

*…ವಿಶಾಲ ಕಲಾ ಪ್ರಕಾರದ ಬಗ್ಗೆ ಈ ತರಹದ ಒಂದು ಸಂಚಿಕೆ ಹೊರ
ಬರುತ್ತಿರುವುದೇ ಒಂದು ಸಂತಸದ ಸಂಗತಿ. ನೃತ್ಯದ ಮೇಲೆ ಪ್ರೀತಿಯಿರುವವರಿಗೆಲ್ಲಾ
ಇದು ಉಪಯುಕ್ತವಾಗಬಲ್ಲದು. ನೃತ್ಯ ತಿಳಿಯದವನಿಗೂ ಹೊಸ ಲೋಕದ
ಪರಿಚಯವಾಗುತ್ತದೆ, ನಿಮ್ಮ ಈ ಪ್ರಯತ್ನ ಯಶಸ್ವಿಯಾಗಲಿ. (‘ಬರಹ’ ೭.೦ ಬಳಸಿ. ಈಗಿನ
ಸಂಚಿಕೆಯಲ್ಲಿ ಹಳೆಯ ಸಾಫ್ಟ್‌ವೇರ್ ಬಳಸಿರುವುದರಿಂದ ‘ಯ’ ಕಾರ ತಪ್ಪಾಗಿ ಬಂದಿದೆ.)
ವಂದನೆಗಳು.

-ವಸುಧೇಂದ್ರ . ಎಸ್, ಕಥೆಗಾರರು,
ಬೆಂಗಳೂರು.

*ಪತ್ರಿಕೆ ಪ್ರಯೋಗಶೀಲವಾಗಿದೆ, ಮಾಹಿತಿ ಪೂರ್ಣವಾಗಿದೆ. ನಿಮ್ಮ ಪ್ರಯತ್ನ
ಯಶಸ್ವಿಯಾಗಲಿ ಅಭಿನಂದನೆಗಳು.
ನೀವು ಅಪೇಕ್ಷಿಸಿದಂತೆ ಒಂದೆರಡು ಸಲಹೆಗಳು:
೧. ಖಾಸಗಿ ಪ್ರಸಾರಕ್ಕೆ ಇಪ್ಪತ್ತು ಪುಟ ಸ್ವಲ್ಪ ಭಾರವಾಗದೇ? ಇದನ್ನೇ ಮುಂದಕ್ಕೂ
ತಾಳಿಕೊಳ್ಳುವ ಶಕ್ತಿಯಿದ್ದರೆ ಸರಿ.
೨. ರಾಷ್ಟ್ರ-ಅಂತಾರಾಷ್ಟ್ರ ಮಟ್ಟದ ಕಲಾವಿದರನ್ನು ಮೊದಲು ಪರಿಚಯಿಸಿ,
ಅವರಿಂದ ಕಲಿಯುವುದು ಬಹಳಷ್ಟಿರುತ್ತದೆ.
೩. ಕನ್ನಡ-ಆಂಗ್ಲ ದಿನಪತ್ರಿಕೆಗಳಲ್ಲಿ ಕೆಲವು ಒಳ್ಳೆಯ ನೃತ್ಯ ವಿಮರ್ಶೆ-ವಿಚಾರಗಳು
ಪ್ರಕಟವಾಗುತ್ತವೆ. ಅದನ್ನು ಪುನರ್ ಮುದ್ರಿಸಬಹುದು. (ಖಾಸಗಿ ಪ್ರಸಾರವಾದ್ದರಿಂದ
ಅನುಮತಿ ಬೇಕಾಗಲಾರದು).
೪. ಲೇಖಕರ ಸಂಕ್ಷಿಪ್ತ ಪರಿಚಯವಿರಲಿ. ಆಗ ಲೇಖನಕ್ಕೆ ತೂಕ ಹೆಚ್ಚಾಗುತ್ತದೆ.
೫. ಪ್ರತಿಕ್ರಿಯೆಗಳಿಗೆ ಜಾಗವಿರಲಿ.
ಶುಭಾಷಯಗಳೊಂದಿಗೆ,

-ಬಾಲಸುಬ್ರಹ್ಮಣ್ಯ ಕಂಜರ್ಪಣೆ
ನ್ಯಾಯವಾದಿಗಳು ಮತ್ತು ಬರಹಗಾರರು
ಮಡಿಕೇರಿ.

*ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಪತ್ರಿಕೆಗಳಿದ್ದರೂ ಕಲಾ
ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಪತ್ರಿಕೆಗಳು ವಿರಳ. ಅಂತಹುದರಲ್ಲಿ ಭರತನಾಟ್ಯ ಕಲೆಗೇ
ಮೀಸಲಾಗಿ ‘ನೂಪುರ ಭ್ರಮರಿ’ ಪತ್ರಿಕೆಯು ಆರಂಭಗೊಂಡಿರುವುದು ಕಲಾ ಪ್ರೇಮಿಗಳಿಗೆ
ಸಂತಸ ತರುವ ವಿಚಾರವಾಗಿದೆ.
ಪುಟ್ಟದಾಗಿ ರೂಪುಗೊಂಡಿರುವ ದ್ವೈಮಾಸಿಕ ಪತ್ರಿಕೆಯ ಮೊದಲ ಸಂಚಿಕೆಯಲ್ಲಿಯೇ
ನಾಟ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಮಾಹಿತಿಗಳನ್ನು ನೀಡಿರುವುದು ಸ್ವಾಗತಾರ್ಹ.
ನಾಟ್ಯದಲ್ಲಿ ಅಲರಿಪುವಿನ ಪರಿಚಯ, ರಂಗಪ್ರವೇಶ(ಅರಂಗೇಟ್ರಂ)ದ ಅಗತ್ಯತೆ ಅಥವಾ
ಮಹತ್ವ, ನರ್ತನ ಪ್ರಕಾರಗಳಲ್ಲಿ ಹಸ್ತಗಳು ಮೊದಲಾದ ವಿಚಾರಗಳು ನಾಟ್ಯದ
ಬಗ್ಗೆ ಹೊಸದಾಗಿ ತಿಳಿದುಕೊಳ್ಳುವವರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸಿದಂತಾಗಿದೆ.
ಜೊತೆಗೆ ದರ್ಶನ ಭ್ರಮರಿಯಲ್ಲಿ ತಿಂಗಳ ಅತಿಥಿಯಾಗಿ ಕಲಾವಿದೆ, ವಿದುಷಿ ರೂಪಾ
ಉಪಾಧ್ಯ ಇವರ ಸಂದರ್ಶನ ಉತ್ತಮವಾಗಿ ಮೂಡಿಬಂದಿದೆ.
ನಾಟ್ಯಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದು ಇರಬೇಕಿತ್ತು ಎಂದು
ಭಾವಿಸುತ್ತಿದ್ದ ನನಗೆ, ನಿಮ್ಮ ಈ ಪ್ರಯತ್ನ ಖುಷಿ ನೀಡಿದೆ. ಈ ಪತ್ರಿಕೆ ಭರತನಾಟ್ಯವನ್ನು
ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಪ್ರತಿ ಸಂಚಿಕೆಯಲ್ಲೂ
ಗಣ್ಯ ಕಲಾವಿದರ ಪರಿಚಯ-ಯಾ-ಸಂದರ್ಶನ ಮೂಡಿಬರಲಿ. ಸಾಧ್ಯವಾದಲ್ಲಿ ಕೆಲವು
ರೇಖಾ ಚಿತ್ರಗಳೂ ಇರಲಿ. ಸಾಧ್ಯವಾದಲ್ಲಿ ಅಲ್ಲಲ್ಲಿ ಪ್ರದರ್ಶನಗೊಳ್ಳುವ ಭರತನಾಟ್ಯ
ಕಾರ್ಯಕ್ರಮಗಳ ಕುರಿತಾದ ವಿಮರ್ಶನ ವರದಿಗಳಿಗಳೂ ಅವಕಾಶವಿರಲಿ. ಮುಂದಿನ
ಸಂಚಿಕೆಗಳಲ್ಲಿ ನಾಟ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳು ವಿಸ್ತಾರವಾಗಿ
ಮೂಡಿ ಬರಲಿ ಎಂದು ಹಾರೈಸುವೆ.

-ನಿಡುವಜೆ ರಾಮ ಭಟ್, ಬರಹಗಾರರು,
ಗುಂಡಿಬೈಲು,ಉಡುಪಿ.*….ಮೊದಲ ಸಂಚಿಕೆಗೆ ಧನ್ಯವಾದಗಳು,
ನೂಪುರ ಭ್ರಮರಿ ಯಶಸ್ವಿಯಾಗಲೆಂದು
ಹಾರೈಸುತ್ತೇನೆ.

ಬಿ.ಎಸ್.ಎಸ್. ರಾವ್
ಕಲಾವಿಮರ್ಶಕ, ಕಾರ್ಯದರ್ಶಿ
ಎಸ್.ಎಲ್.ಎ ಫ಼ೌಂಡೇಶನ್, ಮೈಸೂರು

*ಪತ್ರಿಕೆಯ ನಿರೂಪಣೆಯಲ್ಲಿ ನಿಮ್ಮ
ಶ್ರಮ ಅಭಿನಂದನೀಯ. ಶುಭವಾಗಲಿ.

-ಶತಾವಧಾನಿ ಡಾ\ ಆರ್. ಗಣೇಶ್
ಬೆಂಗಳೂರು
.

*..ಹೃತ್ಪೂರ್ವಕ ಶುಭಾಷಯಗಳು. ತಮ್ಮ ನೂಪುರ ಭ್ರಮರಿ ಸ್ವಾಗತಾರ್ಹ ಪತ್ರಿಕೆ.
ಬಹಳ ಒಳ್ಳೆಯ ಗುರಿ ಉಳ್ಳ ಪತ್ರಿಕೆ. ಜನಪ್ರಿಯ ಪತ್ರಿಕೆಯಾಗಲಿ..


ನಂದಿನಿ ಈಶ್ವರ್
ರಾಸವೃಂದ
ಮೈಸೂರು.

____________________________________________*******

ಸಂಚಿಕೆ ೪ ಸಂಪುಟ ೧
*…ನೂಪುರ ಭ್ರಮರಿಗೆ ಅಭಿನಂದನೆಗಳು. ಮಂಜುನಾಥ ಸ್ವಾಮಿಯ
ಅನುಗ್ರಹವಿರಲಿ.


-ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿಗಳು
ಧರ್ಮಸ್ಥಳ

 
*…ಪ್ರಯತ್ನ, ಪರಿಣತಿ, ವಿಷಯ ಜ್ಞಾನ, ಸಾಧನೆಯ ಛಲ ಇವುಗಳನ್ನೆಲ್ಲಾ
ಪ್ರತಿಫಲಿಸುತ್ತಿರುವ ನೂಪುರ ಭ್ರಮರಿ, ಅಮೂಲ್ಯ ಪತ್ರಿಕೆಯಾಗುವ ಎಲ್ಲಾ
ಲಕ್ಷಣಗಳನ್ನು ತನ್ನೊಡಲಲ್ಲಿ ಕಾಪಿಟ್ಟು ಕಾವು ಕೊಡುವ ಪ್ರಯತ್ನದಲ್ಲಿದೆ.
ನೃತ್ಯದಲ್ಲಿ ಯಾವುದೇ ಅಂಶದಲ್ಲಿ ಪರಿಣತಿ ಹೊಂದಿಲ್ಲದವರಿಗೂ ‘ಭ್ರಮರಿ’ಅವರ
ಅರಿವಿನ ಕ್ಷಿತಿಜವನ್ನು ವಿಸ್ತರಿಸುತ್ತದೆ ಎಂಬುದೇ ಸಂತೋಷ.
ಸರಳ ವಿಷಯಗಳಾದ ರಂಗಪ್ರವೇಶ, ಭರತನಾಟ್ಯದ ಪ್ರಾಚೀನತೆ,
ಹುಟ್ಟುಗಳಂತಹ ಸಂಗತಿಗಳ ಬಗೆಗಿನ ಪ್ರಾಜ್ಞರ ಮಾತುಗಳು ಆ ಕ್ಷೇತ್ರದ ಬಗೆಗೆ
ಕುತೂಹಲ ಮೂಡಿಸುತ್ತಿವೆ. ಅದಕ್ಕಾಗಿ ನೂಪುರ ಭ್ರಮರಿಯನ್ನು ಸಂಪೂರ್ಣ
ಪ್ರೀತಿಯಿಂದ ಓದುತ್ತಿದ್ದೇನೆ.
ಜನಸಾಮಾನ್ಯರಿಗೂ ನೃತ್ಯವನ್ನು ಒಯ್ದು ತಲುಪಿಸಬೇಕೆಂಬ ಹಂಬಲದ
ಈ ಪ್ರಯತ್ನಕ್ಕೆ ಶುಭ ಕೋರುತ್ತಾ, ಪತ್ರಿಕೆಯನ್ನು ಪರಿಚಯಿಸಿದ ಸನ್ಮಿತ್ರರಿಗೂ
ಕೃತಜ್ಞತೆಯನ್ನು ತಿಳಿಸುತ್ತಾ; ರಥ ಎಳೆದಾಗ ಕೈ ಜೋಡಿಸಿದಾತ ರಥವನ್ನು
ಎಳೆಯಲು ಸಾಧ್ಯವಾಗದಿದ್ದರೂ ಎಳೆದಿದ್ದೇನೆ ಎಂಬ ಧನ್ಯತೆಯನ್ನು
ಹೊಂದಬಹುದಾದಂತೆ, ಆಗಾಗ ಬಂದು ಕೈಜೋಡಿಸುತ್ತೇನೆ.

– ಹರೀಶ್ ಟಿ. ಜಿ
ಕನ್ನಡ ಉಪನ್ಯಾಸಕರು
ಆಳ್ವಾಸ್ ಕಾಲೇಜ್, ಮೂಡಬಿದಿರೆ.

* ಸಾಂಪ್ರದಾಯಿಕ ಕಲೆಗೆ ಹೊಸ ಸ್ಪರ್ಶ, ಸಾಂಸ್ಕೃತಿಕ ಕ್ಷೇತ್ರಕ್ಕೆ ನವೀನ
ಆಯಾಮ ಕೊಡುವಲ್ಲಿ ಉತ್ತಮ ಪ್ರಯತ್ನ ನೂಪುರ ಭ್ರಮರಿ. ಮುಂದಿನ
ಸಂಚಿಕೆಗೆ ಉತ್ಸುಕತೆಯಿಂದ ಕಾಯುತ್ತಿದ್ದೇವೆ. ನಮ್ಮ ಸಹಕಾರ ಪತ್ರಿಕೆಗೆ ಸದಾ
ಇರುತ್ತದೆ.


– ದೀಪಕ್‌ರಾಜ್
ಟೆಕ್ನಿಕಲ್ ಸಪೋರ್ಟ್ ರೆಪ್ರೆಸೆಂಟೇಟಿವ್
ದಿವ್ಯಾ ಸಿಸ್ಟಂ, ಮಂಗಳೂರು
.

* ಶುಭಾಶಯಗಳು. ಪತ್ರಿಕೋದ್ಯಮ ಅಧ್ಯಾಪನಾ ಬಳಗದ ಹೊಸ
ಸದಸ್ಯೆಯ ಈ ಪ್ರಯತ್ನ ನಿಜಕ್ಕೂ ಸಂತಸ ; ಜೊತೆಗೆ ಅಚ್ಚರಿ. ಮತ್ತಷ್ಟು
ಅಚ್ಚರಿಯ ಪ್ರಯತ್ನಗಳ ನಿರೀಕ್ಷೆಯಿದೆ.

– ನಿರಂಜನ ವಾನಳ್ಳಿ, ಮುಖ್ಯಸ್ಥರು,
ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

*ನೃತ್ಯಾಭ್ಯಾಸಿಗಳಿಗೆ ಈ ಪತ್ರಿಕೆ ನಿಜಕ್ಕೂ ಉಪಯುಕ್ತ. ಕಲೆಯ ಸೇವೆಗೆ
ಪ್ರಯತ್ನ ಸದಾ ಮುಂದುವರಿಯಲಿ.


-ಕುಬಣೂರು ಶ್ರೀಧರ್ ರಾವ್, ಸಂಪಾದಕರು
`ಯಕ್ಷಪ್ರಭಾ’ – ಯಕ್ಷಗಾನ ಮಾಸಪತ್ರಿಕೆ
ಉಜಿರೆ, ಬೆಳ್ತಂಗಡಿ, ದ.ಕ ‘

* ನೂಪುರ ಭ್ರಮರಿ- ಹೆಸರು ತುಂಬಾ ಹಿಡಿಸಿತು. ವಿನೂತನವಾಗಿದೆ.
ಅರ್ಥಪೂರ್ಣವಾಗಿದೆ..ಉತ್ತಮ ಪ್ರಯತ್ನ. ಜೊತೆಗೆ ನೃತ್ಯ ಕಲೆಯ ಬಗ್ಗೆ ಆಸಕ್ತರಿಗೆ
ವಿವರ ತಿಳಿಸಿಕೊಡುವುದಲ್ಲದೆ, ಅಭಿರುಚಿ ಮೂಡಿಸುತ್ತದೆ. ಶುಭವಾಗಲಿ.
ಪ್ರೋತ್ಸಾಹ ಸದಾ ಇರುತ್ತದೆ.

– ರವಿಕಿರಣ್, ಸೇಲ್ಸ್ ಮ್ಯಾನೇಜರ್
ಇಂಡೋ‌ಏಶ್ಯಾ ಹೋಲಿಡೇ ಕಂಪೆನಿ, ಬೆಂಗಳೂರು.

___________________________________**********

ಸಂಚಿಕೆ ೫ ಸಂಪುಟ ೧

* ಹೊಸ ಹೊಸ ವಿಷಯಗಳನ್ನು ಹೊತ್ತು ತರುತ್ತಿರುವ ಹೊಸತೆನಿಸುವ ನೂಪುರ
ಭ್ರಮರಿ ನೃತ್ಯ ಕ್ಷೇತ್ರದಲ್ಲಿ ಇನ್ನೂ ಉತ್ತಮವಾಗಿ ಬೆಳೆಯಲಿ ಎಂಬುದೇ ಆಶಯ.
ಬಹುಷಃ ನೂಪುರ ಭ್ರಮರಿಯಷ್ಟು ಆಳವಾಗಿ ಭರತನಾಟ್ಯವನ್ನು ವಿಶ್ಲೇಷಿಸುವ,
ಸಾಮಾನ್ಯರಿಗೂ ತಲುಪಿಸುವ, ವೃತ್ತಿಪರವೆಸುವ ಕನ್ನಡ ಪತ್ರಿಕೆ ಬೇರೊಂದಿರಲಿಕ್ಕಿಲ್ಲ.
ಯಾರೂ ಈವರೆಗೆ ಕ್ರಮಿಸದ ಅಪೂರ್ವವಾದ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದೀರಿ.
ಅಭಿನಂದನೆಗಳು.
ಇಂತಹ ಪತ್ರಿಕೆಗಳು ಪಾಶ್ಚಾತ್ಯರಲ್ಲಿ ಸಾಮಾನ್ಯ ಮತ್ತು ಭಾರತದಲ್ಲೂ ವಿಜ್ಞಾನ
ಕ್ಷೇತ್ರದಲ್ಲಿ ಅಲ್ಲಲ್ಲಿ ಕಾಣಬಹುದು. ವಿಜ್ಞಾನ, ಪರಿಸರ, ಕೃಷಿ ಮುಂತಾದವುಗಳಿಗೆ
ಸಂಬಂಧಿಸಿದ ಪತ್ರಿಕೆಗಳು ನಮ್ಮ ಮುಂದಿದ್ದರೂ ಲಲಿತ ಕಲೆ ಅಥವಾ ಸಾಮಾಜಿಕ
ಹಿತಾಸಕ್ತಿಯ ವಿಚಾರಗಳಿಗೆ ಬಂದಾಗ ಅವು ವಿರಳವೇ ಸರಿ. ಆದ್ದರಿಂದ ನೀವು
ಭವಿಷ್ಯದಲ್ಲಿ ಮತ್ತಷ್ಟು ಸಹಕಾರಗಳೊಂದಿಗೆ ಈ ಪ್ರಯತ್ನದಲ್ಲಿ ಮುಂದುವರಿಯುತ್ತಾ
ಹೋಗಬೇಕೆಂಬುದು ನನ್ನ ಆಶಯ.
ಈ ಪತ್ರಿಕೆಯ ನಿರಂತರ ಪ್ರಕಟಣೆಯಿಂದ ನಿಜಕ್ಕೂ ಪೀಳಿಗೆಯನ್ನೇ ಸಂಸ್ಕೃತಿ
ಶಿಕ್ಷಿತಗೊಳಿಸಬಹುದು. ಪತ್ರಿಕೆಯ ಸುಧಾರಣೆಯ ಬಗ್ಗೆ ನಾನು ಗುರುತಿಸಿದ ಕೆಲವು
ವಿಶಯಗಳನ್ನು ಮುಂದಿಡಲು ಬಯಸುತ್ತೇನೆ.
ಸಂಪಾದಕೀಯ ಬರಹ ತುಂಬಾ ಸಕಾಲಿಕ ಮತ್ತು ಸಂವಹನಶೀಲ. ಇಂತಹ
ಸರಳ ನಿರೂಪಣಾತ್ಮಕ ವಿಧಾನವನ್ನೇ ಮುಂದುವರೆಸಿರಿ.
ಪ್ರಸಿದ್ಧ ವ್ಯಕ್ತಿಗಳ ಸಂದರ್ಶನವು ಉತ್ತಮ ಯೋಜನೆ. ಅದನ್ನು ಮತ್ತಷ್ಟು
ಪರಿಪೂರ್ಣಗೊಳಿಸುವುದಾದಲ್ಲಿ ಅವರ ಬಾಲ್ಯ, ಆರಂಭಿಕ ಒಲವು, ಯಶಸ್ಸಿನ
ಹಾದಿ, ಅನನ್ಯ ಸಾಧನೆಗಳನ್ನು ಸೇರಿಸಬಹುದಲ್ಲವೇ?
ಭಾರತೀಯ ನೃತ್ಯ ಪ್ರಕಾರಗಳ ಬಗ್ಗೆ ತಿಳಿವಳಿಕೆ ನೀಡುವ ಲೇಖನವೊಂದನ್ನು
ಪ್ರಕಟಿಸಬಹುದು.
ಮುದ್ರೆಗಳು ಮತ್ತು ಇತರ ಅಂಕಣ ಬರಹಗಳು ಮಾಹಿತಿ, ತಿಳಿವಳಿಕೆಯನ್ನು
ನೀಡುವಂತದ್ದಾಗಿದ್ದು ಮುಂದುವರೆಸಿರಿ.
ಪ್ರಶ್ನೋತ್ತರಗಳಿಗೇ ಪುಟವೊಂದನ್ನು ಮೀಸಲಿಡಬಹುದು ಮತ್ತು ಚಿಂತನೆಗೆ ಹಚ್ಚುವ,
ಚರ್ಚೆಗೆ ಪೂರಕವಾದ ಯಾವುದಾದರೂ ನಿಗದಿತ ವಿಷಯವೊಂದನ್ನು ಸಂವಾದ
ವೇದಿಕೆಗೆ ಪರಿಗಣಿಸಿ ಪ್ರತೀ ಸಂಚಿಕೆಯಲ್ಲಿ ಪ್ರಕಟಿಸಬಹುದು.
ಬಣ್ಣ-ಬಣ್ಣದ ಚಿತ್ರಗಳನ್ನು, ಆಡಂಬರದ ಪುಟಗಳನ್ನು ಬಳಸದೆ, ಸಂಚಿಕೆಗಳನ್ನು
ಸರಳವಾಗಿ ಹೊರತರುವ ವಿಚಾರ ನಿಜಕ್ಕೂ ಉತ್ತಮ. ಸರಳತೆಯ, ವಿಷಯ
ಶ್ರೀಮಂತಿಕೆಯಿರುವ ವಿಚಾರಗಳು ಎಂದೆಂದಿಗೂ ಮೆಚ್ಚುಗೆಯಾಗುವಂತದ್ದು,
ಮೌಲ್ಯಯುತವಾದದ್ದು. ಮತ್ತೊಮ್ಮೆ ಶುಭಾಷಯಗಳು.


-ಕೇಶವ ಹೆಗ್ಡೆ ಕೊರ್ಸೆ, ವಿಭಾಗ ಮುಖ್ಯಸ್ಥರು, ಔಷಧೀಯ ಸಸ್ಯಶಾಶ್ತ್ರ ವಿಭಾಗ,
ಶ್ರೀ.ಧ.ಮಂ.ಕಾಲೇಜು
ಉಜಿರೆ, ಬೆಳ್ತಂಗಡಿ, ದ.ಕ

*..ನೂಪುರ ಭ್ರಮರಿಯ ಈ ಸಂಚಿಕೆ ಬಹಳ ಚೆನ್ನಾಗಿದೆ. ಅಭಿನಂದನೆಗಳು. ಮುಂದಿನ
ಸಂಚಿಕೆಗಳಲ್ಲಿ ಮುಂತಾಗಿ ಸದಭಿರುಚಿಯ ಚರ್ಚೆಗಳು ಮೂಡಿಬಂದರೆ ಉತ್ತಮ.

– ಮುರಳೀಧರರಾವ್, ನೃತ್ಯಗುರು, ಮಂಗಳೂರು

*..ನೂಪುರ ಭ್ರಮರಿಯ ಮೂಲಕ ನಿಮ್ಮ ಪ್ರಯತ್ನ ಅಭಿನಂದನೀಯ.
ಇಂತಹ ಪತ್ರಿಕೆಗಳೆಂದರೆ ಹೋರಾಟದ ನಿರ್ವಹಣೆಯೇ ಸರಿ.

– ಡಾ| ಎಂ. ಪ್ರಭಾಕರ ಜೋಷಿ
ಯಕ್ಷಗಾನ ವಿದ್ವಾಂಸರು, ಮಂಗಳೂರು.

*ನೂಪುರ ಭ್ರಮರಿಯ ಲೇಖನಗಳು ಉತ್ತಮವಾಗಿ ಮೂಡಿ ಬರುತ್ತಿವೆ. ಕೆಲವು
ಉತ್ತಮ ನುಡಿಗಳನ್ನು ನೂಪುರದಲ್ಲಿ ಓದುತ್ತಿದ್ದೇನೆ. ಈ ಶ್ರಮವು ಸಾಧನೆಗೆ
ಸ್ಫೂರ್ತಿಯಾಗಲಿ. ಕಲಾ ಪ್ರಪಂಚದಲ್ಲಿ ನೂಪುರ ಬೆಳಗಲಿ. ನಿಮ್ಮ ಪ್ರಯತ್ನಕ್ಕೆ ದೇವರು
ಹೆಚ್ಚಿನ ಶಕ್ತಿ ಕೊಡಲಿ. ಹಿರಿಯ ಗುರುಗಳ ಆಶೀರ್ವಾದದಿಂದ ಪತ್ರಿಕೆ ಉತ್ತಮ
ರೀತಿಯಲ್ಲಿ ಮುಂದುವರಿಯಲಿ. ಜೊತೆಗೆ ಹಿರಿಯ-ಕಿರಿಯ ಕಲಾವಿದರಿಗೆ ನಿಮ್ಮ ಚಿಂತನೆ
ಸ್ಫೂರ್ತಿದಾಯಕವಾಲಿ.

– ಡಾ| ಡಿ. ಸರ್ವೋತ್ತಮ ಕಾಮತ್, ನಿರ್ದೇಶಕರು
ಪ್ರಸಾರಾಂಗ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯ.

*ನೃತ್ಯದಲ್ಲಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯ ಕುರಿತಾದ
ವಿಮರ್ಶೆ ತುಂಬಾ ಮಾಹಿತಿಪ್ರದವಾಗಿತ್ತು. ನೇರವಾಗಿ ನಮಗೆಲ್ಲಾ ಹಿರಿಯ ಕಲಾವಿದೆ
ವಸಂತಲಕ್ಷ್ಮಿಯಂತವರ ಆಶೀರ್ವಾದ ಲಭ್ಯವಾಗದಿದ್ದರೂ ಭ್ರಮರಿಯಿಂದಾಗಿ
ಅಂಥವರ ಮಾರ್ಗದರ್ಶನ ಸಿಗುವಂತಿದೆ. ಅದಕ್ಕಾಗಿ ವಿಶೇಷ ಧನ್ಯವಾದಗಳು.

-ಸಿಂಚನ ಮೂರ್ತಿ, ಕುವೆಂಪು ನಗರ, ಶಿವಮೊಗ್ಗ.

*ಭ್ರಮರಿಯ ಲೇಖನಗಳನ್ನು ಓದುವುದು ನಿಜಕ್ಕೂ ಖುಷಿ ಕೊಡುತ್ತದೆ.
ನಿಮ್ಮ ಬರೆವಣಿಗೆಯು ಕ್ರಮಬದ್ಧತೆ, ಸುಂದರ, ವಿದ್ವತ್ತಿನಿಂದ ಕೂಡಿದ್ದು,
ಒಳ್ಳೆಯ ಅಭಿರುಚಿಯುಳ್ಳದ್ದೂ ಆಗಿದೆ. ಭ್ರಮರಿಯ ವಿಷಯ, ಒಳಹೂರಣ
ಅದರ ಆವರಣಕ್ಕೇ ಸಡ್ಡು ಹೊಡೆದು ಮೀರಿ ನಿಂತಿದೆ ಕೂಡಾ! ಶುಭಾಷಯಗಳು
ಮತ್ತು ಭ್ರಮರಿಯ ಯಶಸ್ಸಿಗಾಗಿ ನಮ್ಮ ಶುಭ ಹಾರೈಕೆಗಳು.

-ವಿ| ಶ್ರೀಧರ್, ಅನುರಾಧಾ ಶ್ರೀಧರ್
ನೃತ್ಯ ದಂಪತಿಗಳು, ಚಲನಚಿತ್ರ ಕಲಾವಿದರು
ಖೇಚರ ಅಕಾಡೆಮಿ ಆಫ್ ಭರತನಾಟ್ಯಂ, ಬೆಂಗಳೂರು.

_____________________________________________********

ಸಂಚಿಕೆ ೬, ಸಂಪುಟ ೧

*…ವಂಡರ್‌ಫುಲ್ ! ಸಾಂಸ್ಕೃತಿಕ ನೆಲೆಯಲ್ಲಿ
ಹೊರ ಬರುತ್ತಿರುವ ನೂಪುರ ಭ್ರಮರಿ
ಸಕಾಲಕ್ಕೆ ಬೇಕಾದ ಪತ್ರಿಕೆಯಾಗಿ ಮೂಡಿಬಂದಿದ್ದು,
ಸುಂದರವಾಗಿದೆ. ಪತ್ರಿಕೋದ್ಯಮದ ಕಲಿಕೆ
ಜೊತೆಗಿರುವವರಿಗೆ, ಪತ್ರಿಕೆ ಹೊರತರುವ ಸಾಹಸ ಸಾಮಾನ್ಯವಾದರೂ ನಿಮ್ಮ ಈ
ಪ್ರಯತ್ನ ಮಾತ್ರ ನಿಜಕ್ಕೂ ವಿಶೇಷವೇ ಸರಿ!
…ಹೆಸರೂ ಹೊಸತು, ಪತ್ರಿಕೆಯೂ ಹೊಸತು. ಪತ್ರಿಕೆಯು ನಾಟ್ಯಕ್ಕೆ
ಸಂಬಂಧಪಟ್ಟ ಅನೇಕ ಮಾಹಿತಿಗಳನ್ನು ನೀಡುವ ಮೂಲಕ ಹೊಸ ರೀತಿಯ
ವಿಚಾರಗಳನ್ನು ಪ್ರಸ್ತುತಪಡಿಸುತ್ತಿದೆ. ಉತ್ಸಾಹ, ಪ್ರಯತ್ನ, ಶ್ರದ್ಧೆ ಇವೆಲ್ಲವೂ ಎದ್ದು
ಕಾಣುತ್ತಿದೆ. ನೂಪುರ ಭ್ರಮರಿ ಸದಾ ನಿರಂತರ ಚಲನೆ ಪಡೆಯಲಿ.

– ಶಂಶೀರ್ ಬುಡೋಳಿ
ತೃತೀಯ ಪದವಿ ಪತ್ರಿಕೋದ್ಯಮ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ದ.ಕ.

*ನೂಪುರ ಭ್ರಮರಿಯ ಚರ್ಚೆಯ ವಿಷಯಗಳು, ಮತ್ತು ಮೂಡಿ ಬರುವಂತಹ
ಅಭಿಪ್ರಾಯಗಳು ಆರೋಗ್ಯದಾಯಕವಾಗಿವೆ. ಈ ಪತ್ರಿಕೆ ದಾಖಲೆಗೆ ಯೋಗ್ಯವಾದ
ವಿಷಯಗಳನ್ನು ನೀಡುತ್ತಿದೆ.

– ಕುದ್ಕಾಡಿ ವಿಶ್ವನಾಥ ರೈ
‘ವಿಶ್ವಕಲಾನಿಕೇತನ’, ಪುತ್ತೂರು, ದ.ಕ.

*ಪತ್ರಿಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಾಟ್ಯದ ಬಗ್ಗೆ ಸಾಮಾನ್ಯ
ವೀಕ್ಷಕರಿಗೂ, ಓದುಗರಿಗೂ ಬರೆಯಬೇಕೆನ್ನಿಸುವಷ್ಟು ಪ್ರೇರಣೆ ಸಿಗುತ್ತಿದೆ. ಖುಷಿ
ಆಗ್ತಿದೆ. ಈ ಪ್ರಯತ್ನಕ್ಕೆ ಖಂಡಿತಾ ಯಶಸ್ಸು ಸಿಕ್ಕೇ ಸಿಗುತ್ತದೆ. ನಮ್ಮ ಪ್ರೋತ್ಸಾಹ
ಎಂದೆಂದಿಗೂ ಜೊತೆಗಿದೆ.


– ಪ್ರೀತಮ್ ಕುಮಾರ್ ಕೆಮ್ಮಾಯಿ,
ಕಾರ್ಯಕ್ರಮ ನಿರ್ವಾಹಕರು, ‘ಈ-ಟಿ. ವಿ ಕನ್ನಡ’,
ರಾಮೋಜಿ ರಾವ್ ಫಿಲಂ ಸಿಟಿ, ಹೈದ್ರಾಬಾದ್.

* ಸಿಂಪ್ಲಿ ನೈಸ್ ! ನೂಪುರದ ಒಂದು ಪ್ರತಿಯನ್ನು ವಿದೇಶದಲ್ಲಿರುವ ನನ್ನ
ಗೆಳೆಯರೊಬ್ಬರಿಗೆ ಕಳಿಸಿದೆ. ಒಳ್ಳೆಯ ಪ್ರತಿಕ್ರಿಯೆ ಕೊಟ್ಟರು. ಭ್ರಮರಿಯ ಇಂಗ್ಲೀಷ್
ಆವೃತ್ತಿ ತಂದರೆ ಇನ್ನು ಹೆಚ್ಚು ಮಂದಿಗೆ ತಲುಪುತ್ತದೆ ಎಂಬುದು ಅವರ ಅನಿಸಿಕೆ.
ದಯವಿಟ್ಟು ಆದಷ್ಟು ಬೇಗ ಇಂಗ್ಲೀಷ್ ಆವೃತ್ತಿಯೂ ನಮ್ಮ ಕೈ ಸೇರುವಂತಾಗಲಿ.


-ರಮೇಶ್ ಯಾದವ್,
ಜ್ಞಾನಭಾರತಿ, ಬೆಂಗಳೂರು.

*ಬಹಳ ಉತ್ತಮ ಪ್ರಯತ್ನ. ಬೇರೆ-ಬೇರೆ ಕಲೆಗಳ ಬಗ್ಗೆ ಹೆಚ್ಚು ಅರಿಯುವಲ್ಲಿ ಈ
ಪತ್ರಿಕೆ ದಾರಿದೀಪ. ಕಲೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದನ್ನು
ಉತ್ತುಂಗಕ್ಕೇರಿಸುವ ಈ ಪ್ರಯತ್ನ ಯಾವುದೇ ತೊಡರಿಲ್ಲದೇ ಸಾಗಲಿ.
– ದಾಮೋದರ ದೊಂಡೋಲೆ, ಬೆಂಗಳೂರು

*ನೂಪುರ ಭ್ರಮರಿ – ನಿಜವಾಗಿಯೂ ನರ್ತನ ಜಗತ್ತಿಗೊಂದು ಪರಿಭ್ರಮಣ
ಮಾಡುವ ನಿಸ್ವಾರ್ಥ ಪ್ರಯತ್ನವೆನ್ನಬಹುದು. ಅದರಲ್ಲೂ ತಾವು ನೀಡಿರುವ ಶೀರ್ಷಿಕೆ
ಮಂಜೀರ, ಲೋಕ ಭ್ರಮರಿ, ನರ್ತನ ಸುರಭಿ, ಹಸ್ತ ಮಯೂರಿ, ಅಕ್ಷರ ಭ್ರಮರಿ,
ದರ್ಶನ ಭ್ರಮರಿಗಳ ಕಲ್ಪನೆಯಂತೂ ಅಮೋಘವಾಗಿದೆ. ಅವುಗಳಲ್ಲಿ
ಅಡಕಗೊಂಡಿರುವ ವಿಷಯಗಳೂ ಉತ್ತಮವಾಗಿ ಮೂಡಿ ಬರುತ್ತಿವೆ.
ಮಾನಸಿಕವಾಗಿಯೂ, ದೈಹಿಕವಾಗಿಯೂ ಆಕರ್ಷಿಸುವ ಕಲೆ
ನರ್ತನವಾಗಿದ್ದು, ಅದನ್ನು ಮೂಲ ಕೇಂದ್ರವಾಗಿಟ್ಟುಕೊಂಡು ಪ್ರಕಟಗೊಳ್ಳುವ ಈ
ಪತ್ರಿಕೆಯು ಹಾಗೂ ಸಂಪಾದಕ ಮಂಡಳಿಯು ಅಭಿನಂದನಾರ್ಹವಾಗಿದೆ.
ಕನ್ನಡ ಪತ್ರಿಕೆಯನ್ನು ಅದರಲ್ಲೂ ನರ್ತನ ಮತ್ತು ಅದಕ್ಕೆ ಸಂಬಂಧಪಟ್ಟ
ಇನ್ನಿತರ ಕ್ಷೇತ್ರಗಳ ಬಗ್ಗೆ ವಿಷಯಗಳನ್ನು ಪ್ರಕಟಿಸುವ ತಮ್ಮ ಧೈರ್ಯವನ್ನು
ಮೆಚ್ಚುವಂತಹದ್ದೇ! ಪತ್ರಿಕೆಯ ರೇಖಾ ಚಿತ್ರಗಳು ಆಕರ್ಷಕವಾಗಿವೆ.
ಭವಿಷ್ಯದಲ್ಲೂ ಭಾರತದ ಎಲ್ಲಾ ಪ್ರಕಾರದ ನೃತ್ಯಗಳು ಮತ್ತು ಅದರ ವಿವರ
ಲೇಖನಗಳು ಬರುತ್ತಿರಲಿ ಹಾಗೂ ಅವುಗಳು ನರ್ತನ ಪ್ರಿಯರನ್ನು, ಸಾಮಾನ್ಯ ಜನರನ್ನು
ಮುಟ್ಟಲಿ, ಮನ ತಟ್ಟಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ಶುಭಾಶಯಗಳು.

– ಪ್ರೊ| ವೆಂಕಟೇಶ್ ಎ. ಪೈ, (ಅರ್ಥಶಾಸ್ತ್ರ ಉಪನ್ಯಾಸಕರು)
ಮುಂಬೆಳಕು ಕನ್ನಡ ಬಳಗ, ಡೊಂಬಿವಿಲಿ ಈಸ್ಟ್, ಮುಂಬೈ.

*ಒಳ್ಳೆಯ ಪ್ರಯತ್ನ. ಕಳೆದ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ. ನೃತ್ತ,
ನಾಟ್ಯಕ್ಕೆ ಮೀಸಲಾದ ಪತ್ರಿಕೆಯನ್ನು ಹೊರ ತರುತ್ತಿರುವುದು ಸಂತಸದ ವಿಚಾರ.

– ರಾಧಾಕೃಷ್ಣ ಹೊಳ್ಳ ಎಸ್. ಎಲ್,
ಫಿಲಿಫ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್, ಬೆಂಗಳೂರು.

*ಸಂಚಿಕೆಯಿಂದ ಸಂಚಿಕೆಗೆ ಉತ್ತಮ ಬೆಳವಣಿಗೆಯನ್ನು ಕಾಣುತ್ತಿದ್ದೇನೆ.
ಕೀಪ್ ಇಟ್ ಅಪ್. ಶೀಘ್ರದಲ್ಲೇ ವರ್ಣಮಯವಾಗಿ ನೂಪುರ ಭ್ರಮರಿಯನ್ನು
ಸಿಂಗರಿಸುವಂತಾಗಲಿ. ಪ್ರೋತ್ಸಾಹ, ಹಾರೈಕೆ ಸದಾ ಜೊತೆಯಲ್ಲಿರುತ್ತವೆ. ಗುಡ್ ಲಕ್.

– ವೀಣಾ ಡಿಸೋಜಾ , ಸಾರ್ವಜನಿಕ ಸಂಪರ್ಕಾಧಿಕಾರಿ
ಕೆ ೨ ಕಮ್ಯುನಿಕೇಷನ್, ಬೆಂಗಳೂರು.

______________________________________*******

ಸಂಚಿಕೆ ೧ ಸಂಪುಟ ೨

*ನೂಪುರ ಭ್ರಮರಿ ಪತ್ರಿಕೋದ್ಯಮದಲ್ಲಿ ಹೊಸತು ಹೆಜ್ಜೆ. ಎಲ್ಲಾ ಓದುಗರ
ಆಶೀರ್ವಾದ ನಿಮಗಿರಲಿ. ಪ್ರಯತ್ನದಿಂದಲೇ ಅನುಭವ ಪಡೆಯಬೇಕು. ಇದಕ್ಕೆ
ಬರೆವಣಿಗೆಯಿಂದಲೇ ಸಾಧ್ಯ. ಭಗವಂತನ ಸಂಪೂರ್ಣ ಅನುಗ್ರಹವಿರಲಿ. ಧೈರ್ಯಗುಂದದೆ
ಮುನ್ನಡೆಯಿರಿ. ನಿಮ್ಮ ಗುರಿ ತಲುಪಲಿ.


– ಕೊಂದಲಕಾಡು ನಾರಾಯಣ ಭಟ್
ಸಂಪಾಜೆ, ಕಲ್ಲುಗುಂಡಿ, ಸುಳ್ಯ. ದ.ಕ

*ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ. ನಾಟ್ಯ ಲೋಕದಲ್ಲಿ ಹೊಸ ಪ್ರಯತ್ನ.
ಸಂಚಿಕೆಯಿಂದ ಸಂಚಿಕೆಗೆ ಮತ್ತಷ್ಟು ಉತ್ತಮ ಬೆಳವಣಿಗೆಗಳು
ತೆರೆದುಕೊಳ್ಳುತ್ತಿವೆ. ನಿಜಕ್ಕೂ ಸಂತೋಷ.


-ಗೀತಾ ಬಿಳಿನೆಲೆ, ವರದಿಗಾರರು,
ಟೈಮ್ಸ್ ಆಫ್ ಇಂಡಿಯಾ ಕನ್ನಡ, ಬೆಂಗಳೂರು.

*ಆದರಣಿಯರೇ, ನಿಮಗೆ ನಾನು ಹೇಗೆ ಧನ್ಯವಾದ ಹೇಳಲಿ ? ನಿಮ್ಮ ಸಂಪಾದಕತ್ವದ
ನೂಪುರ ಭ್ರಮರಿ ಅದ್ಭುತವಾಗಿ ಮೂಡಿಬರುತ್ತಿದೆ. ಎಕ್ಸಲೆಂಟ್ !


– ಸುಧೀಂದ್ರ ಕುಲಕರ್ಣಿ, ನವದೆಹಲಿ.

1 Response to ನೂಫುರ ಭ್ಹ್ರಮರಿ ಪತ್ರಿಕೆ ಪ್ರಯೋಗಶೀಲ

  1. Ganesh Bhat

    ನಾನು ಗೆಲ್ಲಬೇಕು…
    ಅಂಥದೊಂದು ಹಠ ಬಂದುಬಿಟ್ಟರೆ- ಕೈ ಇಲ್ಲದವನು ಗಿಟಾರ್ ನುಡಿಸುತ್ತಾನೆ, ಕಾಲಿಲ್ಲದವನು ಈಜಿಯೇ ಸಪ್ತಸಾಗರ ದಾಟುತ್ತಾನೆ, ಮೂಗ ಹಾಡು ಹೇಳುತ್ತಾನೆ, ಅಕ್ಷರದ ಗಂಧವೇ ಇಲ್ಲದವನು ಕಾದಂಬರಿ ಬರೆಯುತ್ತಾನೆ. ಸಣಕಲ, ಠೊಣಪನನ್ನು ಚಿತ್ ಮಾಡುತ್ತಾನೆ. Impossible ಎಂಬ ಪದದೊಳಗೇ possible ಎಂಬುದೂ ಇದೆ. ಹಾಗಾಗಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ… ಇಂಥದೊಂದು ನಿರ್ಧಾರದೊಂದಿಗೆ ಎದ್ದು ನಿಂತವನಿಗೆ-ಆಕಾಶವೊಂದು ಮಿತಿಯಲ್ಲ, ಸಾಗರದ ಆಳ ಲೆಕ್ಕಕ್ಕೇ ಇರುವುದಿಲ್ಲ.
    ಸೋಲನ್ನು ಮೇಲಿಂದ ಮೇಲೆ ಸೋಲಿಸುವ; ಆ ಮೂಲಕ ಗೆಲುವೇ ನಮ್ಮ ಬದುಕು ಎಂದು ಹೆಮ್ಮೆಯಿಂದ ಹೇಳುವ; ತಮ್ಮ ಸಾಧನೆಯಿಂದಲೇ ಹಲವರ ಆದರ್ಶವಾಗುವ ಹೀರೊಗಳು ನಮ್ಮ ಮಧ್ಯೆಯೇ ಇದ್ದಾರೆ…ಅಂತಹ ಮಹಾನ್ ಕಾರ್ಯ ನೂಪುರ ಭ್ರಾಮರಿಯಿಂದ ಮತ್ತು ಮನು ಅಕ್ಕನ ಪ್ರಯತ್ನದಿಂದ ನಡೆಯಲಿ ಎಂದು ನಾನು ಆಶಿಸುತ್ತೇನೆ.

Leave a Reply

*

code