ಅಂಕಣಗಳು

Subscribe


 

ನೀವೂ ಬರೆಯಿರಿ.. ಈ ಚರ್ಚೆಯಲ್ಲಿ ಪಾಲ್ಗೊಳ್ಳಿ

Posted On: Tuesday, December 15th, 2015
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಹಿರಿಯ ನೃತ್ಯ ವಿದ್ವಾಂಸರೊಬ್ಬರು ತಮ್ಮ ಅಭಿಪ್ರಾಯವೊಂದನ್ನು ಮುಂದಿಟ್ಟು
ತಿಂಗಳ ಚರ್ಚೆಗಾಗಿ ಅಂಗಳಕ್ಕೆ ಆಹ್ವಾನ ನೀಡಿದ್ದಾರೆ. ಜನರು ಇದನ್ನು ಯೋಚಿಸಿ ಅವರದೇ
ಆದ ಅಭಿಪ್ರಾಯಗಳನ್ನಿತ್ತರೆ ಕಲೆಗೆ ಒಳ್ಳೆಯದು; ಯೋಚನೆಗೂ ಒಳ್ಳೆಯದು ಎಂಬುದು
ಅವರ ಅನಿಸಿಕೆ. ಕಲಾಗಾರರಲ್ಲಿಯೂ ತಮ್ಮತನವೆಂಬುದು ಈ ಮೂಲಕ
ಪ್ರಕಾಶವಾದೀತಲ್ಲವೇ ಎಂಬುದೂ ಅವರ ಪ್ರಶ್ನೆ ಮತ್ತು ಕಳಕಳಿ.
ಇಂತಹ ಸಂವಾದಗಳು, ಪಂಥಾಹ್ವಾನಗಳು ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು
ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ
ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು
ವ್ಯಕ್ತಪಡಿಸಬಹುದು. ಈ ಬಾರಿಯ ಪ್ರಶ್ನೆಗಳು…!
೧. ಹೆಚ್ಚಿನ ನೃತ್ಯಶಿಕ್ಷಕರು ಅಥವಾ ನರ್ತಕಿಯರು cd ಅಥವಾ ಕ್ಯಾಸೆಟ್
ಇತ್ಯಾದಿಗಳನ್ನು ನೋಡಿ ಭರತನಾಟ್ಯ ಕಲಿಸುತ್ತಿದ್ದಾರೆ. ಕಲಿಯುತ್ತಿದ್ದಾರೆ !; ತಮ್ಮದಾದ
ಶೈಲಿ ಅವರಲ್ಲಿಲ್ಲ. ಇದರಿಂದ ಗುರುಗಳೆನಿಸಿದವರಿಗೆ ಲಾಭವೋ?ನಷ್ಟವೋ?
೨. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಭಾಭವನಗಳು ಒಂದು ಸಭೆಗೆ ಮಾತ್ರ
ಉತ್ತಮವೆನಿಸುತ್ತದೆ. ಇದು ದಕ್ಷಿಣಕನ್ನಡದ ಮಾತಷ್ಟೆ ಅಲ್ಲ. ಕೊಡಗು ಮತ್ತು ಮಲೆನಾಡು
ಪ್ರದೇಶಗಳೂ ಇದಕ್ಕೆ ಹೊರತಲ್ಲ. ಇಲ್ಲಿ ಭರತನಾಟ್ಯವನ್ನು ಕಾಣುವ ಸಹೃದಯರು
ಪಾತ್ರಧಾರಿಯ ಮನಸ್ಸಿನ ಸ್ಥಿತಿ, ಭಾವಿಸುವಂತಹ ಅನುಭವಗಳನ್ನು ಕಾಣದೆ ಬರಿಯ
ಬಾಹ್ಯಸೌಂದರ್ಯವನ್ನಷ್ಟೆ ನೋಡಿ ಒಳ್ಳೆಯದು- ಕೆಟ್ಟದ್ದು, ಚೆನ್ನಾಗಿದೆ-ಚೆನ್ನಾಗಿಲ್ಲ
ಎನ್ನುತ್ತಾರೆ. ನಟ-ನಟಿಯರ ಆಂತರಂಗಿಕ ಕಲೆಯನ್ನು ದೂರದಿಂದ ನೋಡಿ ತಿಳಿವ
ಪ್ರಯತ್ನವೂ, ಅವಕಾಶವೂ ಇರುವುದಿಲ್ಲ. ಮುಖಭಾವದ ವಿವಿಧ ಸಂಚಾರಗಳು ಅವರಿಗೆ
ಅಗತ್ಯವಿಲ್ಲದಂತಿದೆ. ಜೊತೆಗೆ ಹಾಡಿನ ಒಳಾರ್ಥವನ್ನೂ ತಿಳಿಯದೆ ದೇಹಸೌಂದರ್ಯವೇ
ಮುಖ್ಯವೆನಿಸಿದೆ. ಹಾಗಾದರೆ ಮುಂದಿನ ಪ್ರದರ್ಶನಗಳಲ್ಲಿ ಸಂಚಾರಿ ಭಾವಗಳು (ವಿವರವಾದ
ಅಭಿನಯ) ಬೇಕೇ ಅಥವಾ ಬೇಡವೇ?

ನೃತ್ಯಾಭ್ಯಾಸವನ್ನು ಮಾಡುವ ಹಲವು ಹುಡುಗ-ಹುಡುಗಿಯರು ಒಂದು
ಮಾತು ಹೇಳುವುದಿದೆ… ‘ಕಡಿಮೆಯೆಂದ್ರೂ ಹತ್ತು -ಹದಿನೈದು ವರ್ಷಗಳಿಂದ ಡ್ಯಾನ್ಸ್
ಕಲೀತಿದ್ದೇವೆ, ಪ್ರೋಗ್ರಾಂ ಕೂಡಾ ಕೊಟ್ಟಿದ್ದೇವೆ.’ ಹಾಗಾದರೆ ಇವೆಲ್ಲದರನ್ನೂ ಕಲಿತೂ
ಅವರೆಲ್ಲಾ ಮುಖ್ಯ ಕಲಾವಿದರು ಅಂತ ಹೇಳಿಕೊಳ್ಳುವ ಮಟ್ಟಕ್ಕೆ ಏಕೆ ಬರುವುದಿಲ್ಲ?

ಶಾಲಾ ವ್ಯಾಸಂಗಕ್ಕೆ ಕೊಟ್ಟಷ್ಟೂ ಮಹತ್ವ ಭರತನಾಟ್ಯಕ್ಕೂ ನೀಡುತ್ತಾರೆ ಎಂದಾದಲ್ಲಿ
ಕಲೆಯಲ್ಲಿ ಉನ್ನತ ವ್ಯಾಸಂಗ ಮಾಡಲು ಏಕೆ ಹಿಂದೇಟು ಹಾಕುತ್ತಾರೆ? ಹಾಗಾದರೆ
ನೃತ್ಯ ಕಲಿಯುವುದಾದರೂ ಯಾಕೆ? ಪ್ರಸಿದ್ಧಿಗೋ? ಲಾಭಕ್ಕೋ? ಅಥವಾ ಕಲೆಯ
ಮೇಲಿನ ಆಸಕ್ತಿಗೋ?

ಸಂಚಿಕೆ ೩ ಸಂಪುಟ ೨

ಇಂದಿನ ಸ್ಥಿತಿಯಲ್ಲಿ ನರ್ತನಕಲೆಯಲ್ಲಿ
ಆಂಗಿಕಾಭಿನಯ (ಅಂಗಗಳ ಚಲನೆಯಿಂದಾಗುವ
ಅಭಿನಯ) ಮತ್ತು ಆಹಾರ್ಯಭಿನಯ(ವೇಷಭೂಶಣ, ಅಲಂಕಾರ) ಮುಖ್ಯವೆನಿಸಿಕೊಂಡಿದೆ.
ಅಬ್ಬರದ, ತಾಳ-ಲಯಗಳಿಲ್ಲದ, ಸಂಗೀತವೇ ವಾಚಿಕಾಭಿನಯ
ಎನಿಸಿಕೊಳ್ಳುತ್ತಿದೆ. ಸಾತ್ವಿಕಾಭಿನಯ ಮರೆಯಾಗುತ್ತಿದೆ. ಇಂತಹ ಸ್ಥಿತಿಯನ್ನು
ನಾವೇನೆಂದು ಕರೆಯೋಣ? ಭರತನಾಟ್ಯವೆಂಬುದು ಬರಿಯ ಚಲನೆ ಮತ್ತು
ಆಹಾರ್ಯಗಳಿಂದ ಒಡಗೂಡಿದ ನೃತ್ಯವೇ? ಇದಕ್ಕೆ ಅಂಟಿದ ಹಾಸ್ಯಾಸ್ಪದ ದೃಷ್ಠಿ
ಬದಲಾಗುವುದೆಂತು ?

…ತಡವೇಕೆ ಮತ್ತೆ? ತೆರೆದಿಡಿ ನಿಮ್ಮ ಮನದ ಮಾತಿನ ಲಹರಿಗಳನ್ನು
ನಮ್ಮ ಅಂಗಳಕ್ಕೆ…

Leave a Reply

*

code