ಅಂಕಣಗಳು

Subscribe


 

ಚೆಂದದ ಗಂಧದ ಗೊಂಬೆಯ ರೀತಿಯಲ್ಲಿ ಆವಿಷ್ಕಾರ ಹೊಂದಿದೆ ನೂಪುರ

Posted On: Saturday, December 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಕಾಸರಗೋಡು.

 ಬಲೆ ಬೀಸುವ ಕಲೆಯ ನೆಲೆ ಬೆಲೆಯೆಂಬ ನಿವೇದಿತಾ ಶ್ರೀನಿವಾಸ್ ಅವರು ನೀಡಿದ ನರ್ತನ ಸುರಭಿಯ ಬರಹ ಗಮನ ಸೆಳೆಯುವಿಕೆಯಲ್ಲಿ ಹಿಂದುಳಿಯಲಿಲ್ಲ. ಚೆಂದದ ಗಂಧದ ಗೊಂಬೆಯ ರೀತಿಯಲ್ಲಿ ಆವಿಷ್ಕಾರ ಹೊಂದಿದ ಈ ಚಿಂತನಾರ್ಹವಾದ ಲೇಖನ ಬೆಲೆ ಕಟ್ಟಲನರ್ಹವಾದ ಸ್ವಾನುಭವದ ವಿಚಾರವೆಂದು ತಳ್ಳಿಬಿಡುವಂತಹ ಸಣ್ಣತನದ್ದೂ ಅಲ್ಲ.

ಯಾವುದೇ ಕಲೆಯಾದರೂ ಪರಿಣತಿ, ಪರಿಪೂರ್ಣತಾವಾದ ಮೂಡಬೇಕಾದರೆ ಆತನ ಕಲಿಕೆಗಿಂತಲೂ ಆಸಕ್ತಿ, ಮನೆತನದ ಪೂರ್ವ ಹಿಡಿತ ಒಳಗೊಂಡಿರಬೇಕು ಎನ್ನುವುದೇ ಮುಖ್ಯ. ಇಷ್ಟಕ್ಕೂ ಲೇಖಕಿ ವ್ಯಾಖ್ಯಾನಪಡಿಸಿದ ವಿಚಾರದತ್ತ ಹೊರಳಿದರೆ ಉದಾತ್ತೀಕರಿಸಿದಂತೆ ಮಂತ್ರವೊಂದರ ಅಭಾಸಕರ ನಿಯಮಾವಳಿಗಳು ಯಕ್ಷಿಣಿ ವಿದ್ಯೆ, ಇಂದ್ರಜಾಲಗಳಲ್ಲಿವೆ. ಅಂತಹವು ಕಲೆಯೆಂದು ಪರಿಗಣಿಸಲು ಸಾಧ್ಯವೆಂಬ ಅಬ್ಬರದ ಹೂಂಕಾರಗಳೇನಿದ್ದರೂ ಲೋಕೋಭಿನ್ನರುಚಿಃ ಎಂಬ ಆರ್ಯೋಕ್ತಿಯಂತೆ ಮೇಲಿನ ರಂಗಭೂಮಿ ತಜ್ಞರಿಗೆ ಸರಿಯೆಂದು ಕಂಡಿರಬಹುದು. ಆದರೆ ನಿರಂತರ ತಪೋಭಾವನೆಯಿಂದ ಕಲಿತು ಕೈವಶಪಡಿಸಿಕೊಂಡ ಕಲಾಚಟುವಟಿಕೆಗಳೆಲ್ಲವೂ ಶಾಶ್ವತವಾಗಿ ಕಲೆಯೆಂದೇ ಎಣಿಸಲ್ಪಡುತ್ತವೆಯಲ್ಲದೆ; ಇಂದ್ರಜಾಲವಿದ್ಯೆ ಕಲೆಯಲ್ಲವೆಂಬುದೇ ಎಂದೇ ನನ್ನೊಡಲ ಅನಿಸಿಕೆ. ಒಂದರ್ಥದಲ್ಲಿ ಕಲಾರಂಗಗಳೆಲ್ಲವೂ ಭಾರತೀಯ ಪುರಾತನ ಕಲೆಗಳತ್ತ ಕಣ್ಣೋಡಿಸಿ ಮೆಲ್ಲನೆ ಮೇಲೆದ್ದು ಗಮನಹರಿಸಿ ಮನಕೊಡಲಾರಂಭಿಸುತ್ತಿರುವ ಈ ಪರ್ವಕಾಲದಲ್ಲಿ ಭಿನ್ನತೆಯ ಮನೋಭಾವ ಬಿಟ್ಟುಕೊಟ್ಟು, ಕಲೆಗಳೆಲ್ಲವನ್ನೂ ಪ್ರೋತ್ಸಾಹಿಸುವ ವಾತಾವರಣಕ್ಕೊಂದು ನಿವೇದಿತಾರವರ ಬರೆಹ ನಾಂದಿಯೆನಿಸಲ್ಪಡಲಿ ಎಂಬ ಹಾರೈಕೆಯೊಂದಿಗೆ ಶುಭಕಾಮನೆಗಳು.

Leave a Reply

*

code